15 ಆಸ್ಪತ್ರೆ ಸುತ್ತಿದರೂ ಸಿಗ್ಲಿಲ್ಲ ಚಿಕಿತ್ಸೆ, ಆಸ್ಪತ್ರೆಗಳ ಅಮಾನವೀಯ ನಡೆಗೆ ವೃದ್ಧೆ ಬಲಿ

ಬೆಂಗಳೂರು: ಇನ್ನೂ ನಿಂತಿಲ್ಲ ಆಸ್ಪತ್ರೆಗಳ ನಿರ್ಲಕ್ಷ್ಯ. ಕೊರೊನಾ ಮರಣ ಮೃದಂಗದ ಜೊತೆ ಆಸ್ಪತ್ರೆ ಸಿಬ್ಬಂದಿಗಳ ನಿರ್ಲಕ್ಷ್ಯಕ್ಕೆ ಹೆಚ್ಚಿನ ಜನ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಕಣ್ಣ ಮುಂದೆ ನಿಂತು ಚಿಕಿತ್ಸೆಗಾಗಿ ಅಂಗಲಾಚಿದರೂ ವೈದ್ಯರ ಹೃದಯ ಕರುಗುತ್ತಿಲ್ಲ. ಜೀವ ಉಳಿಸಬೇಕಿದ್ದ ವೈದ್ಯರೇ ಈಗ ಪ್ರಾಣ ಹೋಗುವುದಕ್ಕೆ ಕಾರಣವಾಗುತ್ತಿದ್ದಾರಾ? ಎಂಬಂತಾಗಿದೆ. 15 ಆಸ್ಪತ್ರೆಗಳಿಗೆ ಸುತ್ತಿದರೂ ಚಿಕಿತ್ಸೆ ಸಿಗದೆ ವೃದ್ಧೆ ಮೃತಪಟ್ಟಿರುವ ಮನಕಲಕುವ ಘಟನೆ ಮರುಕಳಿಸಿದೆ. ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಪತ್ನಿಗೆ ಚಿಕಿತ್ಸೆಕೊಡಿಸಲು ವೃದ್ಧ ಪತಿ 2 ದಿನಗಳಿಂದ ಬರೋಬ್ಬರಿ 15 ಆಸ್ಪತ್ರೆಗಳಿಗೆ ಸುತ್ತಾಡಿದ್ದಾರೆ. […]

15 ಆಸ್ಪತ್ರೆ ಸುತ್ತಿದರೂ ಸಿಗ್ಲಿಲ್ಲ ಚಿಕಿತ್ಸೆ, ಆಸ್ಪತ್ರೆಗಳ ಅಮಾನವೀಯ ನಡೆಗೆ ವೃದ್ಧೆ ಬಲಿ
Follow us
ಆಯೇಷಾ ಬಾನು
| Updated By:

Updated on:Jul 06, 2020 | 1:53 PM

ಬೆಂಗಳೂರು: ಇನ್ನೂ ನಿಂತಿಲ್ಲ ಆಸ್ಪತ್ರೆಗಳ ನಿರ್ಲಕ್ಷ್ಯ. ಕೊರೊನಾ ಮರಣ ಮೃದಂಗದ ಜೊತೆ ಆಸ್ಪತ್ರೆ ಸಿಬ್ಬಂದಿಗಳ ನಿರ್ಲಕ್ಷ್ಯಕ್ಕೆ ಹೆಚ್ಚಿನ ಜನ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಕಣ್ಣ ಮುಂದೆ ನಿಂತು ಚಿಕಿತ್ಸೆಗಾಗಿ ಅಂಗಲಾಚಿದರೂ ವೈದ್ಯರ ಹೃದಯ ಕರುಗುತ್ತಿಲ್ಲ. ಜೀವ ಉಳಿಸಬೇಕಿದ್ದ ವೈದ್ಯರೇ ಈಗ ಪ್ರಾಣ ಹೋಗುವುದಕ್ಕೆ ಕಾರಣವಾಗುತ್ತಿದ್ದಾರಾ? ಎಂಬಂತಾಗಿದೆ.

