Kannada News Latest news ನಾಲ್ವರು ಪ್ರಯಾಣಿಸುತ್ತಿದ್ದ ಕಾರಿನಲ್ಲಿ ಏಕಾಏಕಿ ಕಾಣಿಸಿಕೊಂಡ ಬೆಂಕಿ, ಕಾರು ಸುಟ್ಟುಭಸ್ಮ
ನಾಲ್ವರು ಪ್ರಯಾಣಿಸುತ್ತಿದ್ದ ಕಾರಿನಲ್ಲಿ ಏಕಾಏಕಿ ಕಾಣಿಸಿಕೊಂಡ ಬೆಂಕಿ, ಕಾರು ಸುಟ್ಟುಭಸ್ಮ
ಮೈಸೂರು: ಚಲಿಸುತ್ತಿದ್ದ ಕಾರಿನಲ್ಲಿ ಆಕಸ್ಮಿಕ ಬೆಂಕಿ ಹತ್ತಿಕೊಂಡು ಕಾರು ಸುಟ್ಟುಭಸ್ಮವಾಗಿರುವ ಘಟನೆ ಮೈಸೂರಿನ ಟಿ.ನರಸೀಪುರ ರಸ್ತೆಯ ಮೊಸಂಬಾಯನಹಳ್ಳಿ ಬಳಿ ನಡೆದಿದೆ. ನಿವೃತ್ತ ಹೆಡ್ ಕಾನ್ಸ್ ಟೇಬಲ್ ಬಸವಣ್ಣ ಎಂಬುವರಿಗೆ ಸೇರಿದ ಕಾರಾಗಿದ್ದು, ಇದರಲ್ಲಿ ನಾಲ್ವರು ಪ್ರಯಾಣಿಸುತ್ತಿದ್ದರು. ಈ ವೇಳೆ ಕ್ಷಣಮಾತ್ರದಲ್ಲೇ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿ ನೋಡಿ ಗಾಬರಿಗೊಳಗಾದ ಪ್ರಯಾಣಿಕರು ಸಮಯ ಪ್ರಜ್ಞೆಯಿಂದ ತಕ್ಷಣ ಕಾರಿನಿಂದ ಇಳಿದಿದ್ದಾರೆ. ಭಾರಿ ಅನಾಹುತದಿಂದ ಪಾರಾಗಿದ್ದಾರೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ನಂತರ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ವರುಣಾ ಪೊಲೀಸ್ ಠಾಣೆಯಲ್ಲಿ ಪ್ರಕರಣ […]
Follow us on
ಮೈಸೂರು: ಚಲಿಸುತ್ತಿದ್ದ ಕಾರಿನಲ್ಲಿ ಆಕಸ್ಮಿಕ ಬೆಂಕಿ ಹತ್ತಿಕೊಂಡು ಕಾರು ಸುಟ್ಟುಭಸ್ಮವಾಗಿರುವ ಘಟನೆ ಮೈಸೂರಿನ ಟಿ.ನರಸೀಪುರ ರಸ್ತೆಯ ಮೊಸಂಬಾಯನಹಳ್ಳಿ ಬಳಿ ನಡೆದಿದೆ. ನಿವೃತ್ತ ಹೆಡ್ ಕಾನ್ಸ್ ಟೇಬಲ್ ಬಸವಣ್ಣ ಎಂಬುವರಿಗೆ ಸೇರಿದ ಕಾರಾಗಿದ್ದು, ಇದರಲ್ಲಿ ನಾಲ್ವರು ಪ್ರಯಾಣಿಸುತ್ತಿದ್ದರು.
ಈ ವೇಳೆ ಕ್ಷಣಮಾತ್ರದಲ್ಲೇ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿ ನೋಡಿ ಗಾಬರಿಗೊಳಗಾದ ಪ್ರಯಾಣಿಕರು ಸಮಯ ಪ್ರಜ್ಞೆಯಿಂದ ತಕ್ಷಣ ಕಾರಿನಿಂದ ಇಳಿದಿದ್ದಾರೆ. ಭಾರಿ ಅನಾಹುತದಿಂದ ಪಾರಾಗಿದ್ದಾರೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ನಂತರ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ವರುಣಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.