ಅನಾವರಣಕ್ಕೂ ಮುನ್ನ.. ಬಸವಣ್ಣ ಪ್ರತಿಮೆ ಸುತ್ತ ಶುರುವಾಯ್ತು ಭಾಷಾ ಸಮರ

| Updated By: ಸಾಧು ಶ್ರೀನಾಥ್​

Updated on: Aug 17, 2020 | 12:22 PM

ಬೆಂಗಳೂರು: ನಗರದ ಚಾಲುಕ್ಯ ವೃತ್ತದ ಬಳಿ ನಿರ್ಮಾಣವಾಗ್ತಿರುವ ಅತ್ಯಾಧುನಿಕ ಬಸವಣ್ಣನವರ ಪುತ್ಥಳಿಯ ಉದ್ಘಾಟನೆಗೂ ಮುನ್ನ ಭಾಷಾ ಸಮರ ಎದುರಾಗಿದೆ. ಚಾಲುಕ್ಯ ಸರ್ಕಲ್​ ಬಳಿ ಸ್ಥಾಪಿಸಲಾಗಿದ್ದ ಬಸವಣ್ಣನವರ ಹಳೇ ವಿಗ್ರಹದ ಜಾಗದಲ್ಲಿ ಸುಮಾರು ಒಂದು ಕೋಟಿ ವೆಚ್ಚದಲ್ಲಿ ಬಸವಣ್ಣರ ನೂತನ ಪುತ್ಥಳಿ ನಿರ್ಮಾಣವಾಗ್ತಿದೆ. ಇದೇ ತಿಂಗಳ 19 ಅಥವಾ 20 ರಂದು ಪ್ರತಿಮೆಯನ್ನ ಅನವಾರಣಗೊಳಿಸಲಾಗುವುದು ಎಂದು ತಿಳಿದುಬಂದಿದೆ. ಜೊತೆಗೆ, ಪ್ರತಿಮೆ ಸುತ್ತಲೂ ಹಾಗೂ ಕೆಳಭಾಗದ ಕಲ್ಲುಗಳ ಮೇಲೆ ಬಸವಣ್ಣರ ವಚನಗಳನ್ನು ಮೂರು ಭಾಷೆಗಳಲ್ಲಿ ಉಲ್ಲೇಖಿಸಲಾಗಿತ್ತು. ಇದೀಗ, ಮೂರು ಭಾಷೆಗಳಲ್ಲಿ […]

ಅನಾವರಣಕ್ಕೂ ಮುನ್ನ.. ಬಸವಣ್ಣ ಪ್ರತಿಮೆ ಸುತ್ತ ಶುರುವಾಯ್ತು ಭಾಷಾ ಸಮರ
Follow us on

ಬೆಂಗಳೂರು: ನಗರದ ಚಾಲುಕ್ಯ ವೃತ್ತದ ಬಳಿ ನಿರ್ಮಾಣವಾಗ್ತಿರುವ ಅತ್ಯಾಧುನಿಕ ಬಸವಣ್ಣನವರ ಪುತ್ಥಳಿಯ ಉದ್ಘಾಟನೆಗೂ ಮುನ್ನ ಭಾಷಾ ಸಮರ ಎದುರಾಗಿದೆ.
ಚಾಲುಕ್ಯ ಸರ್ಕಲ್​ ಬಳಿ ಸ್ಥಾಪಿಸಲಾಗಿದ್ದ ಬಸವಣ್ಣನವರ ಹಳೇ ವಿಗ್ರಹದ ಜಾಗದಲ್ಲಿ ಸುಮಾರು ಒಂದು ಕೋಟಿ ವೆಚ್ಚದಲ್ಲಿ ಬಸವಣ್ಣರ ನೂತನ ಪುತ್ಥಳಿ ನಿರ್ಮಾಣವಾಗ್ತಿದೆ. ಇದೇ ತಿಂಗಳ 19 ಅಥವಾ 20 ರಂದು ಪ್ರತಿಮೆಯನ್ನ ಅನವಾರಣಗೊಳಿಸಲಾಗುವುದು ಎಂದು ತಿಳಿದುಬಂದಿದೆ. ಜೊತೆಗೆ, ಪ್ರತಿಮೆ ಸುತ್ತಲೂ ಹಾಗೂ ಕೆಳಭಾಗದ ಕಲ್ಲುಗಳ ಮೇಲೆ ಬಸವಣ್ಣರ ವಚನಗಳನ್ನು ಮೂರು ಭಾಷೆಗಳಲ್ಲಿ ಉಲ್ಲೇಖಿಸಲಾಗಿತ್ತು.

ಇದೀಗ, ಮೂರು ಭಾಷೆಗಳಲ್ಲಿ ವಚನಗಳನ್ನ ಉಲ್ಲೇಖಿಸಿರುವುದಕ್ಕೆ ತೀವ್ರ ವಿರೋಧ ವ್ಯಕ್ತವಾಗಿದೆ. ಕನ್ನಡ, ಹಿಂದಿ ಮತ್ತು ಇಂಗ್ಲೀಷ್​ ಭಾಷೆಗಳಲ್ಲಿ ವಚನಗಳನ್ನ ಬರೆಯಲಾಗಿದ್ದು ಹಿಂದಿ ಮತ್ತು ಇಂಗ್ಲಿಷ್ ಭಾಷೆಯಲ್ಲಿ ಬರೆಯಲಾದ ಭಾಗಗಳನ್ನ ತೆಗೆಯುವಂತೆ ಒತ್ತಡ ಹೆಚ್ಚಾಗುತ್ತಿದೆ.

ಈ ಹಿನ್ನೆಲೆಯಲ್ಲಿ ಇಂದು ಕಾರ್ಮಿಕರು ಹಿಂದಿ ಭಾಷೆಯಲ್ಲಿದ್ದ ಭಾಗಗಳಿಗೆ ಪೇಂಟಿಂಗ್ ಮಾಡ್ತಿರುವ ದೃಶ್ಯ ಕಂಡು ಬಂತು. ಜೊತೆಗೆ, ಇಂಗ್ಲಿಷ್ ಹಾಗೂ ಹಿಂದಿಯಲ್ಲಿದ್ದ ಬೋರ್ಡ್​ಗಳನ್ನ ಬಿಬಿಎಂಪಿ ತೆಗೆದುಹಾಕಿದೆ.