ಗದಗ: ಜಿಲ್ಲೆಯಲ್ಲಿ ಸಕಾಲಕ್ಕೆ ಌಂಬುಲೆನ್ಸ್ ಬಾರದೆ ಅಪಘಾತದ ಗಾಯಾಳುಗಳು ಪರದಾಡಿದ ಅಮಾನವೀಯ ಘಟನೆ ಜಿಲ್ಲೆಯ ಲಕ್ಷ್ಮೇಶ್ವರ ಬಳಿ ನಡೆದಿದೆ. ಌಂಬುಲೆನ್ಸ್ ಬಾರದ ಹಿನ್ನೆಲೆಯಲ್ಲಿ ಗಾಯಾಳುಗಳ ಸಂಬಂಧಿಕರು ಅವರನ್ನು ಟ್ರ್ಯಾಕ್ಟರ್ನಲ್ಲಿ ಆಸ್ಪತ್ರೆಗೆ ಕರೆತಂದರು.
ಜಿಲ್ಲೆಯ ಹರದಗಟ್ಟಿ-ಲಕ್ಷ್ಮೇಶ್ವರ ಮಧ್ಯೆ ಎರಡು ಬೈಕ್ಗಳ ನಡುವೆ ಡಿಕ್ಕಿ ಸಂಭವಿದಿ ಐದು ಜನರಿಗೆ ಗಾಯಗಳಾಗಿತ್ತು. ಹರದಗಟ್ಟಿಯ ಆನಂದ ಲಮಾಣಿ, ರೇಖಾ ಲಮಾಣಿ, ಕಾವೇರಿ ಮತ್ತು ಅಮರಾಪುರದ ಪರಶು ಬ್ಯಾಳಿ ಹಾಗೂ ರಮೇಶ ಕುರಿ ಎಂಬುವವರಿಗೆ ಗಾಯಾಗಳಾಗಿದ್ದವು.
ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲು 108 ಌಂಬುಲೆನ್ಸ್ಗೆ ಕರೆಮಡಿದರೂ ಒಂದು ಗಂಟೆಯ ಕಾಲ ಌಂಬುಲೆನ್ಸ್ ಬರಲೇಯಿಲ್ಲವಂತೆ. ಈ ಹಿನ್ನೆಲೆಯಲ್ಲಿ ಗಾಯಾಳುಗಳ ಸಂಬಂಧಿಕರು ಅವರನ್ನು ಟ್ರ್ಯಾಕ್ಟರ್ನಲ್ಲಿ ಆಸ್ಪತ್ರೆಗೆ ಕರೆತಂದರು.
ಆದರೆ, ಆಸ್ಪತ್ರೆಯಲ್ಲೂ ನಿರ್ಲಕ್ಷ್ಯ ತೋರಿದ ಸಿಬ್ಬಂದಿ ವೀಲ್ಚೇರ್ ತರದೆ ಗಾಯಾಳುಗಳನ್ನು ಸಂಬಂಧಿಕರು ಹೊತ್ತುಕೊಂಡು ಹೋಗಿ ದಾಖಲು ಮಾಡುವಂತಾಯಿತು. ಹಾಗಾಗಿ, ಜಿಲ್ಲೆಯ 108 ಌಂಬುಲೆನ್ಸ್ ಹಾಗೂ ಆಸ್ಪತ್ರೆಯ ನಿರ್ಲಕ್ಷ್ಯದ ವಿರುದ್ಧ ಸಾರ್ವಜನಿಕರು ತಮ್ಮ ಆಕ್ರೋಶ ಹೊರಹಾಕಿದ್ದಾರೆ.