ಗುಡಿಸಲಿಗೆ ನುಗ್ಗಿ ಒಂಟಿ ಮಹಿಳೆ ಮೇಲೆ 50 ಜನರ ಗುಂಪಿನಿಂದ ಮಾರಣಾಂತಿಕ ಹಲ್ಲೆ! ಏಕೆ?

| Updated By:

Updated on: Jul 09, 2020 | 12:40 PM

ರಾಯಚೂರು: ಗುಡಿಸಲಿಗೆ ನುಗ್ಗಿ 50 ಜನರ ಗುಂಪು ಮಹಿಳೆ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಸಿಂಧನೂರು ತಾಲೂಕಿನ ಪಾಂಡುರಂಗ ಕ್ಯಾಂಪ್​ನಲ್ಲಿ ನಡೆದಿದೆ. ಜಮೀನು ವಿವಾದ ಹಿನ್ನೆಲೆಯಲ್ಲಿ 50 ಜನರ ಗುಂಪು ಪಾಂಡುರಂಗ ಕ್ಯಾಂಪ್​ನಲ್ಲಿದ್ದ ಮಹಿಳೆಯ ಗುಡಿಸಲಿಗೆ ನುಗ್ಗಿ ಮಹಿಳೆ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ. ಗುಡಿಸಲು ಧ್ವಂಸ ಮಾಡಿದ್ದಾರೆ. ಸುಜಾತಾ ಎಂಬುವವರ ಮೇಲೆ ಪಾಪಿಗಳು ಹಲ್ಲೆ ನಡೆಸಿದ್ದಾರೆ. ಸದ್ಯ ಗಾಯಾಳು ಮಹಿಳೆಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಹಲ್ಲೆ ಬಳಿಕ ಗುಡಿಸಲಿನಲ್ಲಿದ್ದ 5 ಲಕ್ಷ ನಗದು ಮತ್ತು […]

ಗುಡಿಸಲಿಗೆ ನುಗ್ಗಿ ಒಂಟಿ ಮಹಿಳೆ ಮೇಲೆ 50 ಜನರ ಗುಂಪಿನಿಂದ ಮಾರಣಾಂತಿಕ ಹಲ್ಲೆ! ಏಕೆ?
Follow us on

ರಾಯಚೂರು: ಗುಡಿಸಲಿಗೆ ನುಗ್ಗಿ 50 ಜನರ ಗುಂಪು ಮಹಿಳೆ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಸಿಂಧನೂರು ತಾಲೂಕಿನ ಪಾಂಡುರಂಗ ಕ್ಯಾಂಪ್​ನಲ್ಲಿ ನಡೆದಿದೆ.

ಜಮೀನು ವಿವಾದ ಹಿನ್ನೆಲೆಯಲ್ಲಿ 50 ಜನರ ಗುಂಪು ಪಾಂಡುರಂಗ ಕ್ಯಾಂಪ್​ನಲ್ಲಿದ್ದ ಮಹಿಳೆಯ ಗುಡಿಸಲಿಗೆ ನುಗ್ಗಿ ಮಹಿಳೆ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ. ಗುಡಿಸಲು ಧ್ವಂಸ ಮಾಡಿದ್ದಾರೆ. ಸುಜಾತಾ ಎಂಬುವವರ ಮೇಲೆ ಪಾಪಿಗಳು ಹಲ್ಲೆ ನಡೆಸಿದ್ದಾರೆ.

ಸದ್ಯ ಗಾಯಾಳು ಮಹಿಳೆಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಹಲ್ಲೆ ಬಳಿಕ ಗುಡಿಸಲಿನಲ್ಲಿದ್ದ 5 ಲಕ್ಷ ನಗದು ಮತ್ತು 150ಗ್ರಾಂ ಚಿನ್ನ ದೋಚಿ ಪರಾರಿಯಾಗಿದ್ದಾರೆ. ತುರವಿಹಾಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, 10 ಆರೋಪಿಗಳ ವಿರುದ್ಧ ಎಫ್ಐಆರ್ ದಾಖಲಾಗಿದೆ.

Published On - 8:52 am, Thu, 9 July 20