ಬೀದರ್: ಪತಿಯ ವಿರುದ್ಧ ದೂರು ಸಲ್ಲಿಸಿದರೂ ಕ್ರಮ ತೆಗೆದುಕೊಳ್ಳದ ಪೊಲೀಸರಿಗೆ ನಡುರಸ್ತೆಯಲ್ಲಿ ಆವಾಜ್ ಹಾಕಿದ ಮಹಿಳೆ

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Nov 02, 2022 | 2:11 PM

ನಿನ್ನೆ ಬೀದರ್ ನಲ್ಲಿ ಕನ್ನಡ ರಾಜ್ಯೋತ್ಸವದ ಅಂಗವಾಗಿ ಬೃಹತ್ ರ್ಯಾಲಿ ನಡೆಯುತ್ತಿದ್ದಾಗ ತಮ್ಮ ಪತಿಯ ಫ್ಲೆಕ್ಸ್ ಗಳನ್ನು ಹರಿದು ಹಾಕಿದ್ದಾರೆ. ಪೊಲೀಸರು ಅವರನ್ನು ತಡೆಯಲು ಹೋದಾಗ ಅವರಿಗೆ ಆವಾಜ್ ಹಾಕಿ ರಂಪಾಟ ನಡೆಸಿದ್ದಾರೆ.

ಬೀದರ್:  ವ್ಯಕ್ತಿಯೊಬ್ಬ ಬಿಜೆಪಿ ಕಾರ್ಯಕರ್ತನಾಗಿದ್ದು ಅವನ ವಿರುದ್ಧ ಪತ್ನಿ ಕೌಟುಂಬಿಕ ಹಿಂಸೆಯ (domestic violence) ದೂರು ಸಲ್ಲಿಸಿದರೆ ಪೊಲೀಸರಿಗೆ ಕ್ರಮ ಜರುಗಿಸಬಾರದೆ? ಬೀದರ್ ನಗರದ ಮಹಿಳೆಯೊಬ್ಬರು ಮಲ್ಲೇಶಿ (Malleshi) ಹೆಸರಿನ ಪತಿಯ ವಿರುದ್ಧ ದೂರು ಸಲ್ಲಿಸಿದರೂ ಪೊಲೀಸರು ಯಾವುದೇ ಕ್ರಮ ತೆಗೆದುಕೊಂಡಿಲ್ಲವಂತೆ. ಇದರಿಂದ ರೊಚ್ಚಿಗೆದ್ದ ಮಹಿಳೆ ಮಲ್ಲೇಶಿ ತಮ್ಮ ಹುಟ್ಟುಹಬ್ಬದ ನಿಮಿತ್ತ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಅವರ ಜೊತೆ ತಾನಿರುವ ಫ್ಲೆಕ್ಸ್ ಗಳನ್ನು ನಗರದಲ್ಲಿ ಹಾಕಿಸಿಕೊಂಡಿದ್ದಾರೆ. ನಿನ್ನೆ ಬೀದರ್ ನಲ್ಲಿ ಕನ್ನಡ ರಾಜ್ಯೋತ್ಸವದ ಅಂಗವಾಗಿ ಬೃಹತ್ ರ್ಯಾಲಿ ನಡೆಯುತ್ತಿದ್ದಾಗ ತಮ್ಮ ಪತಿಯ ಫ್ಲೆಕ್ಸ್ ಗಳನ್ನು ಹರಿದು ಹಾಕಿದ್ದಾರೆ. ಪೊಲೀಸರು ಅವರನ್ನು ತಡೆಯಲು ಹೋದಾಗ ಅವರಿಗೆ ಆವಾಜ್ ಹಾಕಿ ರಂಪಾಟ ನಡೆಸಿದ್ದಾರೆ.