ರಾಕ್ಷಸೀ ಮಿಡತೆಗಳ ಅಟ್ಟಹಾಸಕ್ಕೆ ಈ ವ್ಯವಸ್ಥೆ ಬ್ರೇಕ್ ಹಾಕುತ್ತದಾ?
ಭೂಮಿ ಮೇಲೆ ಕೊರೊನಾ ಕ್ರಿಮಿ, ಮೇಲೆ ಆಗಸದಲ್ಲಿ ಮಿಡತೆಗಳ ಜೈಂಟ್ ಅಟ್ಟಹಾಸದ ಮಧ್ಯೆ ಮನುಷ್ಯನ ಸ್ಥಿತಿ ತ್ರಿಶಂಕು ಆಗಿಬಿಟ್ಟಿದೆ. ಅದರಲ್ಲೂ ಉತ್ತರ ಭಾರತದಲ್ಲಿ ರೈತಾಪಿ ವರ್ಗದ ಗೋಳು ಕೇಳೋರು ಇಲ್ಲವಾಗಿದೆ. ಆದರೂ ಆಧುನಿಕ ತಂತ್ರಜ್ಞಾನ ರೈತನ ಕೈಹಿಡಿಯುವ ಕೆಲಸ ನಡೆದಿದೆ. ಆಗ್ರಾ ಜಿಲ್ಲೆಯಲ್ಲಿ ಮತ್ತೊಂದು ಸುತ್ತಿನಲ್ಲಿ ರಾಕ್ಷಸೀ ಮಿಡತೆಗಳು ತಾಂಡವವಾಡುತ್ತಿವೆ. ಆದರೆ ಇದಕ್ಕೆ ಬ್ರೇಕ್ ಹಾಕಲು ಕೃಷಿ ಇಲಾಖೆ ಮುಂದಾಗಿದೆ. ನಾಲ್ಕು ಬೃಹತ್ ಗಾತ್ರದ ಡ್ರೋನ್ಗಳನ್ನು ಬಳಸಿ, ರಾಕ್ಷಸ ಗಾತ್ರದ ಮಿಡತೆಗಳನ್ನು ನಿರ್ನಾಮ ಮಾಡುವ ಕೆಲಸ ನಡೆಯುತ್ತಿದೆ. […]
ಭೂಮಿ ಮೇಲೆ ಕೊರೊನಾ ಕ್ರಿಮಿ, ಮೇಲೆ ಆಗಸದಲ್ಲಿ ಮಿಡತೆಗಳ ಜೈಂಟ್ ಅಟ್ಟಹಾಸದ ಮಧ್ಯೆ ಮನುಷ್ಯನ ಸ್ಥಿತಿ ತ್ರಿಶಂಕು ಆಗಿಬಿಟ್ಟಿದೆ. ಅದರಲ್ಲೂ ಉತ್ತರ ಭಾರತದಲ್ಲಿ ರೈತಾಪಿ ವರ್ಗದ ಗೋಳು ಕೇಳೋರು ಇಲ್ಲವಾಗಿದೆ. ಆದರೂ ಆಧುನಿಕ ತಂತ್ರಜ್ಞಾನ ರೈತನ ಕೈಹಿಡಿಯುವ ಕೆಲಸ ನಡೆದಿದೆ.
ಆಗ್ರಾ ಜಿಲ್ಲೆಯಲ್ಲಿ ಮತ್ತೊಂದು ಸುತ್ತಿನಲ್ಲಿ ರಾಕ್ಷಸೀ ಮಿಡತೆಗಳು ತಾಂಡವವಾಡುತ್ತಿವೆ. ಆದರೆ ಇದಕ್ಕೆ ಬ್ರೇಕ್ ಹಾಕಲು ಕೃಷಿ ಇಲಾಖೆ ಮುಂದಾಗಿದೆ. ನಾಲ್ಕು ಬೃಹತ್ ಗಾತ್ರದ ಡ್ರೋನ್ಗಳನ್ನು ಬಳಸಿ, ರಾಕ್ಷಸ ಗಾತ್ರದ ಮಿಡತೆಗಳನ್ನು ನಿರ್ನಾಮ ಮಾಡುವ ಕೆಲಸ ನಡೆಯುತ್ತಿದೆ.
ಡ್ರೋನ್ಗಳ ಹಾರಾಟದಿಂದಲೇ ಮಿಡತೆಗಳು ಕಂಗೆಟ್ಟು ಓಡಲಿವೆ. ಅದರ ಶಬ್ದವೂ ಮಿಡತೆಗಳ ಅಟ್ಟಹಾಸಕ್ಕೆ ಪೆಟ್ಟು ನೀಡಲಿದೆ. ಎಲ್ಲಕ್ಕಿಂತ ಮುಖ್ಯವಾಗಿ.. ಗಾಳಿಯಲ್ಲಿ ಕ್ರಿಮಿನಾಶಕ ಸಿಂಪಡಿಸುವುದು ನೆಲದ ಮೇಲಿಂದ ಸೂಕ್ತ ಅಲ್ಲ. ಹಾಗಾಗಿ ಜಿಲ್ಲಾ ಕೃಷಿ ಇಲಾಖೆಯು ಡ್ರೋನ್ಗಳ ಮೂಲಕ ಕ್ರಿಮಿನಾಶಕ ಸಿಂಪಡಿಸುತ್ತಿದೆ. ಇದರಿಂದ ಸಾವಿರಾರು ಮಿಡತೆಗಳು ಉಸಿರುಚೆಲ್ಲಿ ನೆಲಕ್ಕೆ ಅಪ್ಪಳಿಸುತ್ತಿವೆ.