Horoscope Today 16 August: ಇಂದು ಈ ರಾಶಿಯವರಿಗೆ ಬೇಕಾದ ಸಹಕಾರ ಯಾರಿಂದಲೂ ಸಿಗದು
ಶಾಲಿವಾಹನ ಶಕವರ್ಷ 1948ರ ಉತ್ತರಾಯಣ, ವರ್ಷ ಋತುವಿನ ಶ್ರಾವಣ ಮಾಸ ಕೃಷ್ಣ ಪಕ್ಷದ ಅಷ್ಟಮೀ ತಿಥಿ ಶನಿವಾರ ಭವಿಷ್ಯ ಮಾರ್ಗದರ್ಶನ, ಹಿರಿಯ ಸೇವೆ, ಅನ್ಯರ ಮೇಲೆ ಕರುಣೆ, ಅರಣ್ಯರ ರೋದನ, ಹಳೆಯ ಘಟನೆಯ ಸ್ಮರಣೆ, ಆದಾಯದಲ್ಲಿ ವಂಚನೆ ಇವೆಲ್ಲ ಇಂದಿನ ಭವಿಷ್ಯ.

ನಿತ್ಯ ಪಂಚಾಂಗ: ಶಾಲಿವಾಹನ ಶಕೆ ೧೯೪೮ರ ವಿಶ್ವಾವಸು ಸಂವತ್ಸರದ ದಕ್ಷಿಣಾಯನ, ಋತು: ವರ್ಷ, ಚಾಂದ್ರ ಮಾಸ : ಶ್ರಾವಣ, ಸೌರ ಮಾಸ: ಕರ್ಕಾಟಕ, ಮಹಾನಕ್ಷತ್ರ: ಆಶ್ಲೇಷಾ, ವಾರ: ಶನಿ, ತಿಥಿ: ಅಷ್ಟಮೀ, ನಿತ್ಯನಕ್ಷತ್ರ : ಕೃತ್ತಿಕಾ, ಯೋಗ: ಶೂಲ, ಕರಣ: ಭದ್ರ, ಸೂರ್ಯೋದಯ – 06 : 20 am, ಸೂರ್ಯಾಸ್ತ – 06 : 53 pm, ಇಂದಿನ ಶುಭಾಶುಭ ಕಾಲ: ರಾಹು ಕಾಲ 09:28 – 11:03 ಗುಳಿಕ ಕಾಲ 06:20 – 07:54 ಯಮಗಂಡ ಕಾಲ 14:11 – 15:45
ಮೇಷ ರಾಶಿ: ಖ್ಯಾತಿಗಾಗಿ ಏನನ್ನೂ ಮಾಡದೇ ಸಹಜವಾಗಿ ಕರ್ತವ್ಯವನ್ನು ಮಾಡುವುದು ಉತ್ತಮ. ಮಕ್ಕಳ ಭವಿಷ್ಯಕ್ಕೆ ಸಂಪತ್ತು ಮಾಡುವ ಯೋಚನೆ ಬರುವುದು. ನಿಮ್ಮದಾದ ಕೆಲಸಗಳನ್ನು ಇಂದು ಬಾಕಿ ಉಳಿಸಿಕೊಳ್ಳುವುದು ಬೇಡ. ಉದ್ಯಮಕ್ಕೆ ಸಂಬಂಧಿಸಿದ ನಿರ್ಧಾರಗಳನ್ನು ನೀವು ಒಬ್ಬರೇ ತೆಗೆದುಕೊಳ್ಳಬೇಡಿ. ಹಳೆಯ ನೋವುಗಳು ಕಾಣಿಸಿಕೊಳ್ಳಬಹುದು. ವಾದವು ಸಂಘರ್ಷವಾಗಿ ಬದಲಾಗಲಿದೆ. ಸೂಕ್ತ ಚಿಕಿತ್ಸೆ ಅವಶ್ಯಕ. ಯಾರನ್ನೂ ನೀವು ನಿಮಗಿಂತ ಕೆಳಗೆಂದು ಭಾವಿಸುವುದು ಬೇಡ. ನಿಮ್ಮ ವರ್ತನೆಯಿಂದ ನಿಮ್ಮನ್ನು ನೋಡುವ ವ್ಯಕ್ತಿತ್ವ ಬದಲಾಗಬಹುದು. ತೆರೆಮರೆಯಲ್ಲಿ ಇದ್ದರೆ, ಇಂದು ಹೊರಾಂಗಣಕ್ಕೆ ಬರಬಹುದು. ನಿಮ್ಮ ಆಪ್ತರೇ ನಿಮ್ಮನ್ನು ಗುರುತಿಸದಾಗದೇ ಇರಬಹುದು. ನೀವಾಡುವ ಸತ್ಯವಾದ ಮಾತಿನಿಂದ ಸಂಕಟವಾಗಬಹುದು. ಇಂದು ತಕ್ಕಮಟ್ಟಿನ ನೆಮ್ಮದಿ ಇರುತ್ತದೆ. ನಿಮಗೇ ಗೊತ್ತಿಲ್ಲದೇ ಅನಾರೋಗ್ಯವು ಸರಿಯಾಗುವುದು. ಸಣ್ಣ ಮಟ್ಟಿನ ಗೌರವಕ್ಕೆ ಪಾತ್ರರಾಗುವಿರಿ. ಧಾರ್ಮಿಕ ಕಾರ್ಯದಲ್ಲಿ ಆಸಕ್ತಿಯು ಹೆಚ್ಚಾಗುವುದು. ಯಾರಾದರೂ ತಮ್ಮ ಕಾರ್ಯವನ್ನು ಮಾಡಲು ಒತ್ತಾಯಿಸಬಹುದು.
