AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸೋಮನಾಥನ ಮೇಲೆ ದಾಳಿ ಮಾಡಿದವರೆಲ್ಲಾ ಸಮಾಧಿಯಾದರು, ಆದರೆ ಸೋಮನಾಥ ಅಲ್ಲೇ ನಿಂತಿದ್ದಾನೆ: ಮೋದಿ

ಪ್ರಧಾನಿ ನರೇಂದ್ರ ಮೋದಿ ಸೋಮನಾಥ ದೇವಾಲಯದ ಅಚಲ ಇತಿಹಾಸವನ್ನು ಸ್ಮರಿಸಿದ್ದಾರೆ. ಘಜ್ನಿ, ಔರಂಗಜೇಬರ ದಾಳಿಗಳ ನಡುವೆಯೂ ಸೋಮನಾಥ ಅದೆಲ್ಲವನ್ನೂ ನೋಡುತ್ತಾ ಹಾಗೇ ನಿಂತಿದ್ದಾನೆ ಎಂದು ಮೋದಿ ಹೇಳಿದರು. ಇದರ ಪುನರ್ನಿರ್ಮಾಣಕ್ಕೆ ಸರ್ದಾರ್ ಪಟೇಲ್ ಪ್ರಯತ್ನಗಳು ಮತ್ತು ಇಂದಿಗೂ ದೇವಾಲಯವು ಭಾರತದ ಶಕ್ತಿಯ ಸಂಕೇತವಾಗಿರುವುದನ್ನು ಪ್ರಧಾನಿ ಎತ್ತಿ ತೋರಿಸಿದ್ದಾರೆ.

ಸೋಮನಾಥನ ಮೇಲೆ ದಾಳಿ ಮಾಡಿದವರೆಲ್ಲಾ ಸಮಾಧಿಯಾದರು, ಆದರೆ ಸೋಮನಾಥ ಅಲ್ಲೇ ನಿಂತಿದ್ದಾನೆ: ಮೋದಿ
ನರೇಂದ್ರ ಮೋದಿ
ನಯನಾ ರಾಜೀವ್
|

Updated on: Jan 11, 2026 | 1:09 PM

Share

ಅಹಮದಾಬಾದ್, ಜನವರಿ 11: ಘಜ್ನಿಯಿಂದ ಔರಂಗಜೇಬನವರೆಗೆ ಸೋಮನಾಥ ದೇವಾಲಯ(Somnath Temple)ದ ಮೇಲೆ ದಾಳಿ ಮಾಡಿದವರೆಲ್ಲಾ ಸಮಾಧಿಯಾದರು. ಆದರೆ ಸೋಮನಾಥ ಅದೆಲ್ಲವನ್ನೂ ನೋಡುತ್ತಾ ಅಲ್ಲೇ ನಿಂತಿದ್ದಾನೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಘಜ್ನಿ 1026ರಲ್ಲಿ ಮೊದಲ ಬಾರಿಗೆ ಸೋಮನಾಥ ದೇವಾಲಯದ ಮೇಲೆ ದಾಳಿ ನಡೆಸಿ, ಚಿನ್ನಾಭರಣಗಳನ್ನೆಲ್ಲಾ ದೋಚಿದ್ದ ಈ ಘಟನೆ ನಡೆದು ಸಾವಿರ ವರ್ಷಗಳೇ ಸಂದಿವೆ.

ಇದೀಗ ಪ್ರಧಾನಿ ಮೋದಿ ಆ ಘಟನೆಯ ಬಗ್ಗೆ ಮಾತನಾಡಿದ್ದಾರೆ. ಬಂದವರು ದಾಳಿ ಮಾಡಿ ಹೋಗಿ ಮಸಣ ಸೇರಿದರು ಆದರೆ ಸೋಮನಾಥ ಮಾತ್ರ ಅಲ್ಲೇ ಹಾಗೆಯೇ ನಿಂತಿದ್ದಾನೆ ಎಂದರು. ಸೋಮನಾಥನ ಪವಿತ್ರ ವಿಗ್ರಹವನ್ನು ನಾಶಪಡಿಸಲಾಯಿತು. ಸೋಮನಾಥದ ಇತಿಹಾಸವನ್ನು ಮರೆಮಾಡಲಾಗಿದೆ, ಧಾರ್ಮಿಕ ಮತಾಂಧತೆಯನ್ನು ಸರಳ ದರೋಡೆ ಎಂದು ಚಿತ್ರಿಸಲಾಗಿದೆ ಎಂದು ಪ್ರಧಾನಿ ಮೋದಿ ಹೇಳಿದರು.

