Top News: ಕೊರೊನಾ ರೋಗಿಗಳ ಪಾಲಿಗೆ ಸಂಜೀವಿನಿಯಾಗುತ್ತಾ ಕೋವ್ಯಾಕ್ಸಿನ್?

ಕೊರೊನಾ ಮಹಾಮಾರಿಗೆ ಕೊನೆಗೂ ಸಿಕ್ತಾ ಔಷಧಿ ಅನ್ನೋ ಆಶಾಭಾವನೆ ಮೂಡಿದೆ. ಯಾಕಂದ್ರೆ, ಭಾರತ್ ಬಯೋಟೆಕ್ ಕೋವ್ಯಾಕ್ಸಿನ್ ಅಭಿವೃದ್ಧಿಪಡಿಸಿದೆ. ಕೊರೊನಾ ಸೋಂಕಿತರಿಗೆ ಕೋವ್ಯಾಕ್ಸಿನ್ ಸಂಜೀವಿನಿಯಾಗುತ್ತಾ ಆಗುವ ಆಸೆ ಮೂಡಿದೆ. ಮನುಷ್ಯರ ಮೇಲೆ ಕೋವ್ಯಾಕ್ಸಿನ್ ಪ್ರಯೋಗಕ್ಕೆ ಭಾರತೀಯ ಔಷಧ ನಿಯಂತ್ರಣ ನಿರ್ದೇಶನಾಲಯದಿಂದ ಒಪ್ಪಿಗೆ ನೀಡಿದ್ದು, ಜುಲೈ ತಿಂಗಳಲ್ಲಿ ದೇಶಾದ್ಯಂತ ಕೋವ್ಯಾಕ್ಸಿನ್ ಪ್ರಯೋಗ ನಡೆಯಲಿದೆ. ಕೊರೊನಾ ಕಂಟಕ ಭಾರತದಲ್ಲಿ ಕೊರೊನಾ ವೈರಸ್​ ತನ್ನ ಕಬಂಧ ಬಾಹುಗಳನ್ನ ಚಾಚುತ್ತಲೇ ಇದ್ದು, ಸೋಂಕಿತರ ಸಂಖ್ಯೆ 5 ಲಕ್ಷ 67 ಸಾವಿರದ 536ಕ್ಕೆ ಏರಿಕೆಯಾಗಿದೆ. ದೇಶದಲ್ಲಿ […]

Top News: ಕೊರೊನಾ ರೋಗಿಗಳ ಪಾಲಿಗೆ ಸಂಜೀವಿನಿಯಾಗುತ್ತಾ ಕೋವ್ಯಾಕ್ಸಿನ್?
Follow us
ಸಾಧು ಶ್ರೀನಾಥ್​
|

Updated on:Jun 30, 2020 | 5:10 PM

ಕೊರೊನಾ ಮಹಾಮಾರಿಗೆ ಕೊನೆಗೂ ಸಿಕ್ತಾ ಔಷಧಿ ಅನ್ನೋ ಆಶಾಭಾವನೆ ಮೂಡಿದೆ. ಯಾಕಂದ್ರೆ, ಭಾರತ್ ಬಯೋಟೆಕ್ ಕೋವ್ಯಾಕ್ಸಿನ್ ಅಭಿವೃದ್ಧಿಪಡಿಸಿದೆ. ಕೊರೊನಾ ಸೋಂಕಿತರಿಗೆ ಕೋವ್ಯಾಕ್ಸಿನ್ ಸಂಜೀವಿನಿಯಾಗುತ್ತಾ ಆಗುವ ಆಸೆ ಮೂಡಿದೆ. ಮನುಷ್ಯರ ಮೇಲೆ ಕೋವ್ಯಾಕ್ಸಿನ್ ಪ್ರಯೋಗಕ್ಕೆ ಭಾರತೀಯ ಔಷಧ ನಿಯಂತ್ರಣ ನಿರ್ದೇಶನಾಲಯದಿಂದ ಒಪ್ಪಿಗೆ ನೀಡಿದ್ದು, ಜುಲೈ ತಿಂಗಳಲ್ಲಿ ದೇಶಾದ್ಯಂತ ಕೋವ್ಯಾಕ್ಸಿನ್ ಪ್ರಯೋಗ ನಡೆಯಲಿದೆ.

