ನಾಳೆ ಸಿಲಿಕಾನ್ ಸಿಟಿಯಲ್ಲಿ 144 ಸೆಕ್ಷನ್ ಜಾರಿ..

ಬೆಂಗಳೂರು: ನಾಳೆ ಅಯೋಧ್ಯೆಯಲ್ಲಿ ರಾಮಮಂದಿರ ಶಂಕುಸ್ಥಾಪನೆಯ ಹಿನ್ನೆಲೆಯಿಂದಾಗಿ ನಗರದಲ್ಲಿ ಯಾವುದೇ ಅಹಿತಕರ ಘಟನೆ ನಡೆಯಬಾರದೆಂದು 144 ಸೆಕ್ಷನ್ ಜಾರಿ ಮಾಡಲಾಗಿದೆ. ನಾಳೆ ಬೆಂಗಳೂರಿನಲ್ಲಿ ಯಾವುದೇ ಅಹಿತಕರ ಘಟನೆ ನಡೆಯಬಾರದೆಂದು ಖಾಕಿಯ ಸರ್ಪಗಾವಲನ್ನು ರಚಿಸಿದ್ದು, ಎಲ್ಲಾ ಠಾಣಾ ವ್ಯಾಪ್ತಿಯಲ್ಲಿ ಹೆಚ್ಚುವರಿ ಭದ್ರತೆ ಮಾಡಲಾಗಿದೆ. ಜೊತೆಗೆ ನಗರದ ಗಲ್ಲಿಗಲ್ಲಿಯಲ್ಲಿ ಗರುಡ ಪಡೆ ಗಸ್ತು ತಿರುಗಲಿದ್ದು, ಕಾನೂನುಬಾಹಿರ ಚಟುವಟಿಕೆಯಲ್ಲಿ ತೊಡಗುವವರು ಭಾರಿ ದಂಡ ತೆರಬೇಕಾಗುತ್ತದೆ. ಹೆಚ್ಚುವರಿ ಭದ್ರತೆಗಾಗಿ 60ಕ್ಕಿಂತಲೂ ಹೆಚ್ಚು KSRP ತುಕಡಿಯನ್ನು ನಗರದಲ್ಲಿ ನಿಯೋಜನೆ ಮಾಡಲಾಗುತ್ತದೆ ಎಂದು ನಗರದ ಹೆಚ್ಚುವರಿ […]

ನಾಳೆ ಸಿಲಿಕಾನ್ ಸಿಟಿಯಲ್ಲಿ 144 ಸೆಕ್ಷನ್ ಜಾರಿ..

Updated on: Aug 04, 2020 | 7:13 PM

ಬೆಂಗಳೂರು: ನಾಳೆ ಅಯೋಧ್ಯೆಯಲ್ಲಿ ರಾಮಮಂದಿರ ಶಂಕುಸ್ಥಾಪನೆಯ ಹಿನ್ನೆಲೆಯಿಂದಾಗಿ ನಗರದಲ್ಲಿ ಯಾವುದೇ ಅಹಿತಕರ ಘಟನೆ ನಡೆಯಬಾರದೆಂದು 144 ಸೆಕ್ಷನ್ ಜಾರಿ ಮಾಡಲಾಗಿದೆ.

ನಾಳೆ ಬೆಂಗಳೂರಿನಲ್ಲಿ ಯಾವುದೇ ಅಹಿತಕರ ಘಟನೆ ನಡೆಯಬಾರದೆಂದು ಖಾಕಿಯ ಸರ್ಪಗಾವಲನ್ನು ರಚಿಸಿದ್ದು, ಎಲ್ಲಾ ಠಾಣಾ ವ್ಯಾಪ್ತಿಯಲ್ಲಿ ಹೆಚ್ಚುವರಿ ಭದ್ರತೆ ಮಾಡಲಾಗಿದೆ. ಜೊತೆಗೆ ನಗರದ ಗಲ್ಲಿಗಲ್ಲಿಯಲ್ಲಿ ಗರುಡ ಪಡೆ ಗಸ್ತು ತಿರುಗಲಿದ್ದು, ಕಾನೂನುಬಾಹಿರ ಚಟುವಟಿಕೆಯಲ್ಲಿ ತೊಡಗುವವರು ಭಾರಿ ದಂಡ ತೆರಬೇಕಾಗುತ್ತದೆ.

ಹೆಚ್ಚುವರಿ ಭದ್ರತೆಗಾಗಿ 60ಕ್ಕಿಂತಲೂ ಹೆಚ್ಚು KSRP ತುಕಡಿಯನ್ನು ನಗರದಲ್ಲಿ ನಿಯೋಜನೆ ಮಾಡಲಾಗುತ್ತದೆ ಎಂದು ನಗರದ ಹೆಚ್ಚುವರಿ ಪೊಲೀಸ್ ಆಯುಕ್ತ ಸೌಮೆಂದು ಮುಖರ್ಜಿ ತಿಳಿಸಿದ್ದಾರೆ.