ರೋಗ ಲಕ್ಷಣ ಇದ್ರಷ್ಟೇ ಕೊರೊನಾ ಟೆಸ್ಟಿಂಗ್! ಹೊಸ ಗೈಡ್‌ಲೈನ್ಸ್
ಬೆಂಗಳೂರು: ಮಹಾಮಾರಿ ಕೊರೊನಾ ಬಗ್ಗೆ ಆರಂಭದಲ್ಲಿ ಇದ್ದ ಆತಂಕ, ಭಯ ಇದೀಗ ಆರೋಗ್ಯ ಇಲಾಖೆಗೆ ಇಲ್ವಾ ಅನ್ನೋ ಪ್ರಶ್ನೆ ಕಾಡ್ತಿದೆ. ಯಾಕಂದ್ರೆ ಸರ್ಕಾರ ಇದೀಗ ಫ್ರೀಡೌನ್ ಮಾಡಿರೋದ್ರಿಂದ ಇರೋ ಬರೋರಿಗೆಲ್ಲಾ ಸೋಂಕು ವಕ್ಕರಿಸುತ್ತಿದೆ. ಆದ್ರೀಗ ಸರ್ಕಾರ ಮತ್ತೊಂದು ಹೆಜ್ಜೆ ಇಟ್ಟಿದ್ದು ಇದ್ರಿಂದ ಮತ್ತಷ್ಟು ಸೋಂಕು ಸ್ಫೋಟಗೊಳ್ಳೋ ಸಾಧ್ಯತೆ ಇದೆ. ಗರ್ಭಿಣಿಯರಿಗೆ ಕಡ್ಡಾಯ ಪರೀಕ್ಷೆಗೆ ಹೊಸ ಗೈಡ್‌ಲೈನ್! ಯೆಸ್.. ಕೊರೊನಾ ರೋಗಿಗಳನ್ನ ಪತ್ತೆ ಹಚ್ಚೋಕೆ ಸರ್ಕಾರದಿಂದ ಹೊಸ ಗೈಡ್‌ಲೈನ್ ಬಿಡುಗಡೆಯಾಗಿದೆ. ರೋಗದ ಗುಣ ಲಕ್ಷಣಗಳು ಇರೋರಿಗೆ ಮಾತ್ರ ಕೂಡಲೇ […]
ಬೆಂಗಳೂರು: ಮಹಾಮಾರಿ ಕೊರೊನಾ ಬಗ್ಗೆ ಆರಂಭದಲ್ಲಿ ಇದ್ದ ಆತಂಕ, ಭಯ ಇದೀಗ ಆರೋಗ್ಯ ಇಲಾಖೆಗೆ ಇಲ್ವಾ ಅನ್ನೋ ಪ್ರಶ್ನೆ ಕಾಡ್ತಿದೆ. ಯಾಕಂದ್ರೆ ಸರ್ಕಾರ ಇದೀಗ ಫ್ರೀಡೌನ್ ಮಾಡಿರೋದ್ರಿಂದ ಇರೋ ಬರೋರಿಗೆಲ್ಲಾ ಸೋಂಕು ವಕ್ಕರಿಸುತ್ತಿದೆ. ಆದ್ರೀಗ ಸರ್ಕಾರ ಮತ್ತೊಂದು ಹೆಜ್ಜೆ ಇಟ್ಟಿದ್ದು ಇದ್ರಿಂದ ಮತ್ತಷ್ಟು ಸೋಂಕು ಸ್ಫೋಟಗೊಳ್ಳೋ ಸಾಧ್ಯತೆ ಇದೆ.