ಕೊರೊನಾ ಕಂಟಕ ಭಾರತದಲ್ಲಿ ಕೊರೊನಾ ವೈರಸ್​ ತನ್ನ ಕಬಂಧ ಬಾಹುಗಳನ್ನ ಚಾಚುತ್ತಲೇ ಇದ್ದು, ಸೋಂಕಿತರ ಸಂಖ್ಯೆ 5 ಲಕ್ಷ 67 ಸಾವಿರದ 536ಕ್ಕೆ ಏರಿಕೆಯಾಗಿದೆ. ದೇಶದಲ್ಲಿ ಕೊರೊನಾಗೆ 16 ಸಾವಿರದ 904 ಜನರು ಬಲಿಯಾಗಿದ್ದು, 3 ಲಕ್ಷ 35 ಸಾವಿರದ 723 ಸೋಂಕಿತರು ಗುಣಮುಖರಾಗಿದ್ದಾರೆ. ಪ್ರಸ್ತುತ 2 ಲಕ್ಷ 15 ಸಾವಿರದ 361 ಸೋಂಕಿತರಿಗೆ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗ್ತಿದೆ.

ಮಹಿಳಾ ದೌರ್ಜನ್ಯ ಇಳಿಕೆ ಕೊರೊನಾ ವೈರಸ್ ಬಂದಾಗಿನಿಂದ ಮಹಿಳೆಯರ ಮೇಲೆ ನಡೆಯುತ್ತಿದ್ದ ದೌರ್ಜನ್ಯದ ಪ್ರಮಾಣ ಇಳಿಕೆಯಾಗಿದೆಯಂತೆ. ದೆಹಲಿ ಮಹಿಳಾ ಆಯೋಗದ ಪ್ರಕಾರ, ಲಾಕ್​ಡೌನ್ ಅವಧಿಯಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ, ಹಿಂಸಾಚಾರ, ಅಪರಾಧ ಪ್ರಕರಣಗಳು ಕಡಿಮೆಯಾಗಿವೆ. ಮಹಿಳಾ ಆಯೋಗಕ್ಕೆ ಬರುವ ದೂರುಗಳ ಸಂಖ್ಯೆಯೂ ಕಡಿಮೆಯಾಗಿದೆ. ಕೇವಲ ಆಹಾರ ಮತ್ತು ಅಂತಾರಾಜ್ಯ ಮಹಿಳೆಯರು ಸಂಕಷ್ಟಕ್ಕೆ ಸಿಲುಕಿದ ಬಗ್ಗೆಯಷ್ಟೇ ದೂರುಗಳು ಬಂದಿವೆ ಅಂತಾ ಹೇಳಿದೆ.

ಸೋಂಕಿತರು ರಕ್ತದಾನ ಮಾಡಬಹುದು..! ಕೊರೊನಾ ವೈರಸ್ ಬಂದ್ರೆ ಸಾಕು ಆ ವ್ಯಕ್ತಿಯಿಂದ ಮಾರು ದೂರು ಓಡಿ ಹೋಗುವವರೇ ಹೆಚ್ಚು. ಅದ್ರಲ್ಲೂ, ಸೋಂಕಿತ ಆಸ್ಪತ್ರೆಯಲ್ಲಿದ್ರೆ ಆತನನ್ನ ಸ್ಪರ್ಶಿಸಲು ಜನ ಹಿಂದೇಟ ಹಾಕ್ತಾರೆ. ಇನ್ನು ಸೋಂಕಿತನಿಂದ ರಕ್ತದಾನ ಮಾಡಬಹುದಾ ಅಂತಾ ಅಚ್ಚರಿ ಪಡಬೇಡಿ. ರಾಷ್ಟ್ರೀಯ ರಕ್ತದಾನ ವರ್ಗಾವಣೆ ಸಮಿತಿ NBTC ಪ್ರಕಾರ, ಕೊರೊನಾ ಸೋಂಕಿತ ವ್ಯಕ್ತಿ ಗುಣಮುಖನಾದ 28 ದಿನಗಳ ಬಳಿಕ ರಕ್ತದಾನ ಮಾಡಬಹುದಾಗಿದೆ ಅಂತಾ ಹೇಳಿದೆ.