ವೃಷಭ ರಾಶಿ: ಹೆತ್ತವರಿಗೆ ಕೊಟ್ಟ ನೋವನ್ನು ಸೇವೆಯ ಮೂಲಕ ಪರಿಹರಿಸಿಕೊಳ್ಳಬೇಕಾಗುವುದು. ಹಿರಿಯರ ಮೇಲಿನ ಪ್ರೀತಿಯಿಂದ ನೀವು ಸೇವೆ ಮಾಡುವಿರಿ. ವಿದ್ಯಾರ್ಥಿಗಳು ವಿದ್ಯಾಭ್ಯಾಸಕ್ಕೆ ಆಲಸ್ಯತನವನ್ನು ತೋರಿಸುವರು. ನಿಮ್ಮ ಆಲೋಚನೆಗಳು ನಕಾರಾತ್ಮಕವಾಗಿ ಇರಲಿದೆ. ನೀವು ಇಂದು ಕುಲದೇವರ ದರ್ಶನಕ್ಕೆ ತೆರಳಲಿದ್ದೀರಿ. ನಿಮ್ಮ ಆಸಕ್ತಿಯ ಕೆಲಸವನ್ನು ಇಂದು ಮಾಡಲಾಗದೇ ಇದ್ದೀತು. ನಿಕ್ಷೇಪವಾಗಿ ಕೊಟ್ಟ ವಸ್ತುವನ್ನು ಪಡೆಯಲು ಸಾಧ್ಯವಾಗದು. ಆಪ್ತರ ಅನಾರೋಗ್ಯಕ್ಕೆ ನೀವು ಸಹಾಯ ಮಾಡುವಿರಿ. ಅಧಿಕಾರವನ್ನು ಯಾವುದೋ ರೀತಿಯಲ್ಲಿ ದುರುಪಯೋಗ ಮಾಡಿಕೊಳ್ಳಬಹುದು. ನಿಮ್ಮನ್ನು ನಂಬಿದವರಿಗೆ ಸಹಾಯವನ್ನು ಮಾಡಲು ಇಚ್ಛಿಸುವಿರಿ. ಪ್ರಶಾಂತ ಮನಸ್ಸಿಗೆ ಸಣ್ಣದೊಂದು ಕಲ್ಲು ಬೀಳಬಹುದು. ಸಹೋದರರ ನಡುವೆ ಕಲಹಗಳು ಆಗುವ ಸಾಧ್ಯತೆ ಇದೆ, ಎಚ್ಚರ. ನಿಮ್ಮನ್ನೇ ಹೋಲುವಂತಹವರು ನಿಮಗೆ ಸಿಗಬಹುದು. ಹೊಸದನ್ನು ಕಲಿಯಲು ಮತ್ತು ನಿಮ್ಮ ಸಾಮರ್ಥ್ಯಗಳನ್ನು ಅಭಿವೃದ್ಧಿಪಡಿಸಲು ಏನನ್ನಾದರೂ ಮಾಡುವುದು ಉತ್ತಮ. ಉದ್ಯಮವು ಸಕ್ರಿಯವಾಗಿದ್ದು ವಿಸ್ತರಿಸುವ ಯೋಚನೆ ಮಾಡುವಿರಿ.
