ಹಾಡಹಗಲೇ ಮನೆಗೆ ನುಗ್ಗಿ ವೃದ್ಧೆಯ ಹತ್ಯೆ ಮಾಡಿ, ಚಿನ್ನಾಭರಣ ಕಳ್ಳತನ: ಪರಿಚಿತರ ಕೈವಾಡ ಶಂಕೆ
ಬೆಂಗಳೂರು: ಹಾಡಹಗಲೇ ಮನೆಗೆ ನುಗ್ಗಿದ ದುಷ್ಕರ್ಮಿಗಳು ವೃದ್ಧೆಯ ಕತ್ತು ಕೊಯ್ದು ಹತ್ಯೆ ಮಾಡಿರುವ ಘಟನೆ ಕಾಡುಗೋಡಿಯ ಚೆನ್ನಸಂದ್ರ ಬಳಿ ನಡೆದಿದೆ. ಜಯಮ್ಮ(70) ಕೊಲೆಯಾದ ವೃದ್ಧೆ. ದುಷ್ಕರ್ಮಿಗಳು ವೃದ್ಧೆ ಜಯಮ್ಮನನ್ನು ಕೊಲೆ ಮಾಡಿ 45 ಲಕ್ಷ ನಗದು ಹಾಗೂ ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ. ಇದೇ ಆಗಸ್ಟ್ 12 ರಂದು ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ವೃದ್ಧೆ ಜಯಮ್ಮ ಅವರ ಪತಿ ಅಪ್ಪಯ್ಯಣ್ಣ ವಿದ್ಯುತ್ ಬಿಲ್ ಪಾವತಿಸಲು ಇಮ್ಮಡಿಹಳ್ಳಿಯ ಬೆಸ್ಕಾಂ ಕಚೇರಿಗೆ ತೆರಳಿದ್ದರು. ವಿದ್ಯುತ್ ಬಿಲ್ ಪಾವತಿಸಿ ಅಣ್ಣಯ್ಯಪ್ಪ […]
ಬೆಂಗಳೂರು: ಹಾಡಹಗಲೇ ಮನೆಗೆ ನುಗ್ಗಿದ ದುಷ್ಕರ್ಮಿಗಳು ವೃದ್ಧೆಯ ಕತ್ತು ಕೊಯ್ದು ಹತ್ಯೆ ಮಾಡಿರುವ ಘಟನೆ ಕಾಡುಗೋಡಿಯ ಚೆನ್ನಸಂದ್ರ ಬಳಿ ನಡೆದಿದೆ. ಜಯಮ್ಮ(70) ಕೊಲೆಯಾದ ವೃದ್ಧೆ.
ದುಷ್ಕರ್ಮಿಗಳು ವೃದ್ಧೆ ಜಯಮ್ಮನನ್ನು ಕೊಲೆ ಮಾಡಿ 45 ಲಕ್ಷ ನಗದು ಹಾಗೂ ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ. ಇದೇ ಆಗಸ್ಟ್ 12 ರಂದು ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ವೃದ್ಧೆ ಜಯಮ್ಮ ಅವರ ಪತಿ ಅಪ್ಪಯ್ಯಣ್ಣ ವಿದ್ಯುತ್ ಬಿಲ್ ಪಾವತಿಸಲು ಇಮ್ಮಡಿಹಳ್ಳಿಯ ಬೆಸ್ಕಾಂ ಕಚೇರಿಗೆ ತೆರಳಿದ್ದರು. ವಿದ್ಯುತ್ ಬಿಲ್ ಪಾವತಿಸಿ ಅಣ್ಣಯ್ಯಪ್ಪ ತನ್ನ ಸ್ನೇಹಿತರ ಜೊತೆ ಮಾತನಾಡುತ್ತ ನಿಂತರು. ಬಳಿಕ ಅಪ್ಪಯ್ಯಣ್ಣ ಮಧ್ಯಾಹ್ನ 1 ಗಂಟೆಗೆ ಮನೆಗೆ ವಾಪಸ್ ಬಂದ ವೇಳೆ ಪತ್ನಿಯನ್ನು ದುಷ್ಕರ್ಮಿಗಳು ಕೊಲೆ ಮಾಡಿರುವುದು ಗೊತ್ತಾಗಿದೆ.
ಅಪ್ಪಯ್ಯಣ್ಣ ಬಾಗಿಲು ತೆರೆದು ಒಳಗೆ ಹೋದ ವೇಳೆ ಪಡಸಾಲೆಯಲ್ಲಿ ಜಯಮ್ಮ ಬಿದ್ದಿದ್ದರು. ಅಗಾಂತವಾಗಿ ಬಿದ್ದಿದ್ದ ಪತ್ನಿಯನ್ನ ಎಬ್ಬಿಸಲು ಹೋದ ವೇಳೆ ಪತ್ನಿಯ ಕತ್ತು ಕೊಯ್ದು ಕೊಲೆ ಮಾಡಿರುವುದು ಗೊತ್ತಾಗಿದೆ. ಬಳಿಕ ಮಂಚದ ಕೆಳಗೆ ಇಟ್ಟಿದ್ದ ಟ್ರಂಕ್ನಲ್ಲಿದ್ದ 45 ಲಕ್ಷ ನಗದು, ಕೊಲೆಯಾದ ಜಯಮ್ಮ ಕುತ್ತಿಗೆಯಲ್ಲಿದ್ದ 30 ಗ್ರಾಂ ಚಿನ್ನದ ಸರ, 8 ಗ್ರಾಂ ತೂಕವಿದ್ದ 2 ಉಂಗುರ, 50 ಗ್ರಾಂ ಚಿನ್ನದ ಬ್ರೇಸ್ಲೆಟ್ ಕಳ್ಳತನ ಮಾಡಲಾಗಿದೆ. ವೃದ್ಧೆ ಮಹಿಳೆಯ ಪತಿ ಅಣ್ಣಯ್ಯಪ್ಪ ಕಾಡುಗೋಡಿ ಪೊಲೀಸ್ ಠಾಣೆಗೆ ದೂರು ನೀಡಿ ಕೇಸ್ ದಾಖಲಿಸಿದ್ದಾರೆ. ಪೊಲೀಸರು ಸಿಸಿ ಕ್ಯಾಮರಾ ದೃಶ್ಯಗಳನ್ನು ವಶಕ್ಕೆ ಪಡೆದು ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.
Published On - 12:56 pm, Mon, 17 August 20