ಕುರಿಕಾಯುವ ಯುವಕನಿಗೆ ಕೊರೊನಾ.. 40 ಕುರಿಗಳಿಗೆ ಕೋವಿಡ್‌ ಟೆಸ್ಟ್‌!

| Updated By:

Updated on: Jun 30, 2020 | 4:28 PM

ತುಮಕೂರು: ಕೊರೊನಾ ಭಯ ಈಗ ಎಲ್ಲೆಡೆ ಅದ್ಯಾವ ಪರಿ ಹಬ್ಬಿದೆ ಅಂದ್ರೆ, ಯಾರಾದ್ರೂ ಕೆಮ್ಮಿದ್ರೆ ಸಾಕು, 360 ಡಿಗ್ರಿ ತಿರುಗಿ ನೋಡ್ತಾರೆ. ಕೊರೊನಾ ಹೆಮ್ಮಾರಿಯ ಆರ್ಭಟದಲ್ಲಿ ಪ್ರತಿಯೊಂದನ್ನೂ ಸಂಶಯದಿಂದ ನೋಡುವ ಮತ್ತು ನೋಡಲೇ ಬೇಕಾದಂಥ ಪರಿಸ್ಥಿತಿ ಬಂದುಬಿಟ್ಟಿದೆ. ಇದಕ್ಕೆ ತಾಜಾ ಉದಾಹರಣೆ ತುಮಕೂರು ಜಿಲ್ಲೆಯಲ್ಲಿ ನಡೆದಿರುವ ಘಟನೆ. ಹೌದು, ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿ ತಾಲೂಕಿನ ಗೋಡೆಕೆರೆ ಗೊಲ್ಲರಹಟ್ಟಿ ಗ್ರಾಮದ ಕುರಿ ಕಾಯುವ 22 ವರ್ಷದ ಯುವಕನಿಗೆ ಕೊರೊನಾ ಸೋಂಕು ತಗುಲಿರೋದು ದೃಢಪಟ್ಟಿದೆ. ಈತ  ದಿನಾ ಸುಮಾರು 40 […]

ಕುರಿಕಾಯುವ ಯುವಕನಿಗೆ ಕೊರೊನಾ.. 40 ಕುರಿಗಳಿಗೆ ಕೋವಿಡ್‌ ಟೆಸ್ಟ್‌!
Follow us on

ತುಮಕೂರು: ಕೊರೊನಾ ಭಯ ಈಗ ಎಲ್ಲೆಡೆ ಅದ್ಯಾವ ಪರಿ ಹಬ್ಬಿದೆ ಅಂದ್ರೆ, ಯಾರಾದ್ರೂ ಕೆಮ್ಮಿದ್ರೆ ಸಾಕು, 360 ಡಿಗ್ರಿ ತಿರುಗಿ ನೋಡ್ತಾರೆ. ಕೊರೊನಾ ಹೆಮ್ಮಾರಿಯ ಆರ್ಭಟದಲ್ಲಿ ಪ್ರತಿಯೊಂದನ್ನೂ ಸಂಶಯದಿಂದ ನೋಡುವ ಮತ್ತು ನೋಡಲೇ ಬೇಕಾದಂಥ ಪರಿಸ್ಥಿತಿ ಬಂದುಬಿಟ್ಟಿದೆ. ಇದಕ್ಕೆ ತಾಜಾ ಉದಾಹರಣೆ ತುಮಕೂರು ಜಿಲ್ಲೆಯಲ್ಲಿ ನಡೆದಿರುವ ಘಟನೆ.

ಹೌದು, ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿ ತಾಲೂಕಿನ ಗೋಡೆಕೆರೆ ಗೊಲ್ಲರಹಟ್ಟಿ ಗ್ರಾಮದ ಕುರಿ ಕಾಯುವ 22 ವರ್ಷದ ಯುವಕನಿಗೆ ಕೊರೊನಾ ಸೋಂಕು ತಗುಲಿರೋದು ದೃಢಪಟ್ಟಿದೆ. ಈತ  ದಿನಾ ಸುಮಾರು 40 ಕುರಿಗಳನ್ನು ಮೇಯಿಸುತ್ತಿದ್ದ. ಹೀಗಾಗಿ ಈತನಿಗೆ ಸೋಂಕಿರೋದು ಕನ್‌ಫರ್ಮ್ ಆಗುತ್ತಿದ್ದಂತೆ ಜಿಲ್ಲಾಡಳಿತ ಎಚ್ಚೆತ್ತುಕೊಂಡಿದೆ. ಈತನೊಂದಿಗೆ ಸಂಪರ್ಕದಲ್ಲಿ ಬಂದವರಿಗಾಗಿ ಶೋಧ ಆರಂಭಿಸಿದೆ. ಆಗ ಸಿಕ್ಕಿದ್ದೆ 40 ಕುರಿಗಳು!

ಹೇಳಿ ಕೇಳಿ ಕುರಿಕಾಯುವ ಕುರಿಗಾಹಿ ಈತ. ಪ್ರತಿದಿನ ಕುರಿಕಾಯುವುದೇ ಕಾಯಕ. ಹೀಗಾಗಿ ಅಧಿಕಾರಿಗಳು ಈ 40 ಕುರಿಗಳನ್ನೇ ಕೋವಿಡ್‌ ಟೆಸ್ಟ್‌ಗೊಳಪಡಿಸಲು ನಿರ್ಧರಿಸಿದ್ದಾರೆ. ಇದಕ್ಕಾಗಿ ಎಲ್ಲ ಕುರಿಗಳ ಸ್ಯಾಂಪಲ್‌ಗಳನ್ನ ಪಡೆದುಕೊಂಡಿದ್ದಾರೆ. ಈಗ ಈ ಸ್ಯಾಂಪಲ್‌ಗಳನ್ನು ಪರೀಕ್ಷೆಗಾಗಿ ಲ್ಯಾಬ್‌ಗೆ ಕಳಿಸಿದ್ದು, ವರದಿ ಬರುವುದನ್ನೇ ಕಾಯುತ್ತಿದ್ದಾರೆ. ಕಾಲ ಯಾರು ಯಾರನ್ನು, ಯಾವಾಗ, ಹೇಗೆ ಆಟ್ಟಾಡಿಸುತ್ತೆ ನೋಡಿ ಅಂತಾ ಜನ ಈಗ ತುಮಕೂರಿನಾದ್ಯಂತ ಮಾತನಾಡಿಕೊಳ್ಳುವಂತಾಗಿದೆ.

Published On - 4:05 pm, Tue, 30 June 20