ಮಿಥುನ ರಾಶಿ: ಮೌಢ್ಯವನ್ನು ಬೆಳೆಸಿಕೊಂಡು ಮನಸ್ಸು ಹಾಳಾಗಲಿದೆ. ಹಣವು ತಿರುಗಿ ಬರುವುದು ನಿಮಗೆ ಸಮಾಧಾನ ತರಲಿದೆ. ಯಾರದೋ ಆಡಿದ ಮಾತಿನಿಂದ ನೀವು ನಿಮ್ಮವರನ್ನು ಕಳೆದುಕೊಳ್ಳಬಹುದು. ನೀವು ಮಾಡಲು ಹೊರಟ ಕೆಲಸಕ್ಕೆ ಹಿತಶತ್ರುಗಳಿಂದಲೇ ತೊಂದರೆಯಾಗಬಹುದು. ಪರರು ಕೇಳಿದ ಸಹಾಯವನ್ನು ಮಾಡಿ. ಸರ್ಕಾರಿ ಕಾರ್ಯಕ್ಕೆ ನಿಮಗೆ ಅವಕಾಶಗಳು ಸಿಗದೇ ಹೋಗಬಹುದು. ಉನ್ನತ ವಿದ್ಯಾಭ್ಯಾಸಕ್ಕೆ ಮನೆಯಿಂದ ದೂರವಿರುವಿರಿ. ಸ್ನೇಹಿತರು ನಿಮ್ಮನ್ನು ಅನ್ಯ ಮಾರ್ಗಕ್ಕೆ ಕೊಂಡಯ್ಯಬಹುದು. ಅನಾರೋಗ್ಯದಿಂದ ಆದಾಯಿಲ್ಲದೇಹೋಗುವುದು. ಎಚ್ಚರಿಕೆಯಿಂದ ಇರುವುದು ಒಳ್ಳೆಯದು. ಸ್ತ್ರೀಯರು ಆದಷ್ಟು ಜಾಗರೂಕತೆಯಿಂದ ಇರುವುದು ಒಳ್ಳೆಯದು. ಯಾರಿಗೂ ಆಗದ್ದನ್ನು ನೀವು ಮಾಡಿ ಸೈ ಎನಿಸಿಕೊಳ್ಳುವಿರಿ. ತಿಳಿವಳಿಕೆ ಇಲ್ಲದೇ ಕಾರ್ಯವನ್ನು ಮಾಡಿ ಕೈ ಸುಟ್ಟುಕೊಳ್ಳಬೇಡಿ. ದೂರದ ಪ್ರಯಾಣಕ್ಕೆ ನೀವು ಮೊದಲು ಮಾನಸಿಕ ಸಿದ್ಧತೆಯನ್ನು ಮಾಡಿಕೊಳ್ಳುವಿರಿ. ಇಂದಿನ ದಿನವನ್ನು ಆನಂದಿಸಲು, ಜವಾಬ್ದಾರಿಯ ಕೆಲಸಗಳನ್ನು ಪೂರೈಸುವತ್ತ ಗಮನವಿರಲಿ.
ಕರ್ಕಾಟಕ ರಾಶಿ: ಸಂಗಾತಿಯ ಜೊತೆಗಿನ ಬಾಂಧವ್ಯ ಹದತಪ್ಪಬಹುದು. ಹಳೆಯ ಪ್ರೀತಿಯಿಂದ ನಿಮಗೆ ಕಷ್ಟವಾದೀತು. ಸಾಹಿತ್ಯ ಕ್ಷೇತ್ರದಲ್ಲಿ ನೀವು ಸಾಧಿಸುವ ಕೆಲಸದ ಬಗ್ಗೆ ಇಂದು ಯೋಚಿಸುವಿರಿ. ಉದ್ಯೋಗದಲ್ಲಿ ನಿಮ್ಮ ಶಿಸ್ತಿನ ಕೆಲಸಕ್ಕೆ ಪ್ರಶಂಸೆ ಸಿಗಲಿದೆ. ಪುಣ್ಯ ಸ್ಥಳಗಳಿಗೆ ಹೋಗುವ ಕನಸು ಭಗ್ನವಾಗುವುದು. ಆರ್ಥಿಕತೆಯನ್ನು ಸರಿದೂಗಿಸಲು ನೀವು ಏನಾದರೂ ಹೊಸ ಯೋಜನೆಯನ್ನು ರೂಪಿಸಬಹುದು. ಯಾರೋ ಹಾಕಿಕೊಟ್ಟ ಮಾರ್ಗದಲ್ಲಿ ನಡೆಯಲು ನಿಮಗೆ ಸಾಕಾಗುವುದು. ಸಮಯವನ್ನು ಉಳಿಸಿಕೊಳ್ಳುವುದು ಕಷ್ಟವಾಗುವುದು. ಆದಾಯವನ್ನು ರಕ್ಷಿಸುವ ಕಾರ್ಯವನ್ನು ಮಾಡುವಿರಿ. ಎಂದೋ ತಪ್ಪಿದ ಆಹಾರದ ಸಂಕಟವು ಇಂದು ಪ್ರಕಟವಾಗಲಿದೆ. ಹೊಸ ಉದ್ಯೋಗದಲ್ಲಿ ಅನೇಕ ಗೊಂದಲಗಳು ಇರಬಹುದು. ಆರ್ಥಿಕವಾದ ಬಲಿಷ್ಠತೆ ಬೇಕಾಗುವುದು. ವಾಸದ ಸ್ಥಳವನ್ನು ನೀವು ಬದಲಿಸಬೇಕಾಗಬಹುದು. ಯಾವುದೇ ಪ್ರೇರಣೆ ನಿಮಗೆ ಸಿಕ್ಕಿ, ಯೋಜನೆ ಬದಲಾಯಿಸುವಿರಿ. ಹೂಡಿಕೆ ನಿಮಗೆ ಪ್ರಶಸ್ತ ಎನಿಸಬಹುದು. ಇತರರ ಮಾತುಗಳು ನಿಮಗೆ ಹಿಡಿಸದೇ ಹೋಗಬಹುದು.
