ಗರ್ಭಿಣಿ ಮೇಲೆ ಹಲ್ಲೆ ಆರೋಪ: ನಡುರಸ್ತೆಯಲ್ಲಿ ಪೇದೆಗೆ ಕಪಾಳ ಮೋಕ್ಷ
ಬಾಗಲಕೋಟೆ: ಗರ್ಭಿಣಿ ಹಾಗೂ ಆಕೆಯ ಮೈದುನನ ಮೇಲೆ ಪೊಲೀಸರು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ ನಡುರಸ್ತೆಯಲ್ಲಿ ಟ್ರಾಫಿಕ್ ಪೊಲೀಸ್ ಪೇದೆಗೆ ಗರ್ಭಿಣಿಯ ಕುಟುಂಬಸ್ಥರು ಕಪಾಳಮೋಕ್ಷ ಮಾಡಿರುವ ಘಟನೆ ನಗರದ ಬಸವೇಶ್ವರ ವೃತ್ತದಲ್ಲಿ ನಡೆದಿದೆ. ಹೊಕ್ರಾಣಿ ಎಂಬ ಸಂಚಾರಿ ಪೊಲೀಸ್ ಪೇದೆಗೆ ಗರ್ಭಿಣಿ ಕಾವೇರಿ ರಾಠೋಡ ಕುಟುಂಬದವರು ಕಪಾಳಮೋಕ್ಷ ಮಾಡಿದ್ದಾರೆ. ಕುಟುಂಬದವರ ಹೊಡೆತಕ್ಕೆ ಪೇದೆಯ ಹೆಲ್ಮೆಟ್ ಹಾರಿ ಕೆಳಗೆ ಬಿದ್ದಿದೆ. ಇದೇ ವ್ಯಕ್ತಿ ಮಹಿಳೆಗೆ ಹೊಡೆದ ಎಂದು ರೊಚ್ಚಿಗೆದ್ದು ಕಪಾಳಮೋಕ್ಷ ಮಡಲಾಯಿತು. ಅಷ್ಟೇ ಅಲ್ಲದೆ, ಅಲ್ಲೇ ಇದ್ದ PSI […]
ಬಾಗಲಕೋಟೆ: ಗರ್ಭಿಣಿ ಹಾಗೂ ಆಕೆಯ ಮೈದುನನ ಮೇಲೆ ಪೊಲೀಸರು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ ನಡುರಸ್ತೆಯಲ್ಲಿ ಟ್ರಾಫಿಕ್ ಪೊಲೀಸ್ ಪೇದೆಗೆ ಗರ್ಭಿಣಿಯ ಕುಟುಂಬಸ್ಥರು ಕಪಾಳಮೋಕ್ಷ ಮಾಡಿರುವ ಘಟನೆ ನಗರದ ಬಸವೇಶ್ವರ ವೃತ್ತದಲ್ಲಿ ನಡೆದಿದೆ. ಹೊಕ್ರಾಣಿ ಎಂಬ ಸಂಚಾರಿ ಪೊಲೀಸ್ ಪೇದೆಗೆ ಗರ್ಭಿಣಿ ಕಾವೇರಿ ರಾಠೋಡ ಕುಟುಂಬದವರು ಕಪಾಳಮೋಕ್ಷ ಮಾಡಿದ್ದಾರೆ. ಕುಟುಂಬದವರ ಹೊಡೆತಕ್ಕೆ ಪೇದೆಯ ಹೆಲ್ಮೆಟ್ ಹಾರಿ ಕೆಳಗೆ ಬಿದ್ದಿದೆ. ಇದೇ ವ್ಯಕ್ತಿ ಮಹಿಳೆಗೆ ಹೊಡೆದ ಎಂದು ರೊಚ್ಚಿಗೆದ್ದು ಕಪಾಳಮೋಕ್ಷ ಮಡಲಾಯಿತು. ಅಷ್ಟೇ ಅಲ್ಲದೆ, ಅಲ್ಲೇ ಇದ್ದ PSI ಅನಿಲ ರಾಠೋಡರನ್ನ ಸಹ ಗರ್ಭಿಣಿ ಕುಟುಂಬದ ಕಡೆಯವರು ಹೊಡೆಯುವುದಕ್ಕೆ ಮುಂದಾದರು.
