ಕೊರೊನಾ ವಿರುದ್ಧ ಸಮರ: ಸಮರೋಪಾದಿಯಲ್ಲಿ ಕೋವಿಡ್‌ ಸೆಂಟರ್‌ ನಿರ್ಮಾಣ, ಎಲ್ಲಿ?

ಬೆಂಗಳೂರು: ಕೊರೊನಾ ಹೆಮ್ಮಾರಿಯ ರುದ್ರನರ್ತನ ದಿನೇ ದಿನೇ ಹೆಚ್ಚಾಗುತ್ತಿದೆ. ಹೀಗಾಗಿ ಹೆಮ್ಮಾರಿಯ ವಿರುದ್ಧ ವ್ಯವಸ್ಥಿತ ಹೋರಾಟಕ್ಕೆ ಸಜ್ಜಾಗುತ್ತಿರುವ ರಾಜ್ಯ ಸರ್ಕಾರ, ಇದಕ್ಕಾಗಿ ಅಗತ್ಯ ಕ್ರಮಗಳಿಗೆ ಮುಂದಾಗಿದೆ. ಈ ಸಂಬಂಧ ತುಮಕೂರು ರಸ್ತೆಯಲ್ಲಿ ಬೃಹತ್‌ ಕೋವಿಡ್‌ ಕೇರ್‌ ಸೆಂಟರ್‌ನ್ನು ರೆಡಿ ಮಾಡ್ತಿದೆ. ರೋಗ ಲಕ್ಷಣಗಳಿರದ ಕೋವಿಡ್‌ ಸೋಂಕಿತರ ಚಿಕಿತ್ಸೆಗಾಗಿ ರೆಡಿ ಹೌದು, ಪೂನಾ ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ನಾಲ್ಕಕ್ಕೆ ಹೊಂದಿಕೊಂಡಂತೆ ಬೆಂಗಳೂರಿನ ಹೊರವಲಯದಲ್ಲಿರುವ ಬೆಂಗಳೂರು ಅಂತಾರಾಷ್ಟ್ರೀಯ ವಸ್ತುಪ್ರದರ್ಶನ ಕೇಂದ್ರದಲ್ಲಿ ಕೋವಿಡ್‌ ಕೇರ್‌ ಸೆಂಟರ್‌ನ ನಿರ್ಮಾಣ ಮಾಡ್ತಿದೆ ರಾಜ್ಯ ಸರ್ಕಾರ. […]

ಕೊರೊನಾ ವಿರುದ್ಧ ಸಮರ: ಸಮರೋಪಾದಿಯಲ್ಲಿ ಕೋವಿಡ್‌ ಸೆಂಟರ್‌ ನಿರ್ಮಾಣ, ಎಲ್ಲಿ?
Guru

| Edited By: sadhu srinath

Jun 30, 2020 | 3:03 PM

ಬೆಂಗಳೂರು: ಕೊರೊನಾ ಹೆಮ್ಮಾರಿಯ ರುದ್ರನರ್ತನ ದಿನೇ ದಿನೇ ಹೆಚ್ಚಾಗುತ್ತಿದೆ. ಹೀಗಾಗಿ ಹೆಮ್ಮಾರಿಯ ವಿರುದ್ಧ ವ್ಯವಸ್ಥಿತ ಹೋರಾಟಕ್ಕೆ ಸಜ್ಜಾಗುತ್ತಿರುವ ರಾಜ್ಯ ಸರ್ಕಾರ, ಇದಕ್ಕಾಗಿ ಅಗತ್ಯ ಕ್ರಮಗಳಿಗೆ ಮುಂದಾಗಿದೆ. ಈ ಸಂಬಂಧ ತುಮಕೂರು ರಸ್ತೆಯಲ್ಲಿ ಬೃಹತ್‌ ಕೋವಿಡ್‌ ಕೇರ್‌ ಸೆಂಟರ್‌ನ್ನು ರೆಡಿ ಮಾಡ್ತಿದೆ.

ರೋಗ ಲಕ್ಷಣಗಳಿರದ ಕೋವಿಡ್‌ ಸೋಂಕಿತರ ಚಿಕಿತ್ಸೆಗಾಗಿ ರೆಡಿ ಹೌದು, ಪೂನಾ ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ನಾಲ್ಕಕ್ಕೆ ಹೊಂದಿಕೊಂಡಂತೆ ಬೆಂಗಳೂರಿನ ಹೊರವಲಯದಲ್ಲಿರುವ ಬೆಂಗಳೂರು ಅಂತಾರಾಷ್ಟ್ರೀಯ ವಸ್ತುಪ್ರದರ್ಶನ ಕೇಂದ್ರದಲ್ಲಿ ಕೋವಿಡ್‌ ಕೇರ್‌ ಸೆಂಟರ್‌ನ ನಿರ್ಮಾಣ ಮಾಡ್ತಿದೆ ರಾಜ್ಯ ಸರ್ಕಾರ. ಇದಕ್ಕಾಗಿ ಬೇಕಾದ ಅಗತ್ಯ ತಯಾರಿ ಆರಂಭಗೊಂಡಿದೆ. ತುಮಕೂರು ರಸ್ತೆಯ ಮಾದವಾರ ಬಳಿ ಇರುವ BIEC ಕೇಂದ್ರದಲ್ಲಿರುವ ಐದು ಬೃಹತ್‌ ಹಾಲ್‌ಗಳನ್ನ ಈಗ ರೋಗ ಲಕ್ಷಣಗಳಿರದ ಕೋವಿಡ್‌ ಸೋಂಕಿತರ ಚಿಕಿತ್ಸೆಗಾಗಿ ರೆಡಿ ಮಾಡಲಾಗ್ತಿದೆ.

