2021 Renault Triber: ಮಧ್ಯಮ ವರ್ಗಕ್ಕೆ ಹೇಳಿಮಾಡಿಸಿದಂತಿದೆ ಹೊಸ ರೆನಾಲ್ಟ್ ಟ್ರೈಬರ್! ಬೆಲೆ ಎಷ್ಟು ಗೊತ್ತಾ?
ಟ್ರೈಬರ್ ಸಾಕಷ್ಟು ಬಣ್ಣಗಳಲ್ಲಿ ಮಾರುಕಟ್ಟೆಯಲ್ಲಿ ಲಭ್ಯವಿದೆ. ಇದಕ್ಕೆ ಈಗ ಕೇಡರ್ ಬ್ರೌನ್ ಬಣ್ಣ ಕೂಡ ಹೊಸ ಸೇರ್ಪಡೆ. ಇನ್ನು, ಹೊಸ ಟ್ರೈಬರ್ಗೆ ಸಾಕಷ್ಟು ಹೊಸ ಹೊಸ ಫೀಚರ್ಗಳನ್ನು ನೀಡಲಾಗಿದೆ.
ಭಾರತದ ಒಟ್ಟೂ ಜನಸಂಖ್ಯೆಯಲ್ಲಿ ಮಧ್ಯಮವರ್ಗದವರ ಸಂಖ್ಯೆ ದೊಡ್ಡದಿದೆ. ಹೀಗಾಗಿ ವಾಹನ ತಯಾರಿಕಾ ಸಂಸ್ಥೆಗಳು ಇದನ್ನು ಗಮನದಲ್ಲಿಟ್ಟುಕೊಂಡೇ ಬೈಕ್ ಹಾಗೂ ಕಾರುಗಳನ್ನು ಸಿದ್ಧಪಡಿಸುತ್ತಿವೆ. ಮಾರುತಿ ಸುಜುಕಿ ಸೇರಿ ಸಾಕಷ್ಟು ಕಂಪೆನಿಗಳು ಕಡಿಮೆ ದರದ ಕಾರುಗಳನ್ನು ಮಾರುಕಟ್ಟೆಗೆ ಪರಿಚಯಿಸಿವೆ. ಫ್ರೆಂಚ್ ಕಾರು ತಯಾರಿಕಾ ಸಂಸ್ಥೆ ರೆನಾಲ್ಟ್ ಕೂಡ ಇದರಲ್ಲಿ ಹಿಂದೆ ಬಿದ್ದಿಲ್ಲ. ಭಾರತದ ಜನರ ಅಭಿರುಚಿಗೆ ತಕ್ಕಂತೆ ವಾಹನಗಳನ್ನು ರೆನಾಲ್ಟ್ ತಯಾರಿಸುತ್ತಿದೆ. ಈಗ ರೆನಾಲ್ಟ್ ಸಂಸ್ಥೆ 2021ರ ಟ್ರೈಬರ್ ಮಾಡೆಲ್ ಅನ್ನು ಪರಿಚಯಿಸಿದೆ. 5.30 ಲಕ್ಷ ರೂಪಾಯಿ (ಎಕ್ಸ್ ಶೋರೂಂ ಬೆಲೆ) ಇದರ ಆರಂಭಿಕ ಬೆಲೆ ಆಗಿದ್ದು, ಗರಿಷ್ಠ ಮೊತ್ತ 7.82 ಲಕ್ಷ ರೂಪಾಯಿ (ಎಕ್ಸ್ ಶೋರೂಂ ಬೆಲೆ) ಇದೆ. ಹೊಸ ಮಾಡೆಲ್ ಪರಿಚಯ ಮಾಡಿಸಿದಾಗ ಬೆಲೆಯಲ್ಲಿ ಏರಿಕೆ ಆಗೋದು ಸಾಮಾನ್ಯ. ಅದೇ ರೀತಿ ಹೊಸ ಟ್ರೈಬರ್ ಬೆಲೆಯೂ ಏರಿಕೆ ಆಗಿದೆ. ಕಾರಿನ ಬಣ್ಣ ಹಾಗೂ ಫೀಚರ್ಗಳನ್ನು ಆಧರಿಸಿ 10,000-15,000 ರೂಪಾಯಿವರೆಗೆ ಏರಿಕೆ ಮಾಡಲಾಗಿದೆ.