15 ಆಸ್ಪತ್ರೆಗಳಿಗೆ ಸುತ್ತಿದರೂ ಚಿಕಿತ್ಸೆ ಸಿಗದೆ ವೃದ್ಧೆ ಮೃತಪಟ್ಟಿರುವ ಮನಕಲಕುವ ಘಟನೆ ಮರುಕಳಿಸಿದೆ. ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಪತ್ನಿಗೆ ಚಿಕಿತ್ಸೆಕೊಡಿಸಲು ವೃದ್ಧ ಪತಿ 2 ದಿನಗಳಿಂದ ಬರೋಬ್ಬರಿ 15 ಆಸ್ಪತ್ರೆಗಳಿಗೆ ಸುತ್ತಾಡಿದ್ದಾರೆ. ಆದರೆ ಕೊನೆಗೂ ಚಿಕಿತ್ಸೆ ಸಿಗದೆ ಬಿಳೇಕಹಳ್ಳಿಯ 64 ವರ್ಷದ ವೃದ್ಧೆ ಮೃತಪಟ್ಟಿದ್ದಾರೆ.

ಜಯನಗರದ ಸಾರ್ವಜನಿಕ ಆಸ್ಪತ್ರೆ, ಸಂಜಯ್ ಗಾಂಧಿ, ಕಿಮ್ಸ್, ಸೇಂಟ್ ಜಾನ್ಸ್, ವಿಕ್ಟೋರಿಯಾ, ಪ್ರಶಾಂತ್ ಆಸ್ಪತ್ರೆ, ಕೆ.ಸಿ.ಜನರಲ್ ಆಸ್ಪತ್ರೆ, ಬೌರಿಂಗ್, ಫೋರ್ಟಿಸ್ ಆಸ್ಪತ್ರೆ, ರಾಜರಾಜಶ್ವೇರಿ ನಗರದಲ್ಲಿರುವ ಮೆಡಿಕಲ್ ಕಾಲೇಜ್, ಬಿಜಿಎಸ್ ಆಸ್ಪತ್ರೆ, ಅಪೋಲೊ, ಸಾಯಿ ರಾಂ ಆಸ್ಪತ್ರೆ, ಕೆಂಗೇರಿಯಲ್ಲಿದ್ದ ನರ್ಸಿಂಗ್ ಹೋಮ್‌ ಸೇರಿದಂತೆ ಎಲ್ಲಾ ಕಡೆ ಸುತ್ತಾಡಿದರೂ ವೃದ್ಧೆಗೆ ಚಿಕಿತ್ಸೆ ಸಿಗಲೇ ಇಲ್ಲ.

ಕೊನೆಗೆ ಚಿಕಿತ್ಸೆ ಸಿಗದೆ ವೃದ್ಧೆ ಕೊನೆಯುಸಿರೆಳೆದಿದ್ದಾರೆ. ಎಷ್ಟೇ ಕಷ್ಟಪಟ್ಟು ಪ್ರಯತ್ನಿಸಿದ್ರು ಆಸ್ಪತ್ರೆಗಳ ಬೇಜವಾಬ್ದಾರಿತನಕ್ಕೆ ನನ್ನ ಪತ್ನಿ ಪ್ರಾಣ ಕಳೆದುಕೊಂಡಿದ್ದಾಳೆ. ಈ ಸರ್ಕಾರದ ವ್ಯವಸ್ಥೆ ಸರಿಯಿಲ್ಲ. ತನ್ನ ಹೆಂಡ್ತಿಯನ್ನ ಈ ವ್ಯವಸ್ಥೆ ಸಾಯಿಸಿಬಿಡ್ತಲ್ಲ ಅಂತಾ ಕಣ್ಣೀರನ ಕಥೆಯನ್ನು ಪತಿ ಬಿಚ್ಚಿಟ್ಟಿದ್ದಾರೆ.

Published On - 12:33 pm, Mon, 6 July 20

ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?