ದೆಹಲಿಯಲ್ಲಿ ಟ್ರಾಫಿಕ್ ಜಾಮ್ ಕೊರೊನಾ ಸೋಂಕಿನಿಂದಾಗಿ ದೆಹಲಿ ತತ್ತರಿಸಿ ಹೋಗಿದೆ. ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 83 ಸಾವಿರಕ್ಕೆ ಏರಿಕೆಯಾದ್ರೆ, ಮೃತಪಟ್ಟವರ ಸಂಖ್ಯೆ 7,429ಕ್ಕೆ ಏರಿಕೆಯಾಗಿದೆ. ಹೀಗಾಗಿ, ಅನಗತ್ಯವಾಗಿ ಓಡಾಡುವವರ ಸಂಖ್ಯೆ ಹೆಚ್ಚಾಗಿದ್ದು, ಪೊಲೀಸರು ತಪಾಸಣೆ ಹೆಚ್ಚಿಸಿದ್ದಾರೆ. ಇದ್ರಿಂದ ಟ್ರಾಫಿಕ್ ಜಾಮ್ ಉಂಟಾಗಿದೆ. ದೆಹಲಿಯ ಪಶ್ಚಿಮ ಎಕ್ಸ್​ಪ್ರೆಸ್​ನಲ್ಲಿ ವಾಹನಗಳು ಸಾಲುಗಟ್ಟಿ ನಿಂತಿವೆ.

53 BSF ಸಿಬ್ಬಂದಿಗೆ ಸೋಂಕು ಕ್ರೂರಿ ಕೊರೊನಾ ವೈರಸ್ ತಡೆಗೆ ಪ್ರಾಣದ ಹಂಗು ತೊರೆದು ಕೊರೊನಾ ವಾರಿಯರ್ಸ್ ಅಖಾಡದಲ್ಲಿದ್ದಾರೆ. ಆದ್ರೆ, ಇವರಿಗೂ ವೈರಸ್ ಅಟ್ಯಾಕ್ ಮಾಡ್ತಿದೆ. ಕಳೆದ 24 ಗಂಟೆಗಳ ಅವಧಿಯಲ್ಲೇ 53 ಬಾರ್ಡರ್ ಸೆಕ್ಯೂರಿಟಿ ಫೋರ್ಸ್ ಸಿಬ್ಬಂದಿಗೆ ಕೊರೊನಾ ಸೋಂಕು ತಗುಲಿದೆ. ಪ್ರಸ್ತುತ 305 ಗಡಿ ಭದ್ರತಾ ಸಿಬ್ಬಂದಿ ಸೋಂಕಿನಿಂದ ನರಳಾಡುತ್ತಿದ್ದಾರೆ. ಕೇವಲ ನಾಲ್ವರು ಸಿಬ್ಬಂದಿ ಮಾತ್ರ ಸೋಂಕಿನಿಂದ ಗುಣಮುಖರಾಗಿದ್ದಾರೆ.

