ವಿದ್ಯುತ್ ತಂತಿ ಸ್ಪರ್ಶಿಸಿ ಮೂವರು ಸ್ಥಳದಲ್ಲೇ ದುರ್ಮರಣ

ಮೈಸೂರು: ವಿದ್ಯುತ್ ತಂತಿ ಸ್ಪರ್ಶಿಸಿ ಮೂವರು ಸ್ಥಳದಲ್ಲೇ ಮೃತಪಟ್ಟಿರುವ ದುರ್ಘಟನೆ ಹೊಸಹಳ್ಳಿ ಗ್ರಾಮದ ಬಳಿ ನಡೆದಿದೆ. ಲಾರಿಗೆ ಅಡ್ಡವಿದ್ದ ವಿದ್ಯುತ್ ತಂತಿ ಸರಿಸುವಾಗ ಘಟನೆ ಸಂಭವಿಸಿದೆ. ಮಹದೇವ ನಾಯಕ, ಮಹದೇವಸ್ವಾಮಿ, ತೇಜು ಮೃತ ದುರ್ದೈವಿಗಳು. ಮೃತರು ಟಿ.ನರಸೀಪುರ ತಾಲೂಕಿನ ಹೊಸಪುರ ಗ್ರಾಮದ ನಿವಾಸಿಗಳು. ಜೋಳದ ಕಡ್ಡಿ ತುಂಬಿಸಿಕೊಂಡು ಹೋಗುವಾಗ ಲಾರಿಗೆ ವಿದ್ಯುತ್ ತಂತಿ ಅಡ್ಡ ಬಂದಿದೆ. ಅದನ್ನು ಮೇಲಕ್ಕೆ ಸರಿಸುವಾಗ ವಿದ್ಯುತ್ ತಂತಿ ಸ್ಪರ್ಶಿಸಿ ಮೃತಪಟ್ಟಿದ್ದಾರೆ. ವರುಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ವಿದ್ಯುತ್ ತಂತಿ ಸ್ಪರ್ಶಿಸಿ ಮೂವರು ಸ್ಥಳದಲ್ಲೇ ದುರ್ಮರಣ

Updated on: May 22, 2020 | 12:45 PM

ಮೈಸೂರು: ವಿದ್ಯುತ್ ತಂತಿ ಸ್ಪರ್ಶಿಸಿ ಮೂವರು ಸ್ಥಳದಲ್ಲೇ ಮೃತಪಟ್ಟಿರುವ ದುರ್ಘಟನೆ ಹೊಸಹಳ್ಳಿ ಗ್ರಾಮದ ಬಳಿ ನಡೆದಿದೆ. ಲಾರಿಗೆ ಅಡ್ಡವಿದ್ದ ವಿದ್ಯುತ್ ತಂತಿ ಸರಿಸುವಾಗ ಘಟನೆ ಸಂಭವಿಸಿದೆ. ಮಹದೇವ ನಾಯಕ, ಮಹದೇವಸ್ವಾಮಿ, ತೇಜು ಮೃತ ದುರ್ದೈವಿಗಳು.

ಮೃತರು ಟಿ.ನರಸೀಪುರ ತಾಲೂಕಿನ ಹೊಸಪುರ ಗ್ರಾಮದ ನಿವಾಸಿಗಳು. ಜೋಳದ ಕಡ್ಡಿ ತುಂಬಿಸಿಕೊಂಡು ಹೋಗುವಾಗ ಲಾರಿಗೆ ವಿದ್ಯುತ್ ತಂತಿ ಅಡ್ಡ ಬಂದಿದೆ. ಅದನ್ನು ಮೇಲಕ್ಕೆ ಸರಿಸುವಾಗ ವಿದ್ಯುತ್ ತಂತಿ ಸ್ಪರ್ಶಿಸಿ ಮೃತಪಟ್ಟಿದ್ದಾರೆ. ವರುಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

Published On - 7:56 am, Fri, 22 May 20