ಪಾಕಿಸ್ತಾನದ ಈ ಟಿಕ್​ಟಾಕ್​ ಸ್ಟಾರ್​ ಐಶ್ವರ್ಯಾ ರೈ ಪಡಿಯಚ್ಚು!

ನಟಿ ಐಶ್ವರ್ಯಾ ಅವರ ಲುಕ್ ಅನ್ನು ಆಮ್ನಾ ತಮ್ಮ ಇನ್​​ಸ್ಟಾಗ್ರಾಂ ಖಾತೆಯಲ್ಲಿ ಮರು ಸೃಷ್ಟಿಸಿದ್ದಾರೆ. ಎ ದಿಲ್ ಹೈ ಮುಷ್ಕಿಲ್, ದೇವದಾಸ್ ಮತ್ತು ಮೊಹಬತೇನ್ ಮುಂತಾದ ಚಿತ್ರಗಳಲ್ಲಿ ಐಶ್ವರ್ಯಾ ನಟಿಸಿರುವ ಕೆಲವು ದೃಶ್ಯಗಳ ಟಿಕ್ ಟಾಕ್ ವಿಡಿಯೋಗಳನ್ನು ಮಾಡಿ ಅಪ್​ಲೋಡ್ ಮಾಡಿದ್ದಾರೆ.

ಪಾಕಿಸ್ತಾನದ ಈ ಟಿಕ್​ಟಾಕ್​ ಸ್ಟಾರ್​ ಐಶ್ವರ್ಯಾ ರೈ ಪಡಿಯಚ್ಚು!
Edited By:

Updated on: Mar 11, 2021 | 9:11 PM

ಥೇಟ್ ನಟಿ ಐಶ್ವರ್ಯಾ ರೈ ಬಚ್ಚನ್ ತರಹ ಕಾಣುವ ಯುವತಿಯೊಬ್ಬಳ ಫೋಟೋ ಎರಡು ದಿನಗಳಿಂದ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಇದನ್ನು ನೋಡಿ ಜನರು ಸಿಕ್ಕಾಪಟ್ಟೆ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಇವರ್ಯಾರು ಐಶ್ವರ್ಯಾ ರೈ ಅವರನ್ನೇ ಹೋಲುತ್ತಿದ್ದಾರೆ ಎಂದು ಮೂಗಿನ ಮೇಲೆ ಬೆರಳಿಟ್ಟಿದ್ದಾರೆ. ಐಶ್ವರ್ಯಾ ರೈ ಅವರಂತೆ ಕಾಣುವ, ಪಾಕಿಸ್ತಾನ ಮೂಲದ ಈ ಯುವತಿ ಹೆಸರು ಆಮ್ನಾ ಇಮ್ರಾನ್.

ನಟಿ ಐಶ್ವರ್ಯಾ ಅವರ ಲುಕ್ ಅನ್ನು ಆಮ್ನಾ ತಮ್ಮ ಇನ್​​ಸ್ಟಾಗ್ರಾಂ ಖಾತೆಯಲ್ಲಿ ಮರು ಸೃಷ್ಟಿಸಿದ್ದಾರೆ. ಎ ದಿಲ್ ಹೈ ಮುಷ್ಕಿಲ್, ದೇವದಾಸ್ ಮತ್ತು ಮೊಹಬತೇನ್ ಮುಂತಾದ ಚಿತ್ರಗಳಲ್ಲಿ ಐಶ್ವರ್ಯಾ ನಟಿಸಿರುವ ಕೆಲವು ದೃಶ್ಯಗಳ ಟಿಕ್ ಟಾಕ್ ವಿಡಿಯೋಗಳನ್ನು ಮಾಡಿ ಅಪ್​ಲೋಡ್ ಮಾಡಿದ್ದಾರೆ. ವಿಡಿಯೋ ಜೊತೆಗೆ ಫೋಟೋ ಅಪ್ ಲೋಡ್ ಮಾಡಿರುವ ಆಮ್ನಾ ಇಮ್ರಾನ್, ಕಾರ್ಬನ್ ಕಾಪಿ ಆಫ್ ಐಶ್ವರ್ಯಾ ರೈ ಎಂದು ತಮ್ಮ ಇನ್​​ಸ್ಟಾಗ್ರಾಂ ಹ್ಯಾಂಡಲ್​ನಲ್ಲಿ ಬರೆದುಕೊಂಡಿದ್ದಾರೆ. ಆಕೆಯ ಕಣ್ಣು ಮತ್ತು ತುಟಿ ಐಶ್ವರ್ಯಾ ಅವರನ್ನು ಹೋಲುವುದರಿಂದ ಅನೇಕ ಜನರು ಆಕೆಯನ್ನು ನೋಡಿ ನಟಿ ಐಶ್ವರ್ಯಾ ಎಂದೇ ಭಾವಿಸಿದ್ದಾರೆ.