ಸಿಂಹ ರಾಶಿ: ನಿಮ್ಮನ್ನು ಮಾತನಾಡಲು ಒತ್ತಾಯಿಸಿದರೂ ತಪ್ಪಿಸಿಕೊಳ್ಳುವಿರಿ. ನೀವು ಕೈಗೊಂಡ ಪ್ರಯಾಣವು ಸುಖಕರವಾಗದೇ ಇರಬಹುದು. ನಿಮ್ಮ ಬಂಧುಮಿತ್ರರು ನಿಮಗೆ ಸಲ್ಲದ್ದನ್ನು ಮಾಡುವರು. ಅವರ ಜೊತೆ ಕಲಹವಾಗುವ ಸಾಧ್ಯತೆ ಇದೆ. ಆಸ್ತಿಯ ವಿಚಾರದಲ್ಲಿ ನಿಮಗೆ ಸಮಪಾಲ ಸಿಗದೇ ಹೋಗಬಹುದು. ನಿಮ್ಮನ್ನು ಯಾರಾದರೂ ರಹಸ್ಯವಾಗಿ ಗಮನಿಸುತ್ತಿದ್ದಾರೆ ಎಂಬ ಸಂದೇಹ ಬರಬಹುದು. ಲಾಭ ನಷ್ಟಗಳ ಲೆಕ್ಕಾಚಾರದಲ್ಲಿ ಸಮಾನತೆ ಕಂಡುಬರಲಿದೆ. ಮನೆಯಲ್ಲಿ ತಾಳ್ಮೆಯನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ. ವ್ಯಾಪಾರದಲ್ಲಿ ನಿಮಗೆ ನಷ್ಟವಾಗಬಹುದು. ಸ್ತ್ರೀಯರಿಂದ ನಿಮಗೆ ಕೆಲವು ತೊಂದರೆಗಳು ಆಗಬಹುದು. ಕಾನೂನಿಗೆ ವಿರುದ್ಧವಾದ ಕಾರ್ಯವನ್ನು ಮಾಡುವುದು ಬೇಡ. ಅನುಮಾನವು ನಿಮ್ಮ ಸಂಬಂಧಗಳನ್ನು ದೂರಮಾಡಬಹುದು. ವಿದೇಶದ ಸಂಸ್ಥೆಗಳಿಂದ ಕರೆ ಬರುವ ಸಾಧ್ಯತೆ ಇದೆ. ನಿಮ್ಮ ತಂದೆಯ ಮಾರ್ಗದರ್ಶನದಲ್ಲಿ ಕುಟುಂಬ ವ್ಯವಹಾರವು ಮತ್ತೆ ಬೆಳೆಯುತ್ತದೆ. ವೃತ್ತಿಯಲ್ಲಿ ಜವಾಬ್ದಾರಿಯನ್ನು ಬೇರೆಯವರಿಗೆ ಹಾಕಿ, ಸುಮ್ಮನಾಗುವಿರಿ.
ಕನ್ಯಾ ರಾಶಿ: ನಿಮ್ಮ ಪರವಾಗಿರುವ ದನಿ ದೊಡ್ಡದಾದರೆ ಜಯ ನಿಮಗೇ. ಆರ್ಥಿಕ ತೊಂದರೆಯನ್ನು ನೀವು ಸಲೀಸಾಗಿ ಸರಿಮಾಡಿಕೊಳ್ಳುವಿರಿ. ಸಜ್ಜನರ ಸಹವಾಸದಿಂದ ಸಂತೋಷ ಸಿಗಲಿದೆ. ನಿಮ್ಮನ್ನು ಗೌರವಿಸಿದವರಿಗೆ ಪ್ರತಿಯಾಗಿ ಗೌರವಿಸಿ. ಅನಾರೋಗ್ಯದ ಕಾರಣ ನೀವು ಸಾಲವನ್ನು ಮಾಡಬೇಕಾಗಬಹುದು. ನಿಮ್ಮ ಕೂಡಿಟ್ಟ ಹಣವು ಆಪತ್ಕಾಲದಲ್ಲಿ ಸಿಗುವುದು ಕಷ್ಟವಾದೀತು. ನೀವು ಮಾಡಿದ ಕೆಲಸವನ್ನು ನಂಬಿಸಲು ಬಹಳ ಪ್ರಯತ್ನಪಡುವಿರಿ. ಇಂದಿನ ನಿಮ್ಮ ಏಕಾಂತವು ನಿಮಗೆ ಖುಷಿ ಕೊಟ್ಟೀತು. ನಿರುದ್ಯೋಗಿ ಸ್ತ್ರೀಯರಿಗೆ ಉದ್ಯೋಗ ಪ್ರಾಪ್ತಿಯಾಗಲಿದೆ. ಆದರೆ ಇದು ಅನಿವಾರ್ಯ. ದೊಡ್ಡ ವಾಹನವನ್ನು ಚಲಾಯಿಸುವಾಗ ಎಚ್ಚರಿಕೆ ಇರಲಿ. ಭೂಮಿಯ ಖರೀದಿಯು ನಿಮಗೆ ಅನಿವಾರ್ಯವಾಗಲಿದೆ. ಅದನ್ನು ಬದಲಿಸಿಕೊಂಡು ಮುಂದುವರಿಯಿರಿ. ಹೂಡಿಕೆಯಲ್ಲಿ ಅಜ್ಞಾನದ ಕಾರಣದಿಂದ ನಷ್ಟವಾಗುವುದು. ನಿಮ್ಮ ಇಂದಿನ ಆರ್ಥಿಕಲಾಭವು ನಿಮಗೆ ಹೆಚ್ಚು ಸುಖವನ್ನು ಕೊಡಬಹುದು. ವೃತ್ತಿಯಲ್ಲಿ ಭಡ್ತಿ ಕಷ್ಟವಾಗಬಹುದು.
