ಕೊವಿಡ್-19: ರಾಜ್ಯದಲ್ಲಿಂದು 21 ಸಾವು ಮತ್ತು 1,791 ಹೊಸ ಪಾಸಿಟಿವ್ ಪ್ರಕರಣಗಳು | 21 Covid-19 related deaths and 1,791 new cases in Karnataka today
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಬುಧವಾರ ಸಾಯಂಕಾಲ ದೊರೆತಿರುವ ಮಾಹಿತಿ ಅನ್ವಯ, ರಾಜ್ಯದಲ್ಲಿಂದು ಕೊರೊನಾ ಸೋಂಕಿನಿಂದ 21 ಜನ ಮೃತಪಟ್ಟಿದ್ದಾರೆ ಮತ್ತು ಹೊಸದಾಗಿ 1,791 ಜನರಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ. ರಾಜ್ಯದಲ್ಲಿ ಈವರೆಗೆ ಕೊವಿಡ್-19 ವ್ಯಾಧಿಯಿಂದ 11,578 ಜನ ಮರಣಿಸಿದ್ದು ಒಟ್ಟು ಸೋಂಕಿತರ ಸಂಖ್ಯೆ 8,65,931 ತಲುಪಿದೆ. ಸೋಂಕಿತರ ಪೈಕಿ 8,29,188 ಜನ ಗುಣಮುಖರಾಗಿದ್ದಾರೆ ಹಾಗೂ ಮಿಕ್ಕಿದ 25,146 ಸೋಂಕಿತರಿಗೆ ನಿಗದಿತ ಕೊವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಹಾಗೆಯೇ, ಬೆಂಗಳೂರಿನಲ್ಲಿ ಇಂದು ಕೊರೊನಾ ಸೋಂಕಿಗೆ 10 […]

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಬುಧವಾರ ಸಾಯಂಕಾಲ ದೊರೆತಿರುವ ಮಾಹಿತಿ ಅನ್ವಯ, ರಾಜ್ಯದಲ್ಲಿಂದು ಕೊರೊನಾ ಸೋಂಕಿನಿಂದ 21 ಜನ ಮೃತಪಟ್ಟಿದ್ದಾರೆ ಮತ್ತು ಹೊಸದಾಗಿ 1,791 ಜನರಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ. ರಾಜ್ಯದಲ್ಲಿ ಈವರೆಗೆ ಕೊವಿಡ್-19 ವ್ಯಾಧಿಯಿಂದ 11,578 ಜನ ಮರಣಿಸಿದ್ದು ಒಟ್ಟು ಸೋಂಕಿತರ ಸಂಖ್ಯೆ 8,65,931 ತಲುಪಿದೆ.
ಸೋಂಕಿತರ ಪೈಕಿ 8,29,188 ಜನ ಗುಣಮುಖರಾಗಿದ್ದಾರೆ ಹಾಗೂ ಮಿಕ್ಕಿದ 25,146 ಸೋಂಕಿತರಿಗೆ ನಿಗದಿತ ಕೊವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಹಾಗೆಯೇ, ಬೆಂಗಳೂರಿನಲ್ಲಿ ಇಂದು ಕೊರೊನಾ ಸೋಂಕಿಗೆ 10 ಜನ ಬಲಿಯಾಗಿದ್ದಾರೆ ಮತ್ತು ಇಂದು ಒಂದೇ ದಿನ 933 ಜನರಲ್ಲಿ ಸೋಂಕು ಪತ್ತೆಯಾಗಿದೆ. ನಗರದಲ್ಲಿ ಕೊರೊನಾ ಸೋಂಕಿನಿಂದ ಈವರೆಗೆ 4,028 ಜನ ಸತ್ತಿದ್ದು ಸೋಂಕು ಪೀಡಿತರ ಸಂಖ್ಯೆ 3,59,539ಕ್ಕೇರಿದೆ.
ಸೋಂಕಿತರ ಪೈಕಿ 3,37,807 ಜನ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ ಮತ್ತು ಉಳಿದ 17,703 ಸೋಂಕಿತರಿಗೆ ಕೊವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಮುಂದುವರಿಸಲಾಗಿದೆಯೆಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಲಭ್ಯವಾಗಿರುವ ಮಾಹಿತಿ ತಿಳಿಸುತ್ತದೆ.
Published On - 10:20 pm, Wed, 18 November 20




