ಅಂಚೇನಹಳ್ಳಿ ಮಹಿಳೆಯ ಕಷ್ಟ ಕಂಡು ಮಮ್ಮಲ ಮರುಗಿದ ತಹಸೀಲ್ದಾರ್ ರೂಪಾ ಕೂಡಲೇ ನೆರವಿಗೆ ಧಾವಿಸಿದರು

ಪರಿಹಾರ ಅರಸಿ ಕಚೇರಿಗಳಿಗೆ ಅವರು ಅಲೆದಾಡಿದರೂ ಮಹಿಳೆಯ ಮೊರೆಯನ್ನು ಅಧಿಕಾರಿಗಳು ಕಿವಿಗೆ ಹಾಕಿಕೊಂಡಿಲ್ಲ. ಹಾಗಾಗಿ ತೀವ್ರ ಸ್ವರೂಪದ ಹತಾಷೆಗೊಳಗಾದ ಅವರು ತಮ್ಮ ತೋಟದಲ್ಲಿ ಊಟ ನೀರು ಬಿಟ್ಟು ಕೂತಿದ್ದು ರೂಪಾ ಅವರ ಕಿವಿಗೆ ಬಿದ್ದಾಗ ಅವರೊಳಗಿನ ಮಾತೃಹೃದಯ ಮಿಡಿಯಲಾರಂಭಿಸಿದೆ.

ಅಂಚೇನಹಳ್ಳಿ ಮಹಿಳೆಯ ಕಷ್ಟ ಕಂಡು ಮಮ್ಮಲ ಮರುಗಿದ ತಹಸೀಲ್ದಾರ್ ರೂಪಾ ಕೂಡಲೇ ನೆರವಿಗೆ ಧಾವಿಸಿದರು
|

Updated on: May 09, 2022 | 11:02 PM

ಮಂಡ್ಯ: ರವಿವಾರವಷ್ಟೇ ಇಡೀ ಪ್ರಪಂಚ ಅಮ್ಮಂದಿರ ದಿನವನ್ನು (Mother Day) ಆಚರಿಸಿತು. ಈ ವಿಡಿಯೋನಲ್ಲಿ ನಿಮಗೆ ಇಬ್ಬರು ಮಹಿಳೆಯರು ಕಾಣುತ್ತಿದ್ದಾರೆ. ಒಬ್ಬರು ಅಸಹಾಯಕತೆಯಿಂದ ಕಣ್ಣೀರು ಸುರಿಸುತ್ತಿರುವ ವಯಸ್ಸಾದ ಮಹಿಳೆ (elderly woman) ಇನ್ನೊಬ್ಬರು ಅವರು ಸಂಕಷ್ಟ ಅರ್ಥ ಮಾಡಿಕೊಂಡು ಊಟ ಮಾಡಿಸುತ್ತಿರುವ ಯುವ ಮಹಿಳೆ. ಅವರಿಬ್ಬರ ನಡುವಿನ ಪ್ರೀತಿ, ವಾತ್ಸಲ್ಯ (love and affection) ನೋಡುತ್ತಿದ್ದರೆ, ತಾಯಿ ಮತ್ತು ಮಗಳ ನಡುವೆ ಇದಕ್ಕಿಂತ ಜಾಸ್ತಿ ಮಮತೆ, ಕಕ್ಕುಲಾತಿ ಇರಲಾರದು ಅನಿಸುಬಿಡುತ್ತದೆ. ಆದರೆ ವಾಸ್ತವ ಸಂಗತಿಯೆಂದರೆ ಇದು ಅಮ್ಮ-ಮಗಳ ಜೋಡಿ ಅಲ್ಲ. ಅವರ ನಡುವೆ ಬಹಳ ದೂರದ ಸಂಬಂಧವೂ ಇಲ್ಲ. ಅಸಲಿಗೆ ಅವರಿಬ್ಬರು ಒಂದೇ ಸಮುದಾಯಕ್ಕೆ ಸೇರಿದವರಾ ಅಂತಲೂ ನಮಗೆ ಗೊತ್ತಿಲ್ಲ.