ತುಲಾ ರಾಶಿ: ಪ್ರೇಮ ವಿಚಾರ ಬಂದಾಗ ಭಾವುಕರಾಗುವಿರಿ. ಅಪರಿಚಿತ ಕರೆಗಳಿಂದ ನಿಮಗೆ ಭಯವಾಗಬಹುದು. ದೊಡ್ಡ ಕಲ್ಪನೆಯನ್ನು ನೀವು ಇಟ್ಟುಕೊಂಡು ಮುಂದವರಿಯುವಿರಿ. ವಿದ್ಯಾರ್ಥಿಗಳು ಅಲ್ಪ ಯಶಸ್ಸಿಗೆ ಸಂತೋಷಪಡಬೇಕಾದೀತು. ಅಧಿಕ ಸಂಪಾದನೆಗೆ ಹೆಚ್ಚು ಶ್ರಮವೂ ಬೇಕು. ವಿದೇಶದಲ್ಲಿ ಇರುವವರಿಗೆ ಅಶುಭವಾರ್ತೆಯು ಬರಬಹುದು. ಇನ್ನೊಬ್ಬರಿಗೆ ಸಹಾಯ ಮಾಡಲು ಹೋಗಿ ನೀವೇ ಅಪತ್ತಿಗೆ ಸಿಲುಕಿಕೊಳ್ಳುವ ಸಾಧ್ಯತೆ ಇದೆ. ಅತಿಯಾದ ನಗುವು ಅಪಾಯಕಾರಿ. ನೀವು ಇಂದು ಅಪ್ರಾಮಾಣಿಕರಾಗಿ ಗುರುತಿಸಿಕೊಳ್ಳುವಿರಿ. ನಿಮಗೆ ಮನೆಯವರಿಂದ ಅಪಮಾನವೂ ಆಗಬಹುದು. ನಿಮಗೆ ಸಿಬೇಕಾದುದನ್ನು ತಪ್ಪಿಸಿದರೂ ಕೊನೆಗೆ ನಿಮಗೇ ಸಿಗುವುದು. ದುಃಖಿಸುವ ಬದಲು ಮಾಡಬೇಕಾದುದರ ಬಗ್ಗೆ ಗಮನವಿರುವುದು ಒಳ್ಳೆಯದು. ಮಕ್ಕಳ ವಿಚಾರದಲ್ಲಿ ನೀವು ಬಹಳ ಮೃದು ಸ್ವಭಾವವಿರುವುದು. ನಿಮ್ಮ ಮನಃಸ್ಥಿತಿಯನ್ನು ಯಾರಾದರೂ ದುರುಪಯೋಗ ಮಾಡಿಕೊಳ್ಳಬಹುದು. ಕಾರ್ಯದಲ್ಲಿ ಎಲ್ಲಿಯೂ ತಪ್ಪಾಗದಂತೆ ನೋಡಿಕೊಳ್ಳಿ.
