ಆನ್‌ಲೈನ್ ಶಿಕ್ಷಣ ರದ್ದು Ok, ಹಾಗೆಯೇ PUC ವರೆಗೂ ಆನ್‌ಲೈನ್ ರದ್ದಾಗಬೇಕು: ಸಿದ್ದರಾಮಯ್ಯ
ಮೈಸೂರು: ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಕೊರೊನಾ ಕಾಟದಿಂದಾಗಿ 5ನೇ ತರಗತಿಯವರೆಗೆ ಆನ್‌ಲೈನ್ ಶಿಕ್ಷಣ ರದ್ದು ಮಾಡಿರುವ ರಾಜ್ಯ ಸರ್ಕಾರದ ಕ್ರಮವನ್ನು ಮಾಜಿ ಮುಖ್ಯಮಂತ್ರಿ, ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಸ್ವಾಗತಿಸಿದ್ದು, ಅದೇ ರೀತಿಯಲ್ಲಿ ರಾಜ್ಯದಲ್ಲಿ ಪಿಯುಸಿವರೆಗೂ ಆನ್‌ಲೈನ್ ಕ್ಲಾಸ್ ರದ್ದು ಮಾಡಬೇಕು ಎಂದು ಆಗ್ರಹಿಸಿದ್ದಾರೆ. ಈ ಕುರಿತು ಮೈಸೂರಿನಲ್ಲಿ ಮಾತನಾಡಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯ ಸರ್ಕಾರದ ಈ ನಿಲುವು ಸರಿಯಾಗಿದೆ. ಇದೇ ವೇಳೆ ನನ್ನ ಪ್ರಕಾರ ಪಿಯುವರೆಗೂ ಆನ್‌ಲೈನ್ ಶಿಕ್ಷಣ ರದ್ದಾಗಬೇಕು. ನಾನು ಮೊದಲಿನಿಂದಲೂ ಆನ್‌ಲೈನ್ ಶಿಕ್ಷಣ […]
ಮೈಸೂರು: ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಕೊರೊನಾ ಕಾಟದಿಂದಾಗಿ 5ನೇ ತರಗತಿಯವರೆಗೆ ಆನ್‌ಲೈನ್ ಶಿಕ್ಷಣ ರದ್ದು ಮಾಡಿರುವ ರಾಜ್ಯ ಸರ್ಕಾರದ ಕ್ರಮವನ್ನು ಮಾಜಿ ಮುಖ್ಯಮಂತ್ರಿ, ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಸ್ವಾಗತಿಸಿದ್ದು, ಅದೇ ರೀತಿಯಲ್ಲಿ ರಾಜ್ಯದಲ್ಲಿ ಪಿಯುಸಿವರೆಗೂ ಆನ್‌ಲೈನ್ ಕ್ಲಾಸ್ ರದ್ದು ಮಾಡಬೇಕು ಎಂದು ಆಗ್ರಹಿಸಿದ್ದಾರೆ.
ಈ ಕುರಿತು ಮೈಸೂರಿನಲ್ಲಿ ಮಾತನಾಡಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯ ಸರ್ಕಾರದ ಈ ನಿಲುವು ಸರಿಯಾಗಿದೆ. ಇದೇ ವೇಳೆ ನನ್ನ ಪ್ರಕಾರ ಪಿಯುವರೆಗೂ ಆನ್‌ಲೈನ್ ಶಿಕ್ಷಣ ರದ್ದಾಗಬೇಕು. ನಾನು ಮೊದಲಿನಿಂದಲೂ ಆನ್‌ಲೈನ್ ಶಿಕ್ಷಣ ಪದ್ದತಿಯನ್ನು ವಿರೋಧಿಸುತ್ತಲೇ ಬಂದಿದ್ದೇನೆ. ಮಕ್ಕಳಿಗೆ ಶಾಲೆಯಲ್ಲಿಯೇ ಪಾಠ ಮಾಡಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.
ಖಾಸಗಿ ಶಾಲೆಗಳ ಶುಲ್ಕವನ್ನು ಕಡಿಮೆ ಮಾಡುವ ವಿಚಾರದಲ್ಲಿ ಆ ಬಗ್ಗೆ ಸರ್ಕಾರವೇ ಯೋಚಿಸಿ ತೀರ್ಮಾನ ಕೈಗೊಳ್ಳಬೇಕು ಎಂದೂ ಅವರು ಪ್ರತಿಕ್ರಿಯಿಸಿದ್ದಾರೆ.
Published On - 10:43 am, Thu, 11 June 20