ಗರ್ಭಿಣಿಯರಿಗೆ ಕಡ್ಡಾಯ ಪರೀಕ್ಷೆಗೆ ಹೊಸ ಗೈಡ್‌ಲೈನ್! ಯೆಸ್.. ಕೊರೊನಾ ರೋಗಿಗಳನ್ನ ಪತ್ತೆ ಹಚ್ಚೋಕೆ ಸರ್ಕಾರದಿಂದ ಹೊಸ ಗೈಡ್‌ಲೈನ್ ಬಿಡುಗಡೆಯಾಗಿದೆ. ರೋಗದ ಗುಣ ಲಕ್ಷಣಗಳು ಇರೋರಿಗೆ ಮಾತ್ರ ಕೂಡಲೇ ಥ್ರೋಟ್ ಸ್ವ್ಯಾಬ್ ಟೆಸ್ಟ್ ಮಾಡಬೇಕು ಅಂತ ಗೈಡ್‌ಲೈನ್ಸ್ ಕೊಟ್ಟಿದೆ. ಯಾಱರಿಗೆ ಪರೀಕ್ಷೆ ನಡೆಸಬೇಕು. ಹೇಗೆ ಅನ್ನೋದ್ರ ಬಗ್ಗೆ ಲ್ಯಾಬ್ ಟೆಸ್ಟಿಂಗ್ ಸೆಂಟರ್‌ಗೆ ಮಾರ್ಗಸೂಚಿ ನೀಡಲಾಗಿದೆ.
ಟೆಸ್ಟಿಂಗ್ ನ್ಯೂ ಗೈಡ್‌ಲೈನ್ಸ್! ಈಗಾಗ್ಲೇ ಬೇರೆ ಬೇರೆ ಕಾಯಿಲೆಗಳಿಂದ ಬಳಲುತ್ತಿರೋ ಹಾಗೂ ಗರ್ಭಿಣಿಯರು ಕೂಡ ಜ್ವರ, ನೆಗಡಿ, ಕೆಮ್ಮು ಅಂತ ಬಂದ್ರೆ ಕೂಡ್ಲೇ ಗಂಟಲು ದ್ರವ ಟೆಸ್ಟಿಂಗ್ ಮಾಡ್ಬೇಕು. ಕಂಟೇನ್ಮೆಂಟ್ ಜೋನ್, ಬಫರ್ ಜೋನ್‌ಗಳಿಂದ ಬರೋ ಸೋಂಕಿತರ ಪ್ರಾಥಮಿಕ ಸಂಪರ್ಕಿತರನ್ನ ಕೂಡಲೇ ಟೆಸ್ಟ್ ಮಾಡ್ಬೇಕು.
ಗರ್ಭಿಣಿಯರ ಡೆಲಿವರಿ ಡೇಟ್ 14 ದಿನಗಳಿದೆ ಅನ್ನೋ ಟೈಮ್‌ನಲ್ಲಿ ಒಮ್ಮೆ ಟೆಸ್ಟ್ ಕಡ್ಡಾಯವಾಗಿ ಮಾಡಬೇಕು. ಉಳಿದಂತೆ ಕಂಟೇನ್ಮೆಂಟ್ ಹೊರತುಪಡಿಸಿ ಬೇರೆ ಏರಿಯಾಗಳ ಸೋಂಕಿತರ ಸಂಪರ್ಕದಲ್ಲಿದ್ದ ಎಲ್ಲರಿಗೂ ಟೆಸ್ಟ್ ಅವಶ್ಯಕತೆ ಇಲ್ಲ. ಸೋಂಕಿನ ಗುಣಲಕ್ಷಣಗಳು ಇದ್ರೆ ಮಾತ್ರ ತಕ್ಷಣಕ್ಕೆ ಟೆಸ್ಟಿಂಗ್‌ಗೆ ಕಳುಹಿಸಬೇಕು. ಸೋಂಕಿನ ಲಕ್ಷಣ ಇಲ್ಲದವರನ್ನ 5 ರಿಂದ 10 ದಿನಗಳ ಮಧ್ಯೆ ಒಮ್ಮೆ ಟೆಸ್ಟ್ ಮಾಡಬೇಕು. ಹೆಲ್ತ್ ವರ್ಕರ್ಸ್ ಹಾಗೂ ಫ್ರಂಟ್ ಲೈನ್ ವರ್ಕರ್ಸ್‌ಗೆ ಲಕ್ಷಣಗಳಿದ್ದರೆ ಕೂಡಲೇ ಟೆಸ್ಟ್ ಮಾಡಬೇಕು. ಇಲ್ಲದಿದ್ರೆ ಅವರಿಗೆ ಟೆಸ್ಟ್ ಮಾಡುವ ಅವಶ್ಯಕತೆ ಇಲ್ಲ ಅಂತ ಸರ್ಕಾರದಿಂದ ಲ್ಯಾಬ್ ಟೆಸ್ಟ್‌ಗಳಿಗೆ ಹೊಸ ಗೈಡ್‌ಲೈನ್ ನೀಡಿದೆ.