Published On - 5:04 pm, Tue, 30 June 20

ಹೆಚ್ಎಂಪಿವಿ 2001ರಿಂದ ಭಾರತದಲ್ಲಿದೆ, ನಿಶ್ಶಕ್ತರು ಇದರ ಟಾರ್ಗೆಟ್: ದಿನೇಶ್
ಹೆಚ್ಎಂಪಿವಿ 2001ರಿಂದ ಭಾರತದಲ್ಲಿದೆ, ನಿಶ್ಶಕ್ತರು ಇದರ ಟಾರ್ಗೆಟ್: ದಿನೇಶ್
ಹೆಚ್ಎಂಪಿ ವೈರಸ್ ಯಾವ ವೇರಿಯಂಟ್ ಅಂತ ನಾನು ಹೇಳಲಾಗಲ್ಲ: ಅಶ್ವಥ್ ನಾರಾಯಣ
ಹೆಚ್ಎಂಪಿ ವೈರಸ್ ಯಾವ ವೇರಿಯಂಟ್ ಅಂತ ನಾನು ಹೇಳಲಾಗಲ್ಲ: ಅಶ್ವಥ್ ನಾರಾಯಣ
ಸಂತೋಷ್ ಲಾಡ್ ತಮ್ಮ ಪಟಾಲಂನೊಂದಿಗೆ ಅಸ್ಪತ್ರೆಗೆ ಬಂದಿದ್ದು ಸರಿಯಲ್ಲ
ಸಂತೋಷ್ ಲಾಡ್ ತಮ್ಮ ಪಟಾಲಂನೊಂದಿಗೆ ಅಸ್ಪತ್ರೆಗೆ ಬಂದಿದ್ದು ಸರಿಯಲ್ಲ
ಎನ್ಕೌಂಟರ್ ನಡೆದ ಬಳಿಕ ಸಾಕಷ್ಟು ಬದಲಾವಣೆ ಆಗಿದೆ: ನಕ್ಸಲ್ ಸುಂದರಿಯ ಸಂಬಂಧಿ
ಎನ್ಕೌಂಟರ್ ನಡೆದ ಬಳಿಕ ಸಾಕಷ್ಟು ಬದಲಾವಣೆ ಆಗಿದೆ: ನಕ್ಸಲ್ ಸುಂದರಿಯ ಸಂಬಂಧಿ
ನಿಯಂತ್ರಣ ಕಳೆದುಕೊಂಡು ರಸ್ತೆಯ ಬದಿಯಲ್ಲಿ ಕುಳಿತ ಐವರ ಮೇಲೆ ಹರಿದ ಕಾರು
ನಿಯಂತ್ರಣ ಕಳೆದುಕೊಂಡು ರಸ್ತೆಯ ಬದಿಯಲ್ಲಿ ಕುಳಿತ ಐವರ ಮೇಲೆ ಹರಿದ ಕಾರು
ಆನೇಕಲ್: ಸಿಲಿಂಡರ್ ಸ್ಫೋಟ ತೀವ್ರತೆಗೆ ಮನೆ ಗೋಡೆ ಕಿಟಕಿ ಛಿದ್ರ, ಇಬ್ಬಗೆ ಗಾಯ
ಆನೇಕಲ್: ಸಿಲಿಂಡರ್ ಸ್ಫೋಟ ತೀವ್ರತೆಗೆ ಮನೆ ಗೋಡೆ ಕಿಟಕಿ ಛಿದ್ರ, ಇಬ್ಬಗೆ ಗಾಯ
ನಾ ಡಿಸೋಜ ಅಂತಿಮ ದರ್ಶನ, ಅಂತ್ಯಕ್ರಿಯೆ ಬಗ್ಗೆ ಪುತ್ರ ನವೀನ್ ಮಾಹಿತಿ
ನಾ ಡಿಸೋಜ ಅಂತಿಮ ದರ್ಶನ, ಅಂತ್ಯಕ್ರಿಯೆ ಬಗ್ಗೆ ಪುತ್ರ ನವೀನ್ ಮಾಹಿತಿ
ನಡುರಸ್ತೆಯಲ್ಲಿ ವಿದ್ಯಾರ್ಥಿನಿಯ ಕತ್ತು ಹಿಸುಕಿ ಕೊಲೆ ಮಾಡಲು ಯತ್ನಿಸಿದ ಯುವಕ
ನಡುರಸ್ತೆಯಲ್ಲಿ ವಿದ್ಯಾರ್ಥಿನಿಯ ಕತ್ತು ಹಿಸುಕಿ ಕೊಲೆ ಮಾಡಲು ಯತ್ನಿಸಿದ ಯುವಕ
ಕುದುರೆಮುಖ ಅರಣ್ಯದಲ್ಲಿ ನಕ್ಸಲ್​ ನಾಯಕಿ ಸುಂದರಿ ವಾಸ
ಕುದುರೆಮುಖ ಅರಣ್ಯದಲ್ಲಿ ನಕ್ಸಲ್​ ನಾಯಕಿ ಸುಂದರಿ ವಾಸ
ಆಸ್ಟ್ರೇಲಿಯಾದಲ್ಲಿ RCB ದಾಂಡಿಗನ ಸಿಡಿಲಬ್ಬರ: ಸ್ಪೋಟಕ ಅರ್ಧಶತಕ
ಆಸ್ಟ್ರೇಲಿಯಾದಲ್ಲಿ RCB ದಾಂಡಿಗನ ಸಿಡಿಲಬ್ಬರ: ಸ್ಪೋಟಕ ಅರ್ಧಶತಕ