ಇನ್ನು ಘಟನೆ ವಿಕೋಪಕ್ಕೆ ತಿರುಗುತ್ತಿದ್ದಂತೆ ಸ್ಥಳಕ್ಕೆ ಬಂದ ನಗರ CPIಐ.ಆರ್. ಪಟ್ಟಣಶೆಟ್ಟಿ ಹಲ್ಲೆ ನಡೆಸಿದ ಪೊಲೀಸರ ವಿರುದ್ಧ ಕಂಪ್ಲೇಂಟ್ ಕೊಡುವಂತೆ ಕುಟುಂಬದವರ ಮನವೊಲಿಸಿದರು. ಜೊತೆಗೆ, ಸ್ಥಳಕ್ಕಾಗಮಿಸಿದ ಬಂಜಾರಾ ಸಮಾಜದ ಮುಖಂಡರು ಮಹಿಳೆಯನ್ನು ಟಂ ಟಂ ವಾಹನದಲ್ಲಿ ಆಸ್ಪತ್ರೆಗೆ ರವಾನಿಸಿದರು.
ಏನಿದು ಪ್ರಕರಣ? ನವನಗರದ ನಿವಾಸಿಯಾದ ಗರ್ಭಿಣಿ ಕಾವೇರಿ ರಾಠೋಡಳನ್ನು ಆಕೆಯ ಮೈದುನ ಚಿಕಿತ್ಸೆಗೆಂದು ಬಸವೇಶ್ವರ ವೃತ್ತದ ಸಮೀಪವಿರುವ ಆಸ್ಪತ್ರೆಗೆ ಕರೆತಂದಿದ್ದರು. ಆಸ್ಪತ್ರೆ ಮುಂದೆ ವಾಹನ ಪಾರ್ಕಿಂಗ್ ಮಾಡಿದ್ದರು. ಇದೇ ವೇಳೆ ಸ್ಥಳಕ್ಕೆ ಬಂದ ಸಂಚಾರಿ ಪೇದೆ ವಾಹನದ ಬೀಗದ ಕೈ ಕಿತ್ತುಕೊಂಡರು ಎಂದು ಕಾವೇರಿ ಆರೋಪಿಸಿದ್ದಾರೆ.
ಬೀಗದ ಕೈ ಕೊಡಿ ಎಂದು ಕೇಳಿದ್ದಕ್ಕೆ ಪೊಲೀಸರು ನಮ್ಮನ್ನು ಹೊಡೆದರು ಎಂದು ಇಬ್ಬರು ಆರೋಪಿಸಿದ್ದಾರೆ. ಹಾಗಾಗಿ, ನೋವು ತಾಳಲಾರದೆ ಬಿಕ್ಕಿ ಬಿಕ್ಕಿ ಅಳುತ್ತಿದ್ದ ಮಹಿಳೆ ಮತ್ತು ಆಕೆಯ ಮೈದುನ ಪೊಲೀಸರ ದೌರ್ಜನ್ಯ ಖಂಡಿಸಿ ಜೀಪ್ ಮುಂದೆ ಕೂತು ಪ್ರತಿಭಟನೆಗೆ ಮುಂದಾದರು. ಇದೇ ವೇಳೆ ಸ್ಥಳಕ್ಕೆ ಬಂದ ಕಾವೇರಿ ಪತಿ ಶಿವಾನಂದ ರಾಠೋಡ ಪೊಲೀಸರ ಮೇಲೆ ಹಲ್ಲೆಗೆ ಮುಂದಾಗಿದ್ದಾನೆ ಎಂದು ಹೇಳಲಾಗಿದೆ.