ಟ್ರೈಬರ್ ಸಾಕಷ್ಟು ಬಣ್ಣಗಳಲ್ಲಿ ಮಾರುಕಟ್ಟೆಯಲ್ಲಿ ಲಭ್ಯವಿದೆ. ಇದಕ್ಕೆ ಈಗ ಕೇಡರ್ ಬ್ರೌನ್ ಬಣ್ಣ ಕೂಡ ಹೊಸ ಸೇರ್ಪಡೆ. ಇನ್ನು, ಹೊಸ ಟ್ರೈಬರ್ಗೆ ಸಾಕಷ್ಟು ಹೊಸ ಹೊಸ ಫೀಚರ್ಗಳನ್ನು ನೀಡಲಾಗಿದೆ. ಸೈಡ್ ಮಿರರ್ಗಳಿಗೆ ಎಲ್ಇಡಿ ಇಂಡಿಕೇಟರ್ ಲೈಟ್ ನೀಡಲಾಗಿದೆ. ಸ್ಟಿಯರಿಂಗ್ ಮೇಲೆ ಆಡಿಯೋ ನಿಯಂತ್ರಣ ಮಾಡುವ ಆಯ್ಕೆಯನ್ನು ನೀಡಿರುವುದು ವಿಶೇಷ. ತಾಂತ್ರಿಕವಾಗಿ ಕಾರಿನಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. 999 ಸಿಸಿ ಇಂಜಿನ್ ಈ ಕಾರಿನಲ್ಲಿದೆ. ಪ್ರತಿ ಲೀಟರ್ಗೆ 19 ಕಿಲೋ ಮೀಟರ್ ಮೈಲೇಜ್ ಇದು ನೀಡಲಿದೆ.
*2021 ರೆನಾಲ್ಟ್ ಟ್ರೈಬರ್ ಬೆಲೆ (ಎಕ್ಸ್ ಶೋರೂಂಗಳಲ್ಲಿ) *2021 ರೆನಾಲ್ಟ್ ಟ್ರೈಬರ್ RXE – 5.30 ಲಕ್ಷ ರೂಪಾಯಿ *2021 ರೆನಾಲ್ಟ್ ಟ್ರೈಬರ್ RXL – 6 ಲಕ್ಷ ರೂಪಾಯಿ *2021 ರೆನಾಲ್ಟ್ ಟ್ರೈಬರ್ RXL AMT – 6.50 ಲಕ್ಷ ರೂಪಾಯಿ *2021 ರೆನಾಲ್ಟ್ ಟ್ರೈಬರ್ RXT – 6.55 ಲಕ್ಷ ರೂಪಾಯಿ *2021 ರೆನಾಲ್ಟ್ ಟ್ರೈಬರ್ RXT AMT – 7.05 ಲಕ್ಷ ರೂಪಾಯಿ *2021 ರೆನಾಲ್ಟ್ ಟ್ರೈಬರ್ RXZ – 7.15 ಲಕ್ಷ ರೂಪಾಯಿ *2021 ರೆನಾಲ್ಟ್ ಟ್ರೈಬರ್ RXZ Dual-tone – 7.32 ಲಕ್ಷ ರೂಪಾಯಿ *2021 ರೆನಾಲ್ಟ್ ಟ್ರೈಬರ್ RXZ AMT – 7.65 ಲಕ್ಷ ರೂಪಾಯಿ *2021 ರೆನಾಲ್ಟ್ ಟ್ರೈಬರ್ RXZ AMT Dual-tone – 7.82 ಲಕ್ಷ ರೂಪಾಯಿ
ಇದನ್ನೂ ಓದಿ: ಹೇಗಿದೆ ನೋಡಿ ಹೊಸ ಮಾರುತಿ ಸುಜುಕಿ ಸ್ವಿಫ್ಟ್ ಫೇಸ್ಲಿಫ್ಟ್; ಆರಂಭಿಕ ಬೆಲೆ 5.73 ಲಕ್ಷ ರೂಪಾಯಿ