ಆನ್‌ಲೈನ್ ಶಿಕ್ಷಣ ಬಂದ್ ಆಯ್ತು, ಮುಂದೆ ಮಕ್ಕಳ ಭವಿಷ್ಯವೇನು?
ಬೆಂಗಳೂರು: ರಾಜ್ಯ ಸರ್ಕಾರ ಆನ್‌ಲೈನ್ ಶಿಕ್ಷಣವನ್ನು ಬಂದ್ ಮಾಡಿದೆ. ಮಕ್ಕಳಿಗೂ ಆನ್ ಲೈನ್ ಆಪತ್ತು ತಪ್ಪಿ ಹೋಯ್ತು. ಆದರೆ ಮತ್ತೊಂದು ಕಡೆ ಶಾಲೆ ತೆರೆಯೋದು ಸದ್ಯಕ್ಕೆ ಡೌಟ್. ಹೀಗಿರುವಾಗ ಮಕ್ಕಳು ಕಲಿಕೆ ಮುಂದುವರಿಸೋದು ಹೇಗೆ? ಆನ್ ಲೈನ್ ಪಾಠ ನಿಂತ ಮೇಲೆ ಮಕ್ಕಳಿಗೆ ಪರ್ಯಾಯ ಕಲಿಕೆ ಏನು? ಮಕ್ಕಳ ಶಿಕ್ಷಣಕ್ಕೆ ಸರ್ಕಾರ ಪರ್ಯಾಯ ದಾರಿ ಹುಡುಕಿದ್ಯಾ ಇಲ್ವಾ? ಎನ್ನುವ ಹತ್ತು ಹಲವು ಪ್ರಶ್ನೆಗಳು ಪೋಷಕರಿಗೆ ಕಾಡುತ್ತಿವೆ. ಆನ್‌ಲೈನ್ ಶಿಕ್ಷಣವನ್ನ ಸರ್ಕಾರ ಹಿಂಪಡೆಿದಿದ್ದು ಯಾಕೆ? ಮೂರು ಕಾರಣಗಳು? 1. ಆನ್‌ಲೈನ್ […]
ಬೆಂಗಳೂರು: ರಾಜ್ಯ ಸರ್ಕಾರ ಆನ್‌ಲೈನ್ ಶಿಕ್ಷಣವನ್ನು ಬಂದ್ ಮಾಡಿದೆ. ಮಕ್ಕಳಿಗೂ ಆನ್ ಲೈನ್ ಆಪತ್ತು ತಪ್ಪಿ ಹೋಯ್ತು. ಆದರೆ ಮತ್ತೊಂದು ಕಡೆ ಶಾಲೆ ತೆರೆಯೋದು ಸದ್ಯಕ್ಕೆ ಡೌಟ್. ಹೀಗಿರುವಾಗ ಮಕ್ಕಳು ಕಲಿಕೆ ಮುಂದುವರಿಸೋದು ಹೇಗೆ? ಆನ್ ಲೈನ್ ಪಾಠ ನಿಂತ ಮೇಲೆ ಮಕ್ಕಳಿಗೆ ಪರ್ಯಾಯ ಕಲಿಕೆ ಏನು? ಮಕ್ಕಳ ಶಿಕ್ಷಣಕ್ಕೆ ಸರ್ಕಾರ ಪರ್ಯಾಯ ದಾರಿ ಹುಡುಕಿದ್ಯಾ ಇಲ್ವಾ? ಎನ್ನುವ ಹತ್ತು ಹಲವು ಪ್ರಶ್ನೆಗಳು ಪೋಷಕರಿಗೆ ಕಾಡುತ್ತಿವೆ.
ಆನ್‌ಲೈನ್ ಶಿಕ್ಷಣವನ್ನ ಸರ್ಕಾರ ಹಿಂಪಡೆಿದಿದ್ದು ಯಾಕೆ? ಮೂರು ಕಾರಣಗಳು? 1. ಆನ್‌ಲೈನ್ ಶಿಕ್ಷಣ, ಸಾಮಾನ್ಯ ಪಠ್ಯಕ್ರಮಕ್ಕೆ ಪರ್ಯಾಯವಲ್ಲ ಅನ್ನೋದು ಮನದಟ್ಟಾಗಿದೆ. ಶಾಲೆಯಲ್ಲಿ ಹೇಳಿಕೊಡೋ ಪಠ್ಯವನ್ನ ಆನ್ಲೈನ್ನಲ್ಲಿ ಹೇಳಿಕೊಡೋಕೆ ಸಾಧ್ಯವಿಲ್ಲ. ಆನ್‌ಲೈನ್ ಮೂಲಕ ಪಾಠ ಹೇಳಿಕೊಟ್ರೆ ಕಲಿಕೆ ಸಾಮರ್ಥ್ಯ ಕಡಿಮೆಯಾಗುತ್ತೆ. ಮಕ್ಕಳ ಮಾನಸಿಕ ಮತ್ತು ದೈಹಿಕ ಸಾಮರ್ಥ್ಯದ ಮೇಲೂ ಕೂಡಾ ಹೊರೆಯಾಗ್ತಿದೆ
2. ಆನ್‌ಲೈನ್ ಶಿಕ್ಷಣದ ಹೆಸರಲ್ಲಿ ನಡೀತಾ ಇರೋ ಫೀಸ್ ವಸೂಲಿ ನಿಲ್ಲಿಸೋದು. ಖಾಸಗಿ ಶಿಕ್ಷಣ ಸಂಸ್ಥೆಗಳು ಆನ್‌ಲೈನ್ ಕ್ಲಾಸ್ಗೆ ಹಣ ಪಡೆದುಕೊಳ್ತಾ ಇವೆ. ಆ ಮೂಲಕ ಪೋಷಕರಿಂದ ಸಾವಿರಾರು ರೂಪಾಯಿ ತೆಗೆದುಕೊಳ್ತಾ ಇವೆ. ಇಂಥದ್ದೊಂದು ಫೀಸ್ ದಂಧೆಗೆ ಬ್ರೇಕ್ ಹಾಕೋ ಉದ್ದೇಶದಿಂದಲೂ ಆನ್‌ಲೈನ್ ಶಿಕ್ಷಣ ಬಂದ್ ಮಾಡಲಾಗಿದೆ.
