ಪ್ರಧಾನಿ ಮೋದಿ ಭಾಷಣ -ವೀಕ್ಷಿಸಿ ಟಿವಿ9 ಕನ್ನಡ ಲೈವ್
ದೆಹಲಿ: ದೇಶವನ್ನುದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಭಾಷಣಕ್ಕೆ ಕ್ಷಣಗಣನೆ ಶುರುವಾಗಿದೆ. ಜು.1ರಿಂದ ಅನ್ಲಾಕ್ 2.0 ಜಾರಿಯಾಗುತ್ತಿರುವ ಹಿನ್ನೆಲೆಯಲ್ಲಿ ಅನ್ಲಾಕ್ 2.0 ಬಗ್ಗೆ ಪ್ರಧಾನಿ ಮೋದಿ ಮಾತನಾಡುವ ಸಾಧ್ಯತೆ ಇದೆ. ಸೋಂಕು ಹೆಚ್ಚಾಗುತ್ತಿರುವ ಸಂದರ್ಭದಲ್ಲಿ ಕೊರೊನಾ ಸಮರ ಹೇಗೆ ಮುಂದುವರಿಸಬೇಕೆಂದು ಇಂದಿನ ಭಾಷಣದಲ್ಲಿ ಪ್ರಧಾನಿ ಮೋದಿ ಪ್ರಸ್ತಾಪಿಸುವ ಸಾಧ್ಯತೆ ಇದೆ. ಸುದ್ದಿಗೋಷ್ಠಿಗೂ ಮುನ್ನ ದೆಹಲಿಯಲ್ಲಿ ಕೊರೊನಾಗೆ ಔಷಧ ಸಂಶೋಧನೆ ಬಗ್ಗೆ ಉನ್ನತ ಮಟ್ಟದ ಸಭೆ ನಡೆಸಿದರು. ಕೊರೊನಾಗೆ ಯಾವಾಗ ಔಷಧ ಸಿಗಲಿದೆ ಎನ್ನುವ ಬಗ್ಗೆ ಪರಿಶೀಲನಾ ಸಭೆ ನಡೆಸಿದ್ರು. […]
ದೆಹಲಿ: ದೇಶವನ್ನುದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಭಾಷಣಕ್ಕೆ ಕ್ಷಣಗಣನೆ ಶುರುವಾಗಿದೆ. ಜು.1ರಿಂದ ಅನ್ಲಾಕ್ 2.0 ಜಾರಿಯಾಗುತ್ತಿರುವ ಹಿನ್ನೆಲೆಯಲ್ಲಿ ಅನ್ಲಾಕ್ 2.0 ಬಗ್ಗೆ ಪ್ರಧಾನಿ ಮೋದಿ ಮಾತನಾಡುವ ಸಾಧ್ಯತೆ ಇದೆ. ಸೋಂಕು ಹೆಚ್ಚಾಗುತ್ತಿರುವ ಸಂದರ್ಭದಲ್ಲಿ ಕೊರೊನಾ ಸಮರ ಹೇಗೆ ಮುಂದುವರಿಸಬೇಕೆಂದು ಇಂದಿನ ಭಾಷಣದಲ್ಲಿ ಪ್ರಧಾನಿ ಮೋದಿ ಪ್ರಸ್ತಾಪಿಸುವ ಸಾಧ್ಯತೆ ಇದೆ.
ಸುದ್ದಿಗೋಷ್ಠಿಗೂ ಮುನ್ನ ದೆಹಲಿಯಲ್ಲಿ ಕೊರೊನಾಗೆ ಔಷಧ ಸಂಶೋಧನೆ ಬಗ್ಗೆ ಉನ್ನತ ಮಟ್ಟದ ಸಭೆ ನಡೆಸಿದರು. ಕೊರೊನಾಗೆ ಯಾವಾಗ ಔಷಧ ಸಿಗಲಿದೆ ಎನ್ನುವ ಬಗ್ಗೆ ಪರಿಶೀಲನಾ ಸಭೆ ನಡೆಸಿದ್ರು. ಸರ್ಕಾರದ ವೈಜ್ಞಾನಿಕ ಸಲಹೆಗಾರರು, PMO ಅಧಿಕಾರಿಗಳು, ನೀತಿ ಆಯೋಗದ ಸದಸ್ಯ ವಿ.ಕೆ.ಪೌಲ್ ಸೇರಿದಂತೆ ಆರೋಗ್ಯ ಇಲಾಖೆ ಅಧಿಕಾರಿಗಳು ಸಭೆಯಲ್ಲಿ ಭಾಗಿಯಾಗಿದ್ದರು.
ಚೀನಾ ಬಗ್ಗೆ ಪ್ರಸ್ತಾಪ? ಗಡಿಯಲ್ಲಿ ಚೀನಾದ ಕಾಟ, ದೇಶದಲ್ಲಿ ಚೀನಿ ವೈರಸ್ ಕಾಟವಿದೆ. ಹಾಗಾಗಿ ಚೀನಾ ವಿರುದ್ಧದ ಸಮರದಲ್ಲಿ ಗೆಲ್ಲಬೇಕೆಂಬ ಸಂದೇಶ ರವಾನೆ ಮಾಡುವ ಸಾಧ್ಯತೆ ಇದೆ. ಚೀನಿ ಆ್ಯಪ್ ಬ್ಯಾನ್ ಮಾಡಿರುವ ಬಗ್ಗೆಯೂ ಸುದ್ದಿಗೋಷ್ಠಿಯಲ್ಲಿ ಮೋದಿ ಪ್ರಸ್ತಾಪಿಸುವ ಸಾಧ್ಯತೆಯಿದೆ.
Published On - 3:49 pm, Tue, 30 June 20