ವೃಶ್ಚಿಕ ರಾಶಿ: ನಿಮಗೆ ಹಿಂದಿನಿಂದ ಬೆಂಬಲಸಿಕ್ಕರೂ ಆಲಸ್ಯ ಬಿಟ್ಟು ಹೋಗಲಾರಿರಿ. ಎಲ್ಲವನ್ನೂ ಇನ್ನೊಬ್ಬರೇ ಮಾಡಿಕೊಡಬೇಕೆನ್ನುವ ಹಂಬಲ ಬೇಡ. ಯಾವುದಾದರೂ ಕಾರ್ಯಕ್ಕೆ ನಿಮ್ಮವರ ವಿರೋಧ ಬರಬಹುದು. ಸಂಗಾತಿಯ ಜೊತೆ ಇಂದು ಹಣದ ವಿಚಾರದಲ್ಲಿ ವೈಮನಸ್ಯ ಉಂಟಾಗಲಿದೆ. ಇಂದು ನಿಮ್ಮ ಉತ್ಸಾಹವು ಕಡಿಮೆ ಇರಲಿದೆ. ನಿಮ್ಮ ಪ್ರೀತಿಯನ್ನು ಹಂಚಿಕೊಳ್ಳಲು ಕಷ್ಟಪಡುವಿರಿ. ನಿಮ್ಮ ಸ್ವಾರ್ಥ ಮನೋಭಾವವು ನಿಮ್ಮನ್ನು ಸಣ್ಣವರನ್ನಾಗಿ ಮಾಡಬಹುದು. ಅಲ್ಪಯೋಗವನ್ನು ಕೈಯಾರೆ ಕಳೆದುಕೊಳ್ಳುವಿರಿ. ನೀವು ಇಂದು ಹೆಸರಿನ ಬೆನ್ನೇರುವ ಸಾಧ್ಯತೆ ಇದೆ. ನಿಮ್ಮ ನಡೆಯ ಕುರಿತು ಕಛೇರಿಯಲ್ಲಿ ಮಾತುಗಳು ಬರಬಹುದು. ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಸಾಧನೆ ಉತ್ತಮವಾಗಿರುವುದು. ಸಿಕ್ಕ ಅವಕಾಶಗಳನ್ನು ಸರಿಯಾಗಿ ಬಳಸಿಕೊಳ್ಳುವುದು ಒಳ್ಳೆಯದು. ಇಂದು ನಿಮ್ಮ ಸಂಗಾತಿಯಾಗುವವನು ನಿಮ್ಮ ಬಗ್ಗೆ ಅತಿಯಾದ ಕಾಳಜಿ ಉಳ್ಳವನು. ನಿಮ್ಮ ವಿಷಯಕ್ಕೆ ಸ್ನೇಹಿತರು ನಗುವರು. ನೀವು ಉದ್ಯೋಗವನ್ನು ಪಡೆಯಲು ಮಾಡಿದ ಪ್ರಯತ್ನಗಳು ನಿಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತವೆ.
ಧನು ರಾಶಿ: ನೀವು ಗೊತ್ತಿಲ್ಲದೇ ದುರ್ಜನರ ಪಕ್ಷದಲ್ಲಿ ಇರುವಿರಿ. ಹೊರ ಬರುವುದು ಸುಲಭಕ್ಕೆ ಸಾಧ್ಯವಾಗದು. ಕೌಟುಂಬಿಕ ಜವಾಬ್ದಾರಿಗಳು ಬರಬಹುದು. ಆತುರದ ವ್ಯವಹಾರದಿಂದ ನಿಮಗೆ ಉತ್ತಮ ಅವಕಾಶಗಳನ್ನು ಕಳೆದುಕೊಳ್ಳಬಹುದು. ನೀವು ಅಂದುಕೊಳ್ಳುವ ವಿಚಾರಗಳು ನಿಮ್ಮದಷ್ಟೇ ಆಗಿರುವುದಿಲ್ಲ. ಶತ್ರುಗಳ ಮೇಲೆ ನಿಮ್ಮ ಗಮನವು ಇರಲಿದೆ. ನಿಮ್ಮ ಅನಾರೋಗ್ಯವನ್ನು ನಕಾರಾತ್ಮಕವಾಗಿ ನೋಡಿಕೊಳ್ಳದೇ ಸಕಾರಾತ್ಮಕವಾಗಿ ಚಿಂತಿಸಿದರೆ ಆರೋಗ್ಯದಲ್ಲಿ ಸುಧಾರಣೆ. ನಿಮಗೆ ಅನಿವಾರ್ಯ ಕೆಲಸವು ಬಂದಿರುವುದರಿಂದ ನಿಮ್ಮ ಕೆಲಸವನ್ನು ಸ್ನೇಹಿತರಿಗೆ ಮಾಡಲು ಕೊಡುವಿರಿ. ಉದ್ಯೋಗದ ಕಾರಣಕ್ಕೆ ನೀವು ದೂರ ಪ್ರಯಾಣ ಮಾಡಬೇಕಾದೀತು. ತಿಳಿವಳಿಕೆಯ ಮಟ್ಟವನ್ನು ನೀವೇ ತಿಳಿಯುವಿರಿ. ಉದ್ಯೋಗದ ವ್ಯಾಪಾರಿಗಳು ಹೆಚ್ಚಿನ ಲಾಭವನ್ನು ಕಾಣಬಹುದು. ನಿಮ್ಮ ಹಾರಿಕೆಯ ಮಾತುಗಳು ನಿಮ್ಮ ಬಗ್ಗೆ ನಂಬಿಕೆಯು ಇರದಂತೆ ಮಾಡುವುದು. ಯಂತ್ರದಿಂದ ಕೆಲಸ ಮಾಡುವವರಿಗೆ ಕಷ್ಟವಾದೀತು. ಇಂದು ನಿಮಗೆ ಅಸ್ವತಂತ್ರತೆ ಕಾಡುವುದು.