ನಟಿ ಐಶ್ವರ್ಯಾ ಅವರನ್ನು ಹೋಲುವ ಅನೇಕ ಮಹಿಳೆಯರನ್ನು ನಾವು ಈಗಾಗಲೇ ಜಗತ್ತಿನಾದ್ಯಂತ ನೋಡುತ್ತಲೇ ಬಂದಿದ್ದೇವೆ. ಹಾಲಿವುಡ್ ತಾರೆ ಅಮಂಡಾ ಸೆಫ್ರೈಡ್, ದಕ್ಷಿಣ ಭಾರತದ ಮಾಡೆಲ್ ಅಮೃತಾ ಸಾಜು, ಇರಾನಿನ ಮಾಡೆಲ್ ಮಹಲಾಗ ಜಬೆರಿ, ಮರಾಠಿ ನಟಿ ಮಾನಸಿ ನಾಯಕ್, ಬಾಲಿವುಡ್ ನಟಿ ಮಿಶ್ತಿ ಚಕ್ರವರ್ತಿ ಮತ್ತು ಸ್ನೇಹ ಉಲ್ಲಾಳ್ ನಟಿ ಐಶ್ವರ್ಯಾ ರೈ ಬಚ್ಚನ್ ಅವರನ್ನು ಹೋಲುತ್ತಾರೆ.

ಇದೀಗ ಪಾಕಿಸ್ತಾನದ ಈ ಟಿಕ್‌ ಟಾಕ್ ಸ್ಟಾರ್ ಆಮ್ನಾ ಇಮ್ರಾನ್ ಅವರು ಐಶ್ವರ್ಯಾ ರೈ ಬಚ್ಚನ್ ಅವರ ಡೊಪ್ಪಲ್‌ಗ್ಯಾಂಜರ್ ಎಂದು ಕರೆಸಿಕೊಳ್ಳುತ್ತಿದ್ದಾರೆ. ಈಕೆ ನಿಜಕ್ಕೂ ಐಶ್ವರ್ಯಾ ಅವರನ್ನೇ ಹೋಲುವ ಮೇಕಪ್ ಮಾಡಿ, ಅಭಿನಯವನ್ನು ಕಾಪಿ ಮಾಡುತ್ತಾರೆ. ಇನ್ನೂ, ಹಾಲಿವುಡ್ ನಟಿ ಅಮಂಡಾ ಸೆಫ್ರೈಡ್ ಅವರ ಕಣ್ಣುಗಳು ನಟಿ ಐಶ್ವರ್ಯಾ ರೈ ಬಚ್ಚನ್ ಅವರ ಸುಂದರ ಕಣ್ಣುಗಳನ್ನೇ ಹೋಲುತ್ತವೆ. ಅಮೃತ ಸಾಜು ಕೂಡ ತಮ್ಮ ಇನ್​​ಸ್ಟಾಗ್ರಾಮ್ ಖಾತೆಯಲ್ಲಿ ನಟಿ ಐಶ್ವರ್ಯಾ ರೈ ಬಚ್ಚನ್ ಅವರ ಕೆಲವು ದೃಶ್ಯಗಳನ್ನು ಮರುಸೃಷ್ಟಿಸಿರುವುದು ವಿಶೇಷ. ಈ ಪೋಟೋ ನೋಡಿದ ತಕ್ಷಣ ನೆಟ್ಟಿಗರು ಆಕೆಯನ್ನು ನಟಿ ಐಶ್ವರ್ಯಾ ರೈ ಎಂದು ಟ್ಯಾಗ್ ಮಾಡಿದ್ದಾರೆ.

ಇದನ್ನೂ ಓದಿ: ಮದುವೆಯಲ್ಲಿ ಪಾಲ್ಗೊಳ್ಳಲು ಬಂದ ಐಶ್ವರ್ಯಾ ರೈ ಕುಟುಂಬ; ಭರ್ಜರಿ ಡಾನ್ಸ್​ ವಿಡಿಯೋ ವೈರಲ್

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us