ನಾವು ಜೀವಿಗಳಲ್ಲಿಯೂ ಶಿವನನ್ನು ನೋಡುವ ಜನರು, ಸೋಮನಾಥ ದೇವಾಲಯದ ಶೌರ್ಯದ ಗಾಥೆ 1000 ವರ್ಷಗಳನ್ನು ಪೂರೈಸಿದ್ದರೆ, ಸೋಮನಾಥ ದೇವಾಲಯದ ಪುನರ್ನಿರ್ಮಾಣಕ್ಕೆ 75 ವರ್ಷಗಳು ಪೂರ್ಣಗೊಂಡಿವೆ. ನಮ್ಮ ಪೂರ್ವಜರು ತಮ್ಮ ಭಗವಾನ್ ಶಿವನಿಗಾಗಿ ಎಲ್ಲವನ್ನೂ ತ್ಯಾಗ ಮಾಡಿದರು. ಅವರು ತಮ್ಮ ಪ್ರಾಣವನ್ನೇ ಪಣಕ್ಕಿಟ್ಟರು.

ಗುಜರಾತ್ ಭೇಟಿಯ ಎರಡನೇ ದಿನದಂದು, ಪ್ರಧಾನಿ ನರೇಂದ್ರ ಮೋದಿ ಅವರು ಸೋಮನಾಥದಲ್ಲಿ ಶೌರ್ಯ ಯಾತ್ರೆಯಲ್ಲಿ ಭಾಗವಹಿಸಿದರು. ಸೋಮನಾಥ ದೇವಾಲಯವನ್ನು ರಕ್ಷಿಸುವಲ್ಲಿ ಪ್ರಾಣ ತ್ಯಾಗ ಮಾಡಿದ ಅಸಂಖ್ಯಾತ ವೀರ ಯೋಧರಿಗೆ ಗೌರವ ಸಲ್ಲಿಸಲು ಈ ವಿಧ್ಯುಕ್ತ ಮೆರವಣಿಗೆಯನ್ನು ಆಯೋಜಿಸಲಾಗಿತ್ತು. ಶೌರ್ಯ ಯಾತ್ರೆಯು ಶೌರ್ಯ, ಧೈರ್ಯ ಮತ್ತು ತ್ಯಾಗದ ಸಂಕೇತವೆಂದು ಪರಿಗಣಿಸಲಾದ 108 ಕುದುರೆಗಳನ್ನು ಹೊಂದಿರುವ ಸಾಂಕೇತಿಕ ಮೆರವಣಿಗೆಯನ್ನು ಒಳಗೊಂಡಿತ್ತು.

ಮತ್ತಷ್ಟು ಓದಿ: ಸೋಮನಾಥ ದೇವಾಲಯದ ಮೇಲೆ 1026ರಿಂದ ಎಷ್ಟು ಬಾರಿ ನಡೆದಿತ್ತು ದಾಳಿ ಮತ್ತು ಯಾವಾಗ? ಇಲ್ಲಿದೆ ಮಾಹಿತಿ

ಇದರ ನಂತರ, ಪ್ರಧಾನಿ ಮೋದಿ ಸೋಮನಾಥ ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದರು. 1000 ವರ್ಷಗಳ ಹಿಂದೆ ಭಾರತದ ಮೇಲೆ ದಂಡೆತ್ತಿ ಬಂದವರು ತಾವು ಗೆದ್ದಿದ್ದೇವೆ ಎಂದು ಭಾವಿಸುತ್ತಿದ್ದರು, ಆದರೆ ಇಂದಿಗೂ ಸೋಮನಾಥ ದೇವಾಲಯದಲ್ಲಿ ಹಾರುತ್ತಿರುವ ಧ್ವಜವು ಭಾರತದ ಶಕ್ತಿ ಏನೆಂದು ಹೇಳುತ್ತಿದೆ ಎಂದು ಹೇಳಿದರು.

ದುರದೃಷ್ಟವಶಾತ್, ಸೋಮನಾಥದ ಪುನರ್ನಿರ್ಮಾಣವನ್ನು ವಿರೋಧಿಸಿದ ಅದೇ ಶಕ್ತಿಗಳು ನಮ್ಮ ದೇಶದಲ್ಲಿ ಇನ್ನೂ ಅಸ್ತಿತ್ವದಲ್ಲಿವೆ. ಸರ್ದಾರ್ ಪಟೇಲ್ ಸೋಮನಾಥವನ್ನು ಪುನರ್ನಿರ್ಮಿಸಲು ಪ್ರತಿಜ್ಞೆ ಮಾಡಿದಾಗ (1951 ರಲ್ಲಿ), ಅವರನ್ನು ತಡೆಯಲು ಪ್ರಯತ್ನಗಳು ನಡೆದವು. ಇಂದೂ ಕೂಡ ನಾವು ಜಾಗರೂಕರಾಗಿರಬೇಕು ಮತ್ತು ಒಗ್ಗಟ್ಟಿನಿಂದ ಇರಬೇಕು. ನಮ್ಮನ್ನು ವಿಭಜಿಸಲು ಪ್ರಯತ್ನಿಸುತ್ತಿರುವ ಶಕ್ತಿಗಳ ಬಗ್ಗೆ ನಾವು ಜಾಗರೂಕರಾಗಿರಬೇಕು ಎಂದು ಹೇಳಿದರು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