ಮಕರ ರಾಶಿ: ನಿಮ್ಮ ದರ್ಜೆಯನ್ನು ಉನ್ನತೀಕರಿಸಿಕೊಳ್ಳಬಹುದು. ನಿಮ್ಮಿಂದ ಉಪಕಾರ ಪಡೆದವರು ಕೃತಜ್ಞತೆ ಸಲ್ಲಿಸಬಹುದು. ಕೇಳಿದ್ದನ್ನು ಸಂಗಾತಿಯಿಂದ ಪಡೆಯಲು ಅಸಾಧ್ಯವಾದೀತು. ವಾಯುವಿಹಾರಕ್ಕೆ ನೀವು ಸಂಗಾತಿಯ ಜೊತೆ ಹೋಗಬಹುದು. ಆರೋಗ್ಯವನ್ನು ನೀವು ಗಮನದಲ್ಲಿಟ್ಟುಕೊಂಡು ಆಹಾರವನ್ನು ಸ್ವೀಕರಿಸಿ. ಅನ್ಯರಿಗೆ ಸಹಕಾರ ನೀಡುವ ಗುಣವನ್ನು ಮೆಚ್ಚಿಕೊಳ್ಳುವರು. ಆದಾಯದ ಬೆನ್ನೇರಿದರೆ ಆರೋಗ್ಯ ಕೆಡುವುದು. ನಿಮಗೆ ಸಿಗವ ಅಧಿಕಾರಕ್ಕೆ ಯಾರನ್ನೋ ಅಪರಾಧಿಗಳನ್ನಾಗಿ ಮಾಡಬಹುದು. ನಿಮ್ಮ ಸಾಮರ್ಥ್ಯದ ಬಗ್ಗೆ ನಿಮಗೆ ನಂಬಿಕೆ ಇದ್ದರೂ ಅದನ್ನು ಪ್ರದರ್ಶನಕ್ಕೆ ಇಟ್ಟು ಅಪಮಾನಕ್ಕೆ ಒಳಗಾಗುವಿರಿ. ಸುಯೋಗದ ಲಕ್ಷಣವು ಇಂದು ನಿಮಗೆ ಕಾಣಿಸಿಕೊಳ್ಳುವುದು. ಒರಟು ಸ್ವಭಾವವು ಇಷ್ಟವಾಗದು. ಹಿರಿಯ ಅಧಿಕಾರಿಗಳ ಸಹಾಯದಿಂದ ನಿಮ್ಮ ಸಂಕೀರ್ಣ ಕಾರ್ಯಗಳು ಸಹ ಇಂದು ಪೂರ್ಣವಾಗಲಿದೆ. ಹಿರಿಯರಿಂದ ಆಶೀರ್ವಾದ ಸಿಗಲಿದೆ. ಪ್ರೇಯಸಿಯನ್ನು ದೂರಮಾಡಿಕೊಂಡು ದುಃಖಿಸುವ ಸಾಧ್ಯತೆ ಇದೆ. ನಿಮ್ಮ ಸಾಮರ್ಥ್ಯವನ್ನು ಸುಧಾರಿಸಲು ಒಂದು ಅವಕಾಶ ಸಿಗಲಿದೆ.
