ತಬ್ಲಿಘಿಗಳೇ ಕಂಟಕ: ಸಿಎಂ ಸ್ವಕ್ಷೇತ್ರದಲ್ಲಿ ದಿಢೀರನೆ ಕಾಣಿಸಿಕೊಂಡ 7 ಸೋಂಕಿತರು
ಶಿವಮೊಗ್ಗ: ಹಸಿರು ಅಂದ್ರೆ ಶಿವಮೊಗ್ಗ, ಶಿವಮೊಗ್ಗ ಅಂದ್ರೆ ಹಸಿರು. ಇದು ನಮ್ಮ ಜಿಲ್ಲೆ-ನಮ್ಮ ಹೆಮ್ಮೆ ಎಂದು ನಿನ್ನೆಯಷ್ಟೇ ಜಿಲ್ಲೆಯ ಬಗ್ಗೆ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದರು. ಶಿವಮೊಗ್ಗದಲ್ಲೇ ಇದ್ದುಕೊಂಡು ಜಿಲ್ಲೆಯನ್ನು ಹಸಿರಾಗಿಸಲು ಈಶ್ವರಪ್ಪ ಶ್ರಮಹಾಕಿದ್ದರು. ಅತ್ತ ಸಿಎಂ ಯಡಿಯೂರಪ್ಪ ನಾಡಿನ ಯೋಗಕ್ಷೇಮ ನೋಡಿಕೊಳ್ಳುತ್ತಿದ್ದಾರೆ. ಆದ್ರೆ ಕಣ್ತಪ್ಪಿಸಿ ಖುದ್ದು ಮುಖ್ಯಮಂತ್ರಿ ಸ್ವಕ್ಷೇತ್ರದಲ್ಲಿ ದಿಢೀರನೆ ಸೋಂಕಿತರು ಕಾಣಿಸಿಕೊಂಡಿದ್ದಾರೆ, ಇದಕ್ಕೆ ತಬ್ಲಿಘಿಗಳ ನಂಟೇ ಕಾರಣವಾಗಿದೆ. ಶಿಕಾರಿಪುರಕ್ಕೂ ಕಿಲ್ಲರ್ ವೈರಸ್ ಎಂಟ್ರಿ: ಗ್ರೀನ್ ಜೋನ್ನಲ್ಲಿದ್ದ ಶಿವಮೊಗ್ಗ ಜಿಲ್ಲೆಗೂ ಕೊರೊನಾ ವಕ್ಕರಿಸಿದೆ. ಸಿಎಂ ಯಡಿಯೂರಪ್ಪ […]

ಶಿವಮೊಗ್ಗ: ಹಸಿರು ಅಂದ್ರೆ ಶಿವಮೊಗ್ಗ, ಶಿವಮೊಗ್ಗ ಅಂದ್ರೆ ಹಸಿರು. ಇದು ನಮ್ಮ ಜಿಲ್ಲೆ-ನಮ್ಮ ಹೆಮ್ಮೆ ಎಂದು ನಿನ್ನೆಯಷ್ಟೇ ಜಿಲ್ಲೆಯ ಬಗ್ಗೆ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದರು. ಶಿವಮೊಗ್ಗದಲ್ಲೇ ಇದ್ದುಕೊಂಡು ಜಿಲ್ಲೆಯನ್ನು ಹಸಿರಾಗಿಸಲು ಈಶ್ವರಪ್ಪ ಶ್ರಮಹಾಕಿದ್ದರು. ಅತ್ತ ಸಿಎಂ ಯಡಿಯೂರಪ್ಪ ನಾಡಿನ ಯೋಗಕ್ಷೇಮ ನೋಡಿಕೊಳ್ಳುತ್ತಿದ್ದಾರೆ. ಆದ್ರೆ ಕಣ್ತಪ್ಪಿಸಿ ಖುದ್ದು ಮುಖ್ಯಮಂತ್ರಿ ಸ್ವಕ್ಷೇತ್ರದಲ್ಲಿ ದಿಢೀರನೆ ಸೋಂಕಿತರು ಕಾಣಿಸಿಕೊಂಡಿದ್ದಾರೆ, ಇದಕ್ಕೆ ತಬ್ಲಿಘಿಗಳ ನಂಟೇ ಕಾರಣವಾಗಿದೆ.
