ದಕ್ಷಿಣ ಕನ್ನಡ: ದೊಡ್ಡ ಮೈದಾನ.. ಆ ಮೈದಾನದಲ್ಲಿ ಎಲ್ಲೇ ಹೋದ್ರು ಕಲರ್ಫುಲ್.. ಎದುರಲ್ಲಿ ಕಲಾತಂಡಗಳ ವೈಭವ.. ಆಗಾಸದಲ್ಲಿ ಪಟಾಕಿಗಳ ಚಿತ್ತಾರ.. ಇದ್ರ ಜೊತೆಗೆ ಕ್ರೀಡಾಪುಟುಗಳ ಜಿದ್ದು.. ಅಬ್ಬಬ್ಬಾ.. ಇದೆಲ್ಲಾ ಒಂದೇ ಕಡೆ ಇದ್ರೆ ಹೇಗ್ ಹೇಗಿರುತ್ತೆ ಅಲ್ವಾ.
ಅಥ್ಲೆಟಿಕ್ಸ್ ಕ್ರೀಡಾಕೂಟಕ್ಕೆ ಚಾಲನೆ:
ಅಂದ್ಹಾಗೆ, ಮೂಡಬಿದ್ರೆಯ ಸ್ವರಾಜ್ ಮೈದಾನದಲ್ಲಿ ಕ್ರೀಡಾ ಜಗತ್ತು ತೆರೆದುಕೊಂಡಿದೆ. 80 ನೇ ಅಖಿಲ ಭಾರತ ಅಂತರ ವಿವಿ ಅಥ್ಲೆಟಿಕ್ಸ್ ಕ್ರೀಡಾಕೂಟಕ್ಕೆ ನಿನ್ನೆ ಕೇಂದ್ರ ಸಚಿವ ಕಿರಣ್ ರಿಜ್ಜು ಚಾಲನೆ ಕೊಟ್ಟಿದ್ದಾರೆ. ಇನ್ನೂ ನಾಲ್ಕು ದಿನ ಭರ್ಜರಿಯಾಗಿ ಸ್ಪರ್ಧೆಗಳು ನಡೆಯಲಿದೆ. ವಿಶೇಷ ಅಂದ್ರೆ, 150 ಕ್ಕೂ ಹೆಚ್ಚು ಕಲಾತಂಡಗಳಲ್ಲಿ 5 ಸಾವಿರ ಕಲಾವಿದರು ಭಾಗಿಯಾಗಿದ್ರು. ಸಾಂಸ್ಕೃತಿಕ ಮೆರವಣಿಗೆ ಎಲ್ಲರನ್ನು ಆಕರ್ಷಿಸಿತು. ಈ ಮೆರವಣಿಗೆಯಲ್ಲಿ ದೇಶದ ಅತಿದೊಡ್ಡ ಮನುಷ್ಯ, ಬೃಹತ್ ಗಾತ್ರದ ಸುಲ್ತಾನ್ ಹೋರಿ, ಕೊರಗರ ಡೋಲು ಸೇರಿದಂತೆ ವಿವಿಧ ಬಗೆಯ ತಂಡಗಳು ಮಿಂಚಿದ್ವು.
ಇನ್ನು, ಈ ಅಥ್ಲೆಟಿಕ್ಸ್ಗೆ ದೇಶದ ವಿವಿಧ ರಾಜ್ಯಗಳ 275 ಯೂನಿವರ್ಸಿಟಿಗಳಿಂದ ಕ್ರೀಡಾಪಟುಗಳು ಗಳು ಭಾಗವಹಿಸಿದ್ದಾರೆ. ಏನಿಲ್ಲ ಅಂದ್ರೂ 4,000 ಕ್ರೀಡಾಪಟುಗಳು, 1000 ಕ್ರೀಡಾ ತರಬೇತುದಾರರು, ನೂರಾರು ತೀರ್ಪುಗಾರರಿದ್ದಾರೆ. ಇನ್ನು, ನಿನ್ನೆ ನಡೆದ ರನ್ನಿಂಗ್ ರೇಸ್ ಅಂತೂ ರೋಮಾಂಚನಕಾರಿಯಾಗಿತ್ತು. ಸದ್ಯ ಈ ಕ್ರೀಡಾಕೂಟದಲ್ಲಿ ಕಲಾತಂಡಗಳ ಅದ್ಧೂರಿತನ ಮೇಳೈಸಿದ್ದು, ಕಲಾರಸಿಕರಿಗೆ ಇದು ಸಿಹಿಯೂಟದಂತಾಗಿದೆ. ಈಗ ನಡೆಯುತ್ತಿರುವ ಅಥ್ಲೆಟಿಕ್ ಕ್ರೀಡಾಕೂಟದಲ್ಲಿ ಕ್ರೀಡಾಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ.
Published On - 8:43 am, Sat, 4 January 20