ಕುಂಭ ರಾಶಿ: ಇಚ್ಛಾಶಕ್ತಿ ಬಲವಾಗಿ ಇಲ್ಲದೇ ಇದ್ದಾಗ ಯಾವ ಹೊಸತೂ ಸಿದ್ಧಿಯಾಗದು. ದೈವಭಕ್ತಿಯಿಂದ ನೀವು ನೆಮ್ಮದಿ ಕಾಣಲು ಸಾಧ್ಯ. ಸಿರಿವಂತರಾಗಲು ನೀವು ಆಯ್ಕೆ ಮಾಡಿಕೊಂಡ ದಾರಿಯು ಸರಿಯಿರದು. ನಿಮ್ಮ ಬಗ್ಗೆಯೇ ನೀವು ಅವಲೋಕನ ಮಾಡಿಕೊಂಡು ನಿರ್ಧಾರವನ್ನು ತೆಗೆದುಕೊಳ್ಳಿ. ನೀವು ಇಂದು ಸ್ವಭಾವವನ್ನು ಬದಲಿಸಿಕೊಳ್ಳುವ ಸಾಧ್ಯತೆ ಇದೆ. ಚಿಕಿತ್ಸೆಗೆ ಸಂಬಂಧಿಸಿದಂತೆ ಅನೇಕ ವೈದ್ಯರ ಸಲಹೆಯನ್ನು ಪಡೆಯುವಿರಿ. ಬೆಲೆಯುಳ್ಳ ಅಮೂಲ್ಯ ವಸ್ತುಗಳು ಕಣ್ಮರೆಯಾಗಬಹುದು. ನಿಮ್ಮವರ ಮಾತಿಗೆ ಒಪ್ಪಿಗೆ ಸೂಚಿಸುವುದು ಅತ್ಯವಶ್ಯಕ. ಬಂದ ಸಮಸ್ಯಗಳಿಗೆ ಒಂದೇ ಉತ್ತರವಿರದು. ಮಾರ್ಗಗಳನ್ನು ಹುಡುಕಲು ನಿಮಗೆ ಆಸಕ್ತಿ ಕಡಿಮೆ ಇರಲಿದೆ. ಮಾತುಗಳು ಬಹಳ ಕಠೋರವಿರಲಿದೆ. ಹೊಸತನ್ನು ಖರೀದಿಸುವಿರಿ. ತೊಂದರೆಗಳನ್ನು ಜೀರ್ಣಮಾಡಿಕೊಳ್ಳುವುದು ನಿಮಗೆ ಅಭ್ಯಾಸವಾಗಿದೆ. ಆರೋಪ ಪ್ರತ್ಯಾರೋಪಗಳಿಂದ ಸಮಯ ವ್ಯರ್ಥವಾಗಲಿದೆ. ಪ್ರಯತ್ನಪಟ್ಟು ಮಾಡುವ ಕೆಲಸವು ನಿಮಗೆ ಅನುಕೂಲವನ್ನು ಮಾಡುವುದು.
ಮೀನ ರಾಶಿ: ಅರಸಿಕತೆಯಿಂದ ಹೇಳಿದ ವಿಷಯಕ್ಕೆ ಸತ್ವವಿರದು. ನಿಮ್ಮ ಅನುಮಾನದ ಕಾರಣದಿಂದ ಸಂಗಾತಿಯನ್ನು ದ್ವೇಷಿಸುವಿರಿ. ಸಹಜವಾಗಿ ಅವರ ಜೊತೆ ವರ್ತಿಸಿ. ಕೆಲವು ನಿರ್ಧಾರಗಳಿಂದ ಆರ್ಥಿಕವಾಗಿ ನಷ್ಟವಾಗುವುದು. ಯಾರ ಮೇಲೂ ಒತ್ತಡವನ್ನು ಹೇರುವುದು ಬೇಡ. ಮಾತಿನಿಂದ ಯಾವುದೇ ವ್ಯವಹಾರ ಸಿಂಧುವಾಗದು. ಅವರವರ ಬದುಕು ಅವರವರಿಗೇ ಇರಲಿದೆ. ನೀವು ಅವರನ್ನು ದಾರಿತಪ್ಪಿಸುವ ಅವಶ್ಯಕತೆ ಇಲ್ಲ. ನಿಮ್ಮ ಮಾರ್ಗದ ಬಗ್ಗೆ ನಿಮಗೆ ಸ್ಪಷ್ಟತೆ ಇರಲಿ. ನಿಮ್ಮ ನೆಮ್ಮದಿಯನ್ನು ಕದಡುವ ಸಂದರ್ಭಗಳು ಬಂದರೆ ನೀವು ಇರಬೇಕಾದ ಸ್ಥಿತಿಯಲ್ಲಿ ಇರಿ. ಮನೆಯ ಕಾರ್ಯಗಳಲ್ಲಿ ಆಸಕ್ತಿ ಕಡಿಮೆಯಾಗುವುದು. ಸುತ್ತಟ ಮಾಡಬೇಕೆಂದು ಅನ್ನಿಸುವುದು. ಆರ್ಥಿಕವಾಗಿ ನೀವು ಇಂದು ಅಲ್ಪ ಬಲರು. ಸಹಜ ಬೆಳವಣಿಗೆಗೆ ನಿಮ್ಮ ಒತ್ತು ಹೆಚ್ಚಿರಲಿ. ಮಿತ್ರರ ಜೊತೆ ಹೆಚ್ಚು ಕಾಲವನ್ನು ಕಳೆಯುವಿರಿ. ನೀವು ಒಂಟಿಯಾಗೇ ಇರಲು ಇಚ್ಛಿಸುವವರು, ಹಾಗೆಯೇ ಇರುವುದು ಒಳ್ಳೆಯದು. ಒಳ್ಳೆಯದೆಂದು ತಿಳಿದು ಮೋಸಹೋಗಲಿದ್ದೀರಿ.
-ಲೋಹಿತ ಹೆಬ್ಬಾರ್ – 8762924271 (what’s app only)