ಶಿಕಾರಿಪುರಕ್ಕೂ ಕಿಲ್ಲರ್ ವೈರಸ್ ಎಂಟ್ರಿ: ಗ್ರೀನ್ ಜೋನ್ನಲ್ಲಿದ್ದ ಶಿವಮೊಗ್ಗ ಜಿಲ್ಲೆಗೂ ಕೊರೊನಾ ವಕ್ಕರಿಸಿದೆ. ಸಿಎಂ ಯಡಿಯೂರಪ್ಪ ತವರು ಶಿಕಾರಿಪುರಕ್ಕೂ ಕಿಲ್ಲರ್ ವೈರಸ್ ನುಗ್ಗಿದೆ. ಜಿಲ್ಲೆಯಲ್ಲಿ ಪತ್ತೆಯಾದ 8 ಕೊರೊನಾ ಪಾಸಿಟಿವ್ ಕೇಸ್ಗಳ ಪೈಕಿ 7 ಜನ ಶಿಕಾರಿಪುರದವರಾಗಿದ್ದಾರೆ. ಮತ್ತೊಬ್ಬ ತೀರ್ಥಹಳ್ಳಿಯವರಾಗಿದ್ದಾರೆ. ಒಂದೇ ಒಂದು ಕೇಸ್ ಇಲ್ಲದ ಜಿಲ್ಲೆಗೆ ಇದೀಗ ಹೆಮ್ಮಾರಿ ವಕ್ಕರಿಸಿದೆ.
ನಿನ್ನೆಯಷ್ಟೇ ಶಿವಮೊಗ್ಗಕ್ಕೆ ಬಂದಿದ್ದ ತಬ್ಲಿಘಿಗಳು: 9 ಮಂದಿ ತಬ್ಲಿಘಿಗಳ ಟ್ರಾವೆಲ್ ಹಿಸ್ಟರಿ ಶಿವಮೊಗ್ಗವನ್ನೇ ಬೆಚ್ಚಿ ಬೀಳಿಸಿದೆ. ಇವರು ಮಾರ್ಚ್ 5 ರಂದು ದಾವಣಗೆರೆಯಿಂದ ರೈಲಿನಲ್ಲಿ ಗುಜರಾತ್ಗೆ ಪ್ರಯಾಣ ಮಾಡಿದ್ದರು. ಅಹಮದಾಬಾದ್ನ ತಬ್ಲಿಘ್ ಜಮಾತ್ನಲ್ಲಿ ಭಾಗವಹಿಸಿದ್ರು. ಜಮಾತ್ನಲ್ಲಿ ಭಾಗವಹಿಸಿದ ಬಳಿಕ ಮಸೀದಿಯಲ್ಲಿ ಆಶ್ರಯ ಪಡೆದಿದ್ರು. ಅಹಮದಾಬಾದ್ನಿಂದ ನಿನ್ನೆ ಶಿವಮೊಗ್ಗಕ್ಕೆ 9 ಬಂದಿದ್ದರು.
ಲಾಕ್ಡೌನ್ ಹಿನ್ನೆಲೆಯಲ್ಲಿ 9 ಜನರನ್ನ ಗುಜರಾತ್ ಸರ್ಕಾರ ಕ್ವಾರಂಟೈನ್ ಮಾಡಿತ್ತು. ಗುಜರಾತ್ ಸರ್ಕಾರದ ಅನುಮತಿ ಮೇರೆಗೆ ಶಿವಮೊಗ್ಗಕ್ಕೆ ತಬ್ಲಿಘಿಗಳು ನಿನ್ನೆ ವಾಪಸ್ ಬಂದರು. ಮುಂಬೈ, ಬೆಳಗಾವಿ ಗಡಿ ಮೂಲಕ ಇವರು ಆಗಮಿಸಿದ್ದರು. ಖಾಸಗಿ ಬಸ್ ಮೂಲಕ ಶಿವಮೊಗ್ಗಕ್ಕೆ ವಾಪಸ್ ಬಂದಿದ್ದ ಇವರಿಗೆ ಸಹ್ಯಾದ್ರಿ ಕಾಲೇಜು ಕ್ರೀಡಾಂಗಣದಲ್ಲಿ ಆರೋಗ್ಯ ತಪಾಸಣೆ ನಡೆಸಲಾಗಿತ್ತು.

Published On - 2:18 pm, Sun, 10 May 20
