ಸೋನಾಮಸೂರಿ ಅಕ್ಕಿಯಲ್ಲಿ ಪ್ಲಾಸ್ಟಿಕ್ ಪತ್ತೆ ಆರೋಪ; ಸೂಪರ್ ಮಾರ್ಕೆಟ್ ಎದುರು ಗ್ರಾಹಕರ ಧರಣಿ

| Updated By: guruganesh bhat

Updated on: Aug 10, 2021 | 6:40 PM

ಈ ಕುರಿತು ಟಿವಿ9 ಕನ್ನಡ ಡಿಜಿಟಲ್ ಪ್ರತಿನಿಧಿಯ ಜತೆ ಮಾತನಾಡಿದ ಮಂಡ್ಯದ ಗಾಂಧಿನಗರ ನಿವಾಸಿ ಗೋಪಾಲ್, ಖಾಸಗಿ ಸೂಪರ್​ಮಾರ್ಕೆಟ್​ನಿಂದ ಸೋನಾಮಸೂರಿ ಅಕ್ಕಿ ಖರೀದಿಸಿದ್ದೆವು. ಆ ಅಕ್ಕಿಯಿಂದ 3 ದಿನ ಅಡುಗೆ ಮಾಡಿದಾಗ ಮಕ್ಕಳಿಗೆ ಹೊಟ್ಟೆನೋವು ಬಂದಿದೆ ಎಂದು ದುರಿದರು.

ಸೋನಾಮಸೂರಿ ಅಕ್ಕಿಯಲ್ಲಿ ಪ್ಲಾಸ್ಟಿಕ್ ಪತ್ತೆ ಆರೋಪ; ಸೂಪರ್ ಮಾರ್ಕೆಟ್ ಎದುರು ಗ್ರಾಹಕರ ಧರಣಿ
ಪೊಲೀಸರಿಂದ ಪರಿಶೀಲನೆ
Follow us on

ಮಂಡ್ಯ: ಹೊಸಹಳ್ಳಿ ಸರ್ಕಲ್‌ನಲ್ಲಿರುವ ಖಾಸಗಿ ಸೂಪರ್​ ಮಾರ್ಕೆಟ್ ಒಂದರಲ್ಲಿ ಸೋನಾಮಸೂರಿ ಅಕ್ಕಿ ಮೂಟೆಯಲ್ಲಿ ಪ್ಲ್ಯಾಸ್ಟಿಕ್ ಪತ್ತೆ ಆರೋಪದಡಿ ಸೂಪರ್​ಮಾರ್ಕೆಟ್ ಮಾಲೀಕರ ವಿರುದ್ಧ ಜನರು ಆಕ್ರೋಶಗೊಂಡಿದ್ದಾರೆ. ಗ್ರಾಹಕರಿಗೆ ಮೋಸ ಮಾಡಲು ಹೀಗೆ ಮಾಡ್ತಿದ್ದೀರಾ? ನಾವೇನು ನಿಮಗೆ ಹಣ ಕೊಡಲ್ವಾ? ಎಂದು ಜನರು ಸೂಪರ್ ಮಾರ್ಕೆಟ್ ಮಾಲೀಕರನ್ನು ತರಾಟೆಗೆ ತೆಗೆದುಕೊಂಡು ಸೂಪರ್​ಮಾರ್ಕೆಟ್ ಬಾಗಿಲು ಹಾಕುವಂತೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಂಡ್ಯ ಪೂರ್ವ ಸ್ಟೇಶನ್ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

ಈ ಕುರಿತು ಟಿವಿ9 ಕನ್ನಡ ಡಿಜಿಟಲ್ ಪ್ರತಿನಿಧಿಯ ಜತೆ ಮಾತನಾಡಿದ ಮಂಡ್ಯದ ಗಾಂಧಿನಗರ ನಿವಾಸಿ ಗೋಪಾಲ್, ಖಾಸಗಿ ಸೂಪರ್​ಮಾರ್ಕೆಟ್​ನಿಂದ ಸೋನಾಮಸೂರಿ ಅಕ್ಕಿ ಖರೀದಿಸಿದ್ದೆವು. ಆ ಅಕ್ಕಿಯಿಂದ 3 ದಿನ ಅಡುಗೆ ಮಾಡಿದಾಗ ಮಕ್ಕಳಿಗೆ ಹೊಟ್ಟೆನೋವು ಬಂದಿದೆ.  ನಂತರ ಅಕ್ಕಿ ಮತ್ತು ಅನ್ನವನ್ನು ಪರಿಶೀಲಿಸಿದಾಗ ಅದರಲ್ಲಿ ಪ್ಲಾಸ್ಟಿಕ್​ನ ವಸ್ತುಗಳು ಇರುವುದು ಕಂಡುಬಂತು’ ಎಂದು ಆರೋಪಿಸಿದರು.

ಈ ಕುರಿತು ಟಿವಿ9 ಕನ್ನಡ ಡಿಜಿಟಲ್ ಪ್ರತಿನಿಧಿ ಬಳಿ ಖಾಸಗಿ ಸೂಪರ್​ಮಾರ್ಕೆಟ್ ಮ್ಯಾನೇಜರ್ ಮೋಹನ್  ಮಾತನಾಡಿ, ‘ನಾವು ಗುಣಮಟ್ಟದ ವಸ್ತುಗಳನ್ನು ಪೂರೈಕೆ ಮಾಡುತಿದ್ದೇವೆ. ಎಲ್ಲೋ ಒಂದೆರಡರಲ್ಲಿ ವ್ಯತ್ಯಾಸ ಆಗಿರಬಹುದು. ಆದರೆ ಅದನ್ನು ಸರಿಪಡಿಸಿಕೊಂಡು ಮುಂದಿನ ದಿನಗಳಲ್ಲಿ ಉತ್ತಮ ಸೇವೆ ನೀಡುತ್ತೇವೆ’ ಎಂದರು.

ಇದನ್ನೂ ಓದಿ: 

ನಮ್ಮ ಎಂಪಿಗೆ ಮಂಡ್ಯ ಸಂಸ್ಕೃತಿ ಗೊತ್ತಿಲ್ಲ; ಎಲ್ರಿಗೂ ತೊಂದರೆ ಕೊಟ್ಟು, ಜಿಲ್ಲಾ ವ್ಯವಸ್ಥೆ ಅಲ್ಲೋಲಕಲ್ಲೋಲ ಮಾಡಿದ್ದಾರೆ: ಶಾಸಕ ರವೀಂದ್ರ

ಮಂಡ್ಯ: ಅಕ್ರಮ ಕಲ್ಲು ಗಣಿಗಾರಿಕೆ ನಿಯಂತ್ರಣಕ್ಕೆ ಕ್ರಮ; 11 ಕಲ್ಲು ಗಣಿ ಗುತ್ತಿಗೆಗಳ ರದ್ದು, 11 ಹೊಸ ಚೆಕ್‌ಪೋಸ್ಟ್ ಸ್ಥಾಪನೆ

(Accused of finding Plastic in Sonamasuri Rice Customers who put in the supermarket door)

Published On - 6:13 pm, Tue, 10 August 21