ಅಂತರ್ ಜಿಲ್ಲಾ ಪ್ರಯಾಣಿಕರಿಗೆ ಫುಲ್ ಫ್ರೀಡಂ! ಇನ್ನು ಸ್ಕ್ರೀನಿಂಗ್ ವಿಚಾರಕ್ಕೆ ಸಂಬಂಧಿಸಿದಂತೆ ಆರೋಗ್ಯ ಇಲಾಖೆ ಹೊಸ ಸುತ್ತೋಲೆ ಹೊರಡಿಸಿದ್ದು, ಅಂತರ್ ಜಿಲ್ಲಾ ಚೆಕ್‌ಪೋಸ್ಟ್‌ಗಳಲ್ಲಿ ಯಾವುದೇ ಚೆಕಿಂಗ್ ಇರೋದಿಲ್ಲ. ಅಸಿಂಪ್ಟಾಮ್ಯಾಟಿಕ್ ರೋಗಿಗಳಿಗೆ ಚೆಕಿಂಗ್ ಮಾಡೋದಿಲ್ಲ. ಕೇವಲ ರೋಗದ ಲಕ್ಷಣ ಇರೋರಿಗೆ ಮಾತ್ರ ಪ್ರಯಾಣಿಸುವ ಬಸ್, ರೈಲುಗಳಲ್ಲಿ ಮಾತ್ರ ಚೆಕ್ ಮಾಡ್ಬೇಕು. ರೋಗದ ಲಕ್ಷಣ ಕಂಡುಬಂದ್ರೆ ಬಸ್, ರೈಲುಗಳಲ್ಲಿ ಕರೆದೊಯ್ಯದೆ ಆರೋಗ್ಯ ಇಲಾಖೆಗೆ ತಿಳಿಸಬೇಕು. ಅಂಥವರನ್ನ ಫೀವರ್ ಕ್ಲಿನಿಕ್‌ಗಳಲ್ಲಿ ಚಿಕಿತ್ಸೆ ಕೊಡಿಸಿ, ಅವಶ್ಯಕತೆ ಇದ್ರೆ ಕೊರೊನಾ ಆಸ್ಪತ್ರೆಗೆ ರವಾನೆ ಮಾಡಲಿದೆ. ಸ್ವಂತ ವಾಹನಗಳಲ್ಲಿ ಪ್ರಯಾಣಿಸುವವರಿಗೆ ಎಲ್ಲೂ ಸ್ಕ್ರೀನಿಂಗ್ ಮಾಡುವುದಿಲ್ಲ.
ಒಟ್ನಲ್ಲಿ ಕೊರೊನಾ ವಿಚಾರದಲ್ಲಿ ಲಾಕ್‌ಡೌನ್ ಸಡಿಲಿಕೆಯಂತೆ ಆರೋಗ್ಯ ಇಲಾಖೆ ಕೂಡ ಕೊರೊನಾ ಬಗ್ಗೆ ಕೇರ್‌ಲೆಸ್ ಮಾಡ್ತಿದ್ದು, ಇದು ಮುಂದಿನ ದಿನಗಳಲ್ಲಿ ಮತ್ತಷ್ಟು ಗಂಡಾಂತರವನ್ನ ರಾಜ್ಯಕ್ಕೆ ತರೋದಂತೂ ಸುಳ್ಳಲ್ಲ.
Published On - 7:02 am, Fri, 22 May 20