ಸ್ಯಾಂಡಲ್ವುಡ್ ನಟಿ, ಉದ್ಯಮಿ ನಂಟಿನ ಕೇಸ್ಗೆ ಬಿಗ್ ಟ್ವಿಸ್ಟ್: ಮಹತ್ವದ ಸಾಕ್ಷ್ಯ ಲಭ್ಯ
ಸ್ಯಾಂಡಲ್ವುಡ್ ನಟಿ ಮತ್ತು ಉದ್ಯಮಿ ಅರವಿಂದ್ ರೆಡ್ಡಿ ನಡುವಿನ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. ನಟಿಗೆ ಉದ್ಯಮಿ ಲಕ್ಷಾಂತರ ಮೌಲ್ಯದ ಕಾರು, ಚಿನ್ನಾಭರಣ, ಗೃಹೋಪಯೋಗಿ ವಸ್ತುಗಳನ್ನು ಉಡುಗೊರೆಯಾಗಿ ನೀಡಿದ್ದರು ಎಂಬ ಸಾಕ್ಷಿಗಳು ಲಭ್ಯವಾಗಿವೆ. ಇವರಿಬ್ಬರೂ ಲಿವಿನ್ ರಿಲೇಶನ್ಶಿಪ್ನಲ್ಲಿದ್ದರು ಎನ್ನುವ ವಿಷಯವೂ ಬಹಿರಂಗಗೊಂಡಿದೆ.
ಬೆಂಗಳೂರು, ಜನವರಿ 11: ಸ್ಯಾಂಡಲ್ವುಡ್ ನಟಿ ಮತ್ತು ಉದ್ಯಮಿ ಅರವಿಂದ್ ರೆಡ್ಡಿ ನಂಟಿನ ಪ್ರಕರಣವು ಹೊಸ ತಿರುವು ಪಡೆದುಕೊಂಡಿದೆ. ಈ ಹಿಂದೆ ಬಹಳ ಚರ್ಚೆಗೆ ಕಾರಣವಾಗಿದ್ದ ಈ ಪ್ರಕರಣದಲ್ಲಿ, ನಟಿಗೆ ಉದ್ಯಮಿ ಅರವಿಂದ್ ರೆಡ್ಡಿ ಕೇವಲ ಕಾರು ಮಾತ್ರವಲ್ಲದೆ ಲಕ್ಷಾಂತರ ಮೌಲ್ಯದ ದುಬಾರಿ ಉಡುಗೊರೆಗಳನ್ನು ನೀಡಿದ್ದಾರೆ ಎಂಬುದಕ್ಕೆ ಸಾಕ್ಷ್ಯಗಳು ಲಭ್ಯವಾಗಿವೆ. ಅರವಿಂದ್ ರೆಡ್ಡಿ ನಟಿಯೊಂದಿಗೆ ಲಿವಿನ್ ರಿಲೇಶನ್ಶಿಪ್ನಲ್ಲಿದ್ದಾಗ, ಆಕೆಗೆ 7 ಲಕ್ಷ ಮೌಲ್ಯದ ಟಿವಿ, 1 ಲಕ್ಷ ಮೌಲ್ಯದ ಹಾಸಿಗೆ, 10 ಲಕ್ಷ ಮೌಲ್ಯದ ಫರ್ನಿಚರ್, 33 ಸಾವಿರ ಮೌಲ್ಯದ ಡೈನಿಂಗ್ ಸೆಟ್, 1.30 ಲಕ್ಷ ಮೌಲ್ಯದ ಬೆಡ್, ಮತ್ತು 15 ಲಕ್ಷ ಮೌಲ್ಯದ ಚಿನ್ನಾಭರಣ ಸೇರಿದಂತೆ ಹಲವು ಬೆಲೆಬಾಳುವ ವಸ್ತುಗಳನ್ನು ನೀಡಿದ್ದಾರೆ ಎನ್ನಲಾಗಿದೆ.
ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.
Latest Videos
