AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೇವಲ ಎರಡೇ ತಿಂಗಳಲ್ಲಿ ಬಡವನಿಂದ ಕೋಟಿಗಳ ಒಡೆಯನಾದ ‘ರತ್ನತ್ರಯ’ ಗಣಿಗಾರ

ಕೇವಲ ಎರಡೇ ತಿಂಗಳಲ್ಲಿ ಕೋಟಿಗಳ ಒಡೆಯನಾದ ತಾಂಜಾನಿಯಾದ ಗಣಿಗಾರ ಸನಿನಿಯೂ ಲೈಸರ್​ನ ( Saniniu Laizer) ಅಚ್ಚರಿಯ ಕಥೆಯಿದು. ತನ್ನ ಪುಟ್ಟ ಗಣಿಯಲ್ಲಿ ಸಿಕ್ಕ ಮೂರು ಹರಳುಗಳನ್ನ ಮಾರಿ ರಾತ್ರೋರಾತ್ರಿ ಕೋಟ್ಯಾಧಿಪತಿಯಾಗಿದ್ದಾನೆ. ಅಂದ ಹಾಗೆ, ಆಫ್ರಿಕಾದ ಪೂರ್ವ ಭಾಗದಲ್ಲಿರುವ ತಾಂಜಾನಿಯ ಇಡೀ ಜಗತ್ತಿನಲ್ಲೇ ಅಪರೂಪವಾದ ಹರಳಿಗೆ ತವರೂರಾಗಿದೆ. ವಿಶ್ವದಾದ್ಯಂತ ಬಹುಬೇಡಿಕೆ ಇರುವ ಈ ವಿರಳವಾದ ರತ್ನವು ಇದೀಗ ಆಭರಣಗಳ ಅವಿಭಾಜ್ಯ ಅಂಗವಾಗಿಬಿಟ್ಟಿದೆ. ಹಾಗಾಗಿ, ತಾಂಜಾನೈಟ್​ ಸ್ಟೋನ್​ (Tanzanite stone) ಎಂದೇ ಕರೆಯಲಾಗುವ ಈ ಹರಳು ಕೋಟಿಗಳ ಮೊತ್ತಕ್ಕೆ […]

ಕೇವಲ ಎರಡೇ ತಿಂಗಳಲ್ಲಿ ಬಡವನಿಂದ ಕೋಟಿಗಳ ಒಡೆಯನಾದ ‘ರತ್ನತ್ರಯ’ ಗಣಿಗಾರ
KUSHAL V
|

Updated on: Aug 04, 2020 | 7:23 PM

Share

ಕೇವಲ ಎರಡೇ ತಿಂಗಳಲ್ಲಿ ಕೋಟಿಗಳ ಒಡೆಯನಾದ ತಾಂಜಾನಿಯಾದ ಗಣಿಗಾರ ಸನಿನಿಯೂ ಲೈಸರ್​ನ ( Saniniu Laizer) ಅಚ್ಚರಿಯ ಕಥೆಯಿದು. ತನ್ನ ಪುಟ್ಟ ಗಣಿಯಲ್ಲಿ ಸಿಕ್ಕ ಮೂರು ಹರಳುಗಳನ್ನ ಮಾರಿ ರಾತ್ರೋರಾತ್ರಿ ಕೋಟ್ಯಾಧಿಪತಿಯಾಗಿದ್ದಾನೆ.

ಅಂದ ಹಾಗೆ, ಆಫ್ರಿಕಾದ ಪೂರ್ವ ಭಾಗದಲ್ಲಿರುವ ತಾಂಜಾನಿಯ ಇಡೀ ಜಗತ್ತಿನಲ್ಲೇ ಅಪರೂಪವಾದ ಹರಳಿಗೆ ತವರೂರಾಗಿದೆ. ವಿಶ್ವದಾದ್ಯಂತ ಬಹುಬೇಡಿಕೆ ಇರುವ ಈ ವಿರಳವಾದ ರತ್ನವು ಇದೀಗ ಆಭರಣಗಳ ಅವಿಭಾಜ್ಯ ಅಂಗವಾಗಿಬಿಟ್ಟಿದೆ. ಹಾಗಾಗಿ, ತಾಂಜಾನೈಟ್​ ಸ್ಟೋನ್​ (Tanzanite stone) ಎಂದೇ ಕರೆಯಲಾಗುವ ಈ ಹರಳು ಕೋಟಿಗಳ ಮೊತ್ತಕ್ಕೆ ಮಾರಾಟವಾಗುತ್ತದೆ.

ಅಂತೆಯೇ, ಕಳೆದ ಜೂನ್​ನಲ್ಲಿ ತನ್ನ ಗಣಿಯಲ್ಲಿ ಸಿಕ್ಕ ಬರೋಬ್ಬರಿ 10 ಕೆಜಿ ಹಾಗೂ 5 ಕೆಜಿ ತೂಕದ ಎರಡು ತಾಂಜಾನೈಟ್​ ಸ್ಟೋನ್​ಗಳನ್ನ ಮಾರಿ ಸನಿನಿಯೂ 3.35 ಮಿಲಿಯನ್​ ಡಾಲರ್​ (25 ಕೋಟಿ ರೂ.) ಗಳಿಸಿದ್ದಾನೆ. ಇದೀಗ, 6ಕೆಜಿ ತೂಕದ ಮತ್ತೊಂದು ಹರಳು ಸನಿನಿಯೂಗೆ ಸಿಕ್ಕಿದ್ದು ಬರೋಬ್ಬರಿ 2 ಮಿಲಿಯನ್​ ಡಾಲರ್​ಗೆ​ (15 ಕೋಟಿ ರೂ.) ಮಾರಾಟ ಮಾಡಿದ್ದಾನೆ. ಈ ಮೂಲಕ ಕೋಟಿಗಳ ಒಡೆಯನಾಗಿದ್ದಾನೆ.

ಆದರೆ, ಅಚ್ಚರಿಯ ಸಂಗತಿಯೆಂದರೆ ಸನಿನಿಯೂ ಬಂದ ಹಣವನ್ನ ತನ್ನ ಊರು ಹಾಗೂ ಜನರ ಏಳಿಗೆಗಾಗಿ ಬಳಸಲು ಮುಂದಾಗಿದ್ದಾನೆ. ಈಗಾಗಲೇ, ಮಕ್ಕಳಿಗೆ ಎರಡು ಶಾಲೆಗಳನ್ನ ಕಟ್ಟಿಸಿಕೊಟ್ಟಿದ್ದಾನೆ. ತನ್ನ ಜೀವನಶೈಲಿಯನ್ನ ಬದಲಿಸದೆ ಜನಸಾಮಾನ್ಯರಲ್ಲಿ ಒಬ್ಬನಂತೆ ಬದುಕಲು ಮುಂದಾಗಿದ್ದಾನೆ. ದುಡ್ಡು ಸಿಕ್ಕ ಕೂಡಲೇ ಅರ್ಧರಾತ್ರಿಯಲ್ಲಿ ಕೊಡೆ ಹಿಡಿಯುವವರ ಸಂಖ್ಯೆಯೇ ಹೆಚ್ಚಿರುವ ಇಂದಿನ ಕಾಲಘಟ್ಟದಲ್ಲಿ ಸನಿನಿಯೂ ನಿಜಕ್ಕೂ gem of a person!

ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್