ಕಾರವಾರದಲ್ಲಿ ರಾಷ್ಟ್ರಧ್ವಜವನ್ನು ತಲೆಕೆಳಗೆ ಮಾಡಿ ವಿತರಿಸಿದ ಬಿಜೆಪಿ ಮುಖಂಡ
ಕಾರವಾರದ ಡೋಂಗ್ರಿಯಲ್ಲಿ ಬಿಜೆಪಿ ಮುಖಂಡರೊಬ್ಬರು ರಾಷ್ಟ್ರಧ್ವಜವನ್ನು ಉಲ್ಟಾ ಅಂದರೆ ಕೇಸರಿ ಬಣ್ಣವನ್ನು ಕೆಳಗೆ ಮಾಡಿ ಹಂಚಿ ಟ್ರೋಲ್ ಅಗಿದ್ದಾರೆ. ತಿರಂಗದ ಬಗ್ಗೆ ಯಾವುದೇ ರೀತಿಯ ನಿರ್ಲಕ್ಷ್ಯ ಸರಿ ಅಲ್ಲ ಮಾರಾಯ್ರೇ.
ಕಾರವಾರ: ಪ್ರಧಾನ ಮಂತ್ರಿ ನರೇಂದ್ರ ಮೋದಿ (PM Narendra Modi) ಪ್ರತಿ ಮನೆಯ ಮೇಲೂ ರಾಷ್ಟ್ರಧ್ವಜ (National Flag) ಹಾರಿಸಲು ಕರೆಕೊಟ್ಟಿರುವ ಹಿನ್ನೆಲೆಯಲ್ಲಿ ದೇಶದಾದ್ಯಂತ ಬಿಜೆಪಿ ಕಾರ್ಯಕರ್ತರು (BJP Workers) ಜನರಿಗೆ ತಿರಂಗಗಳನ್ನು ಹಂಚಲಾರಂಭಿಸಿದ್ದಾರೆ. ಆದರೆ ಧ್ವಜಗಳನ್ನು ಹಂಚುವಾಗ ಕೆಲವೆಡೆ ಎಡವಟ್ಟಾಗಳಾಗುತ್ತಿವೆ. ಅಂಕೋಲಾದ ಡೋಂಗ್ರ ಶಕ್ತಿ ಕೇಂದ್ರದ ಅಧ್ಯಕ್ಷ ನಾರಾಯಣ ಹೆಗಡೆ ಅವರು ರಾಷ್ಟ್ರಧ್ವಜವನ್ನು ಉಲ್ಟಾ ಅಂದರೆ ಕೇಸರಿ ಬಣ್ಣವನ್ನು ಕೆಳಗೆ ಮಾಡಿ ಹಂಚಿ ಟ್ರೋಲ್ ಅಗಿದ್ದಾರೆ. ತಿರಂಗದ ಬಗ್ಗೆ ಯಾವುದೇ ರೀತಿಯ ನಿರ್ಲಕ್ಷ್ಯ ಸರಿ ಅಲ್ಲ ಮಾರಾಯ್ರೇ.