7,000 ಸೋಂಕಿತರಿಗೆ ಚಿಕಿತ್ಸೆ ಇದಕ್ಕಾಗಿ ಸುಮಾರು 7,000 ಬೆಡ್‌ಗಳ ವ್ಯವಸ್ಥೆಯನ್ನು ಸೆಂಟರ್‌ನ ಐದು ಹಾಲ್‌ಗಳಲ್ಲಿ ಮಾಡಲಾಗ್ತಿದೆ. ಸೋಂಕಿತರಿಗೆ ಬೆಡ್‌, ಅಗತ್ಯ ವಸ್ತುಗಳನ್ನಿಟ್ಟುಕೊಳ್ಳಲು ಕಪ್​ ಬೋರ್ಡ್‌ಗಳನ್ನ ನಿರ್ಮಿಸಲಾಗ್ತಿದೆ.

ಇದರ ಜೊತೆಗೆ ವೈದ್ಯರ ಕೊಠಡಿ, ಟೆಸ್ಟಿಂಗ್‌ ಕೊಠಡಿಗಳು ಮತ್ತು ಇತರ ವೈದ್ಯಕೀಯ ಸಿಬ್ಬಂದಿಯ ಕೊಠಡಿಗಳನ್ನ ನಿರ್ಮಿಸಲಾಗ್ತಿದೆ. ಜೊತಗೆ ಅಗತ್ಯ ವೈದ್ಯಕೀಯ ಸಲಕರಣೆಗಳು, ಕಿಟ್‌ಗಳು ಮತ್ತು ಬೇಕಾದಂತಹ ಔಷಧೋಪಚಾರಗಳನ್ನು ಸಂಗ್ರಹಿಸಿಡಲು ವ್ಯವಸ್ಥೆ ಮಾಡಲಾಗ್ತಿದೆ.

ಸಮರ್ಪಕ ಮೂಲ ಸೌಕರ್ಯ ವೈದ್ಯಕೀಯ ಸೌಕರ್ಯಗಳಲ್ಲದೇ ರೋಗಿಗಳು, ವೈದ್ಯ ಸಿಬ್ಬಂದಿ ಮತ್ತು ಇತರ ಕೋವಿಡ್‌ ವಾರಿಯರ್ಸ್‌ಗೆ ರೆಸ್ಟ್‌ ಪಡೆಯಲು ಪ್ರತೇಕ ಕೊಠಡಿಗಳನ್ನು ನಿರ್ಮಿಸಲಾಗ್ತಿದೆ. ಇವೆಲ್ಲವುಗಳ ಜೊತಗೆ ಮೂಲಭೂತ ಸೌಕರ್ಯಗಳಾದ ನೀರು, ಗಾಳಿ, ರೆಸ್ಟ್‌ರೂಮ್‌ಗಳು ಮತ್ತು ಬೆಿಳಕಿನ ವ್ಯವಸ್ಥೆಗೆ ಬೇಕಾದ ಸೌಲಭ್ಯಗಳನ್ನ ಕಲ್ಪಿಸಲಾಗ್ತಿದೆ.

ಭದ್ರತೆಗಾಗಿ ಬಿಬಿಎಂಪಿ ಮಾರ್ಷಲ್ಸ್ ಕೋವಿಡ್ ಕೇರ್ ಸೆಂಟರ್‌ನಲ್ಲಿ ಕಾರ್ಯ ನಿರ್ವಹಿಸಲಿದ್ದಾರೆ. ಒಟ್ಟಿನಲ್ಲಿ ಯಾವುದೇ ತೊಂದರೆಯಾಗದಂತೆ ಸೋಂಕಿತರಿಗೆ ಚಿಕಿತ್ಸೆ ನೀಡಲು ಅನುಕೂಲ ಕಲ್ಪಿಸಲಾಗುತ್ತಿದೆ ಎಂದು ಬಿಬಿಎಂಪಿ ಜಂಟಿ ಆಯುಕ್ತ ನರಸಿಂಹಮೂರ್ತಿ ತಿಳಿಸಿದ್ದಾರೆ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada