ಹೇಗಿದೆ ನೋಡಿ ಹೊಸ ಮಾರುತಿ ಸುಜುಕಿ ಸ್ವಿಫ್ಟ್​ ಫೇಸ್​ಲಿಫ್ಟ್; ಆರಂಭಿಕ ಬೆಲೆ 5.73 ಲಕ್ಷ ರೂಪಾಯಿ

| Updated By: Digi Tech Desk

Updated on: Feb 24, 2021 | 3:14 PM

2021 Maruti Suzuki Swift ಮಾರುತಿ ಸುಜುಕಿ ಕಂಪೆನಿಯು ಮಧ್ಯಮ ವರ್ಗದವರನ್ನು ಗಮನದಲ್ಲಿಟ್ಟುಕೊಂಡು ಕಾರುಗಳನ್ನು ಸಿದ್ಧಪಡಿಸುತ್ತದೆ. ಇದೇ ಕಾರಣಕ್ಕೆ ಭಾರತದಲ್ಲಿ ಈ ಸಂಸ್ಥೆ ಬಹುಬೇಗನೆ ಜನಪ್ರಿಯತೆ ಪಡೆದುಕೊಂಡಿದೆ.

ಹೇಗಿದೆ ನೋಡಿ ಹೊಸ ಮಾರುತಿ ಸುಜುಕಿ ಸ್ವಿಫ್ಟ್​ ಫೇಸ್​ಲಿಫ್ಟ್; ಆರಂಭಿಕ ಬೆಲೆ 5.73 ಲಕ್ಷ ರೂಪಾಯಿ
ಸಾಂದರ್ಭಿಕ ಚಿತ್ರ
Follow us on

ಭಾರತದ ಖ್ಯಾತ ಆಟೋ ಮೊಬೈಲ್​ ಕಂಪೆನಿ ಮಾರುತಿ ಸುಜುಕಿ 2021ರ ಹೊಸ ಸ್ವಿಫ್ಟ್​ಅನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಈ ಸ್ವಿಫ್ಟ್​ನ ಆರಂಭಿಕ ಬೆಲೆ 5.73 ಲಕ್ಷ ರೂಪಾಯಿ ಇದ್ದು, ಹೈ ಎಂಡ್​ ಮಾಡೆಲ್​ ಬೆಲೆ 8.41 ಲಕ್ಷ ರೂಪಾಯಿ ಆಗಿದೆ. ಈ ಮೊದಲ ಮಾಡೆಲ್​ನ ಸ್ವಿಫ್ಟ್​ಗಿಂತ 2021ರ ಮಾಡೆಲ್​ನ ಸ್ವಿಫ್ಟ್​ ಭಿನ್ನವಾಗಿದೆ. ಕಾರಿನ ಮುಂಭಾಗದ ಗ್ರಿಲ್​ ಪ್ಯಾಟರ್ನ್​ ಕೂಡ ಬದಲಾಗಿದೆ. ಈ ಮಾಡೆಲ್ ಮೂರು ಬಣ್ಣಗಳಲ್ಲಿ ಹಾಗೂ ಐದು ವಿಧಗಳಲ್ಲಿ ಮಾರುಕಟ್ಟೆಗೆ ಲಗ್ಗೆ ಇಡಲಿವೆ.

ಭಿನ್ನತೆ         –          1.2 ಎಲ್ ಎಂಟಿ                                     -1.2 ಎಲ್ ಎಎಂಟಿ
ಸ್ವಿಫ್ಟ್​ Lxi               ₹5.73 ಲಕ್ಷ                                                        NA
ಸ್ವಿಫ್ಟ್ VXi              ₹6.36 ಲಕ್ಷ                                                  ₹6.86 ಲಕ್ಷ
ಸ್ವಿಫ್ಟ್ Zxi              ₹6.99 ಲಕ್ಷ                                                  ₹ 7.49 ಲಕ್ಷ
ಸ್ವಿಫ್ಟ್ ZXi+           ₹. 7.77 ಲಕ್ಷ                                                ₹ 8.27 ಲಕ್ಷ
ಸ್ವಿಫ್ಟ್ ZXi+ Dual Tone  ₹7.91 ಲಕ್ಷ                                        ₹8.41 ಲಕ್ಷ

ಮಾರುತಿ ಸುಜುಕಿ ಕಂಪೆನಿಯವರು ಈ ಬಾರಿ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಿದೆ. ಮಾರುತಿ ಸುಜುಕಿ ಕಂಪೆನಿಯು ಮಧ್ಯಮ ವರ್ಗದವರನ್ನು ಗಮನದಲ್ಲಿಟ್ಟುಕೊಂಡು ಕಾರುಗಳನ್ನು ಸಿದ್ಧಪಡಿಸುತ್ತದೆ. ಇದೇ ಕಾರಣಕ್ಕೆ ಭಾರತದಲ್ಲಿ ಈ ಸಂಸ್ಥೆ ಬಹುಬೇಗನೆ ಜನಪ್ರಿಯತೆ ಪಡೆದುಕೊಂಡಿದೆ. ಸ್ವಿಫ್ಟ್​ ಕೂಡ ಕಡಿಮೆ ಬೆಲೆಗೆ ಹೆಚ್ಚು ಫೀಚರ್​ಗಳೊಂದಿಗೆ ಲಭ್ಯವಾಗುತ್ತಿರುವುದರಿಂದ ಈ ಮಾಡೆಲ್​ಗೆ ಬೇಡಿಕೆ ಹೆಚ್ಚಿದೆ.

ಇದನ್ನೂ ಓದಿ: ರಾಷ್ಟ್ರೀಯ ಹೆದ್ದಾರಿಗಳ ಟೋಲ್​ ಲೇನ್​ಗಳಲ್ಲಿ ಬಣ್ಣದ ರೇಖೆ ಎಳೆಯಲು ಪ್ರಾಧಿಕಾರ ನಿರ್ಧಾರ; ವಾಹನಗಳ ಸಾಲು ಆ ಲೈನ್​ ಮುಟ್ಟಿದರೆ ಶುಲ್ಕವೇ ಇಲ್ಲ!

 

Published On - 3:05 pm, Wed, 24 February 21