3. ಖಾಸಗಿ ಶಾಲೆ ಮಕ್ಕಳು ಆನ್ಲೈನ್ನಲ್ಲಿ ಪಠ್ಯ ಕೇಳಿಸಿಕೊಳ್ಳೋಕೆ ಅನುಕೂಲ ಇದೆ. ಆದ್ರೆ ಸರ್ಕಾರಿ ಶಾಲೆಯ ಮಕ್ಕಳಿಗೆ ಇದು ಸಾಧ್ಯವಿಲ್ಲ. ಇದು ತಾರತಮ್ಯವಾಗೋ ಹಿನ್ನೆಲೆಯಲ್ಲಿ ಒಂದೇ ತರಗತಿಯಲ್ಲಿ ಓದುವ ಭಿನ್ನ ಮಾಧ್ಯಮದ ಶಾಲೆಯ ಮಕ್ಕಳಲ್ಲಿ ತಾರತಮ್ಯ ಸರಿಯಲ್ಲ. ಸಾಮಾಜಿಕ ನ್ಯಾಯದ ಆಧಾರದಲ್ಲಿ ಸರ್ವರಿಗೂ ಶಿಕ್ಷಣ ಆಶಯ ಈಡೇರುತ್ತಾ ಇಲ್ಲ ಇಂಥಾ ಒಂದು ಕೂಗು ಎದ್ದೇಳಬಹುದು ಅಂದುಕೊಂಡು ಆನ್‌ಲೈನ್ ಶಿಕ್ಷಣ ಹಿಂಪಡೆಯಲಾಗಿದೆ. ಕಲಿಕಾ ಹಂತದಲ್ಲೇ ತಾರತಮ್ಯ ಶುರುವಾಗಿ ವ್ಯತಿರಿಕ್ತವಾಗಿ ತಿರುಗಿದ್ರೆ ನಿಭಾಯಿಸೋದು ಕಷ್ಟ.
ಶಾಲೆ ಓಪನ್ಗೆ ಇನ್ನೆಷ್ಟು ಸಮಯ ಬೇಕಾಗುತ್ತೆ ಅನ್ನೋದು ಗೊತ್ತಿಲ್ಲ. ಆನ್‌ಲೈನ್ ಶಿಕ್ಷಣ ಇಲ್ಲದೆ ಇರೋದ್ರಿಂದ ಮಕ್ಕಳಿಗೆ ಕಲಿಕೆ ಇನ್ನಷ್ಟು ಕಷ್ಟವಾಗಬಹುದು. ವೈಜ್ಞಾನಿಕವಾಗಿ ಆನ್‌ಲೈನ್ ಕ್ಲಾಸ್ ನಡೆಸಲು ಪ್ಲ್ಯಾನ್ ನಡೀತಿದೆ. ಆನ್‌ಲೈನ್ ಪಠ್ಯ ಹೊರತುಪಡಿಸಿ ಇತರೆ ಆಸಕ್ತಿಕರ ಚಟುವಟಿಕೆಗೆಳು ಬಗ್ಗೆ ಶಿಕ್ಷಣ ಇಲಾಖೆ ಚಿಂತಿಸುತ್ತಿದೆ. ಇದೆ ಮಕ್ಕಳ ಕಲಿಕೆಗೆ ಪರ್ಯಾಯ ಮಾರ್ಗದ ಬಗ್ಗೆ ಮಾರ್ಗಸೂಚಿ ಹೊರಡಿಸುವ ಸಾಧ್ಯತೆ ಇದೆ. ಆದರೆ ಸದ್ಯ ಆನ್‌ಲೈನ್ ಕ್ಲಾಸ್ ಬಂದ್ ಆಗಿದ್ದು, ಮಕ್ಕಳ ಕಲಿಕೆಗೆ ಪೆಟ್ಟುಬಿದ್ದಂತಾಗಿದೆ.
Published On - 11:07 am, Thu, 11 June 20