AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೋಲಾರದಿಂದ ತಿರುಪತಿ ತಿಮ್ಮಪ್ಪನ ದೇವಸ್ಥಾನದ ದಾಸೋಹಕ್ಕೆ 7 ಟನ್ ತರಕಾರಿ ಕಳುಹಿಸಿದ ಸ್ನೇಹಿತರು

ಕೋಲಾರದಿಂದ ತಿರುಪತಿ ತಿಮ್ಮಪ್ಪನ ದೇವಸ್ಥಾನದ ದಾಸೋಹಕ್ಕೆ 7 ಟನ್ ತರಕಾರಿ ಕಳುಹಿಸಿದ ಸ್ನೇಹಿತರು

ರಾಜೇಂದ್ರ ಸಿಂಹ ಬಿ.ಎಲ್. ಕೋಲಾರ
| Updated By: ವಿವೇಕ ಬಿರಾದಾರ|

Updated on: Aug 15, 2025 | 6:40 PM

Share

ಕೋಲಾರದ ಪಿ.ಸಿ. ಬಡಾವಣೆಯ ಭಕ್ತರು ಶ್ರಾವಣ ಮಾಸದ ಪ್ರಯುಕ್ತ ತಿರುಪತಿ ತಿಮ್ಮಪ್ಪ ದೇವಸ್ಥಾನಕ್ಕೆ 7 ಟನ್ ತರಕಾರಿಗಳನ್ನು ದಾನ ಮಾಡಿದ್ದಾರೆ. ಕೋಲಾರ ಮತ್ತು ಚಿಂತಾಮಣಿ ಮಾರುಕಟ್ಟೆಗಳಿಂದ ಖರೀದಿಸಿದ ವಿವಿಧ ತರಕಾರಿಗಳನ್ನು ತಿರುಮಲಕ್ಕೆ ಕಳುಹಿಸಲಾಗಿದೆ. ಪ್ರೇಮ್ ಕುಮಾರ್ ಮತ್ತು ಅವರ ಸ್ನೇಹಿತರು ಈ ದಾನದಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ತಿರುಮಲಕ್ಕೆ ತರಕಾರಿಗಳನ್ನು ಕಳುಹಿಸುವ ಮುನ್ನ ಪೂಜೆಯನ್ನು ಸಲ್ಲಿಸಲಾಯಿತು.

ಕೋಲಾರ, ಆಗಸ್ಟ್​ 15: ಶ್ರಾವಣ ಮಾಸ ಹಿನ್ನೆಲೆಯಲ್ಲಿ ಕೋಲಾರ ನಗರದ ಪಿಸಿ ಬಡಾವಣೆಯ ತಿಮ್ಮಪ್ಪನ ಭಕ್ತರು ತಿರುಪತಿ ತಿಮ್ಮಪ್ಪನ ದೇವಸ್ಥಾನದ ದಾಸೋಹಕ್ಕೆ ತರಕಾರಿ ಕಳುಹಿಸಿದರು. ತಿರುಮಲದಲ್ಲಿ ನಡೆಯುವ ನಿತ್ಯ ದಾಸೋಹಕ್ಕಾಗಿ ಕೋಲಾರದ ಪಿಸಿ ಬಡಾವಣೆಯ ಪ್ರೇಮ್​ ಕುಮಾರ್ ಹಾಗೂ ಆವರ ಸ್ನೇಹಿತರು ಸುಮಾರು 7 ಟನ್​ ವಿವಿಧ ಬಗೆಯ ತರಕಾರಿಗಳನ್ನು ಕಳಿಸಿಕೊಟ್ಟರು. ಕೋಲಾರ ಹಾಗೂ ಚಿಂತಾಮಣಿ ಮಾರುಕಟ್ಟೆಯಿಂದ ಖರೀದಿ ಮಾಡಿದ ಸುಮಾರು 7 ಟನ್ ತರಕಾರಿಯನ್ನು ದಾಸೋಹಕ್ಕೆಂದು ಕಳಿಸಿಕೊಡಲಾಗಿದೆ. ತಿರುಪತಿ ತಿರುಮಲದಿಂದ ಬಂದಿದ್ದ ಲಾರಿಯಲ್ಲಿ, ಹುರುಳಿಕಾರಯಿ, ಸೌತೇಕಾರಿ, ಕ್ಯಾರೆಟ್​, ಕ್ಯಾಪ್ಸಿಕಮ್​, ಮೂಲಂಗಿ, ಗೋರಿಕಾಯಿ, ಬೀಟ್ ರೋಟ್, ಆಲೂಗಡ್ಡೆ ಸೇರಿ​ ಹಲವು ಬಗೆ ಬಗೆಯ ತರಕಾರಿಗಳನ್ನು ಕಳಿಸಿಕೊಡಲಾಯಿತು. ತರಕಾರಿಯನ್ನು ಕಳಿಸುವುದಕ್ಕೂ ಮುನ್ನ ಕೋಲಾರದ ಪಿ.ಸಿ.ಬಡಾವಣೆಯಲ್ಲಿ ತಿರುಮಲದಿಂದ ಬಂದಿದ್ದ ವಾಹನಕ್ಕೆ ಪೂಜೆ ಸಲ್ಲಿಸಲಾಯಿತು.