ಅಯ್ಯೋ ತಿರುಪತಿ ತಿಮ್ಮಪ್ಪನ ಸನ್ನಿಧಿಯಲ್ಲಿ ಇದೇಂಥಾ ಅವಘಡ?

ತಿರುಪತಿ: ಮೊದಲೇ ಕೊರೊನಾದಿಂದ ತತ್ತರಿಸಿದ ಆಂಧ್ರ ಪ್ರದೇಶದಲ್ಲಿ ಮತ್ತೊಂದು ಭಾರೀ ಅವಘಡವಾಗೋದು ಸ್ವಲ್ಪದರಲ್ಲೇ ತಪ್ಪಿದೆ. ಹೌದು ಪ್ರಖ್ಯಾತ ತಿರುಪತಿ ತಿಮ್ಮಪ್ಪನ ಸನ್ನಿಧಿ ತಿರುಪತಿಯ ತಿರುಪತಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭಾರೀ ಅವಘಢವೊಂದು ಸ್ವಲ್ಪದರಲ್ಲೇ ತಪ್ಪಿದೆ. ತಿರುಪತಿಯಲ್ಲಿರುವ ತಿರುಪತಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭಾರೀ ಅವಘಢವೊಂದು ಸ್ವಲ್ಪದರಲ್ಲೇ ತಪ್ಪಿದೆ. ಕೆಲವೇ ಕ್ಷಣಗಳಲ್ಲಿ ಹೈದರಾಬಾದ್‌ನಿಂದ ಆಗಮಿಸುತ್ತಿದ್ದ ವಿಮಾನ ತಿರುಪತಿಯಲ್ಲಿ ಲ್ಯಾಂಡ್‌ ಆಗಬೇಕಿತ್ತು. ಹೀಗಾಗಿ ಮಾಮೂಲಿನಂತೆ ರನ್‌ವೇಗಳಲ್ಲಿ ವಿಮಾನ ಲ್ಯಾಂಡ್‌ ಆದ ತಕ್ಷಣವೇ ನೀರು ಸಿಂಪಡಿಸುವ ಅಗ್ನಿಶಾಮಕ ವಾಹನ ರನ್‌ವೇನಲ್ಲಿ ತನ್ನ […]

ಅಯ್ಯೋ ತಿರುಪತಿ ತಿಮ್ಮಪ್ಪನ ಸನ್ನಿಧಿಯಲ್ಲಿ ಇದೇಂಥಾ ಅವಘಡ?

Updated on: Jul 19, 2020 | 6:49 PM

ತಿರುಪತಿ: ಮೊದಲೇ ಕೊರೊನಾದಿಂದ ತತ್ತರಿಸಿದ ಆಂಧ್ರ ಪ್ರದೇಶದಲ್ಲಿ ಮತ್ತೊಂದು ಭಾರೀ ಅವಘಡವಾಗೋದು ಸ್ವಲ್ಪದರಲ್ಲೇ ತಪ್ಪಿದೆ. ಹೌದು ಪ್ರಖ್ಯಾತ ತಿರುಪತಿ ತಿಮ್ಮಪ್ಪನ ಸನ್ನಿಧಿ ತಿರುಪತಿಯ ತಿರುಪತಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭಾರೀ ಅವಘಢವೊಂದು ಸ್ವಲ್ಪದರಲ್ಲೇ ತಪ್ಪಿದೆ.

ತಿರುಪತಿಯಲ್ಲಿರುವ ತಿರುಪತಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭಾರೀ ಅವಘಢವೊಂದು ಸ್ವಲ್ಪದರಲ್ಲೇ ತಪ್ಪಿದೆ. ಕೆಲವೇ ಕ್ಷಣಗಳಲ್ಲಿ ಹೈದರಾಬಾದ್‌ನಿಂದ ಆಗಮಿಸುತ್ತಿದ್ದ ವಿಮಾನ ತಿರುಪತಿಯಲ್ಲಿ ಲ್ಯಾಂಡ್‌ ಆಗಬೇಕಿತ್ತು. ಹೀಗಾಗಿ ಮಾಮೂಲಿನಂತೆ ರನ್‌ವೇಗಳಲ್ಲಿ ವಿಮಾನ ಲ್ಯಾಂಡ್‌ ಆದ ತಕ್ಷಣವೇ ನೀರು ಸಿಂಪಡಿಸುವ ಅಗ್ನಿಶಾಮಕ ವಾಹನ ರನ್‌ವೇನಲ್ಲಿ ತನ್ನ ನಿಗದಿತ ಸ್ಥಳಕ್ಕೆ ಹೋಗುತ್ತಿತ್ತು. ಆದ್ರೆ ಅದೇನಾಯಿತೋ ಏನೋ ಅಗ್ನಿಶಾಮಕ ವಾಹನ ಅಚಾನಕ್‌ ಆಗಿ ಪಲ್ಟಿಯಾಗಿ ರನ್‌ವೇನಲ್ಲಿ ಬಿದ್ದಿದೆ.

ಇದರಿಂದ ಗಾಬರಿಯಾದರೂ, ತಕ್ಷಣವೇ ಕಾರ್ಯಪ್ರವೃತ್ತರಾದ ಏರ್‌ಪೋರ್ಟ್‌ ಸಿಬ್ಬಂದಿ ಲ್ಯಾಂಡ್‌ ಆಗಬೇಕಿದ್ದ ವಿಮಾನವನ್ನು ತಡೆ ಹಿಡಿದಿದ್ದಾರೆ. ನಂತರ ಸಮಯದ ಚೌಕಾಸಿ ಮಾಡಿ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಡೈವರ್ಟ್‌ ಮಾಡಿದ್ದಾರೆ. ಇದಾದ ನಂತರ ಅಫಘಾತಕ್ಕೀಡಾದ ಅಗ್ಮಿಶಾಮಕ ವಾಹನವನ್ನ ಅಲ್ಲಿಂದ ತೆರವು ಮಾಡಬೇಕಾದರೆ ಬರೋಬ್ಬರಿ ಎರಡುವರೆ ಗಂಟೆ ಹಿಡಿದಿದೆ. ಅದೃಷ್ಟವಶಾತ್‌ ಯಾವುದೇ ಜೀವಹಾನಿಯಾಗಿಲ್ಲ. ವಿಷಯ ತಿಳಿದ ವಿಮಾನ ಪ್ರಯಾಣಿಕರು ತಮ್ಮನ್ನು ಆ ತಿರುಪತಿ ತಿಮ್ಮಪ್ಪನೇ ಕಾಪಾಡಿದ ಅಂತಾ ಕುಳಿತಲ್ಲೇ ಕೈಮುಗಿದಿದ್ದಾರೆ.