ಹಿರಿಯ ಮಹಿಳೆಗೆ ಊಟ ಮಾಡಿಸುತ್ತಾ ಸಂತೈಸುತ್ತಿರುವವರು ಕೆ ಆರ್ ಪೇಟೆಯ ತಹಸಿಲ್ದಾರ್ ಎಮ್ ವಿ ರೂಪಾ. ತಾಲ್ಲೂಕಿನ ಅಂಚೇನಹಳ್ಳಿಯ ನಿವಾಸಿಯಾಗಿರುವ ಹಿರಿ ಮಹಿಳೆಯ ತೋಟದಲ್ಲಿದ್ದ ತೆಂಗಿನ ಮರಗಳು ಅಕಾಲಿಕ ಮಳೆ ಮತ್ತು ಜೋರು ಗಾಳಿಯಿಂದ ಬುಡಸಮೇತ ಕಿತ್ತು ಉರುಳಿವೆ. ಮಹಿಳೆಗೆ ಅಪಾರ ಪ್ರಮಾಣದ ನಷ್ಟ ಅನುಭವಿಸಿದ್ದಾರೆ. ಟಿವಿ9 ಕನ್ನಡ ಚ್ಯಾನೆಲ್ ನಲ್ಲಿ ಈ ಬಗ್ಗೆ ಒಂದು ವರದಿ ಸಹ ಬಿತ್ತರಗೊಂಡಿತ್ತು.

ಪರಿಹಾರ ಅರಸಿ ಕಚೇರಿಗಳಿಗೆ ಅವರು ಅಲೆದಾಡಿದರೂ ಮಹಿಳೆಯ ಮೊರೆಯನ್ನು ಅಧಿಕಾರಿಗಳು ಕಿವಿಗೆ ಹಾಕಿಕೊಂಡಿಲ್ಲ. ಹಾಗಾಗಿ ತೀವ್ರ ಸ್ವರೂಪದ ಹತಾಷೆಗೊಳಗಾದ ಅವರು ತಮ್ಮ ತೋಟದಲ್ಲಿ ಊಟ ನೀರು ಬಿಟ್ಟು ಕೂತಿದ್ದು ರೂಪಾ ಅವರ ಕಿವಿಗೆ ಬಿದ್ದಾಗ ಅವರೊಳಗಿನ ಮಾತೃಹೃದಯ ಮಿಡಿಯಲಾರಂಭಿಸಿದೆ.

ಕೂಡಲೇ ಅವರು ಅಲ್ಲಿಗೆ ಧಾವಿಸಿ, ಹಿರಿಯ ಮಹಿಳೆಯನ್ನು ಸಂತೈಸಿದ್ದಾರೆ. ಅವರಿಗೆ ತಮ್ಮ ಕೈಯಾರೆ ಊಟ ಮಾಡಿಸಿದ್ದಾರೆ, ನೀರು ಕುಡಿಸಿದ್ದಾರೆ ಮತ್ತು ಆದಷ್ಟು ಬೇಗ ಪರಿಹಾರ ಒದಗಿಸುವ ಭರವಸೆಯನ್ನೂ ನೀಡಿದ್ದಾರೆ.

ತಹಸೀಲ್ದಾರ್ ರೂಪಾ ಅವರು ಸರಳತೆ, ಮಾನವೀಯ ಕಳಕಳಿ ಕಂಡು ಅಂಚೇನಹಳ್ಳಿಯ ಜನ ಮಾತ್ರ ಅಲ್ಲ ನಾವು ಕೂಡ ಆಶ್ಚರ್ಯಚಕಿತರಾಗಿದ್ದೇವೆ ಮಾರಾಯ್ರೇ.

ಇದನ್ನೂ ಓದಿ:     ಪಕ್ಷದ ಬ್ಯಾನರ್ ನಂತಿದೆ ಎಂದು ಸರ್ಕಾರ ಕೊಟ್ಟ ಸೀರೆಯನ್ನ ಸಾರಾಸಗಟಾಗಿ ತಿರಸ್ಕರಿಸಿದ ಅಂಗನವಾಡಿ ಕಾರ್ಯಕರ್ತೆಯರು, ಸರ್ಕಾರಕ್ಕೆ ನಷ್ಟ ಎಷ್ಟು ಗೊತ್ತಾ!?

Follow us
ಐಫೋನ್ 15 ಮೇಲೆ ₹10,000 ದರ ಕಡಿತ ಘೋಷಿಸಿದ ಆ್ಯಪಲ್!
ಐಫೋನ್ 15 ಮೇಲೆ ₹10,000 ದರ ಕಡಿತ ಘೋಷಿಸಿದ ಆ್ಯಪಲ್!
ಗಣೇಶ ಮೆರವಣಿಗೆ ವೇಳೆ ಕಲ್ಲೆಸೆತ: ಪ್ರತ್ಯಕ್ಷದರ್ಶಿಗಳಿಂದ ವಿವರವಾದ ಮಾಹಿತಿ
ಗಣೇಶ ಮೆರವಣಿಗೆ ವೇಳೆ ಕಲ್ಲೆಸೆತ: ಪ್ರತ್ಯಕ್ಷದರ್ಶಿಗಳಿಂದ ವಿವರವಾದ ಮಾಹಿತಿ
ಗಣೇಶ ವಿಸರ್ಜನೆ ವೇಳೆ ಕಲ್ಲು ತೂರಾಟ, ನಾಗಮಂಗಲದಲ್ಲಿ ಹೇಗಿದೆ ಈಗ ಪರಿಸ್ಥಿತಿ?
ಗಣೇಶ ವಿಸರ್ಜನೆ ವೇಳೆ ಕಲ್ಲು ತೂರಾಟ, ನಾಗಮಂಗಲದಲ್ಲಿ ಹೇಗಿದೆ ಈಗ ಪರಿಸ್ಥಿತಿ?
ಮಂಡ್ಯ ಹಿಂಸಾಚಾರ: ನಾಗಮಂಗಲ ಘಟನೆ ಬಗ್ಗೆ ಎಸ್​ಪಿ ಹೇಳಿದ್ದೇನು ನೋಡಿ
ಮಂಡ್ಯ ಹಿಂಸಾಚಾರ: ನಾಗಮಂಗಲ ಘಟನೆ ಬಗ್ಗೆ ಎಸ್​ಪಿ ಹೇಳಿದ್ದೇನು ನೋಡಿ
‘ಕಿರುಕುಳ ಆದಾಗಲೇ ಹೇಳಿ, ಐದು ವರ್ಷ ಬಿಟ್ಟೇಕೆ ಬರುತ್ತೀರಿ’; ನಟಿಯ ಪ್ರಶ್ನೆ
‘ಕಿರುಕುಳ ಆದಾಗಲೇ ಹೇಳಿ, ಐದು ವರ್ಷ ಬಿಟ್ಟೇಕೆ ಬರುತ್ತೀರಿ’; ನಟಿಯ ಪ್ರಶ್ನೆ
ಸಾವಿನ ಮನೆಯಲ್ಲಿ ಪಾಲಿಸಬೇಕಾದ ಶಿಷ್ಟಾಚಾರ
ಸಾವಿನ ಮನೆಯಲ್ಲಿ ಪಾಲಿಸಬೇಕಾದ ಶಿಷ್ಟಾಚಾರ
Nithya Bhavishya: ಭಾದ್ರಪದ ಮಾಸದ ಗುರುವಾರದ ದಿನಭವಿಷ್ಯ ತಿಳಿಯಿರಿ
Nithya Bhavishya: ಭಾದ್ರಪದ ಮಾಸದ ಗುರುವಾರದ ದಿನಭವಿಷ್ಯ ತಿಳಿಯಿರಿ
ಚಿತ್ರರಂಗದಲ್ಲಿ ನಟಿಯರ ನಡುವೆ ತಾರತಮ್ಯ: ಅಸಲಿ ವಿಚಾರ ತಿಳಿಸಿದ ಸಾಕ್ಷಿ ಮೇಘನ
ಚಿತ್ರರಂಗದಲ್ಲಿ ನಟಿಯರ ನಡುವೆ ತಾರತಮ್ಯ: ಅಸಲಿ ವಿಚಾರ ತಿಳಿಸಿದ ಸಾಕ್ಷಿ ಮೇಘನ
ಸಿನಿಮಾ ಬಿಡುಗಡೆ ಸಮಯದಲ್ಲಿ ನಟ ಕಿರಣ್ ರಾಜ್​ ಕಾರು ಅಪಘಾತ ಆಗಿದ್ದು ನಿಜವೇ?
ಸಿನಿಮಾ ಬಿಡುಗಡೆ ಸಮಯದಲ್ಲಿ ನಟ ಕಿರಣ್ ರಾಜ್​ ಕಾರು ಅಪಘಾತ ಆಗಿದ್ದು ನಿಜವೇ?
ಸಿಎಂ ಕುರ್ಚಿ ಖಾಲಿ ಇಲ್ಲ: ನಾನೇ ಮುಂದುವರಿಯುತ್ತೇನೆ ಎಂದ ಸಿದ್ದರಾಮಯ್ಯ
ಸಿಎಂ ಕುರ್ಚಿ ಖಾಲಿ ಇಲ್ಲ: ನಾನೇ ಮುಂದುವರಿಯುತ್ತೇನೆ ಎಂದ ಸಿದ್ದರಾಮಯ್ಯ