ಏಪ್ರಿಲ್ 5ಕ್ಕೆ ಬರ್ತಿದೆ ಶರಣ್ ನಟನೆಯ ಹಾರರ್ ಸಿನಿಮಾ ‘ಛೂ‌ ಮಂತರ್’

‘ಛೂ ಮಂತರ್’ ಸಿನಿಮಾ ರಿಲೀಸ್​ಗೆ ಒಂದು ತಿಂಗಳು ಬಾಕಿ ಇದೆ. ಹೀಗಾಗಿ, ಚಿತ್ರಕ್ಕೆ ಭರ್ಜರಿ ಪ್ರಚಾರ ನೀಡುವ ಕೆಲಸವನ್ನು ತಂಡ ಮಾಡುತ್ತಿದೆ. ಟೀಸರ್ ನೋಡಿದವರಿಗೆ ಸಿನಿಮಾದ ಗುಣಮಟ್ಟದ ಬಗ್ಗೆ ನಿರೀಕ್ಷೆ ಮೂಡುವಂತಾಗಿದೆ. ಶೀಘ್ರವೇ ಈ ಸಿನಿಮಾದ ಟ್ರೇಲರ್ ರಿಲೀಸ್ ಆಗಲಿದೆ.

ಏಪ್ರಿಲ್ 5ಕ್ಕೆ ಬರ್ತಿದೆ ಶರಣ್ ನಟನೆಯ ಹಾರರ್ ಸಿನಿಮಾ ‘ಛೂ‌ ಮಂತರ್’
ಶರಣ್

Updated on: Mar 02, 2024 | 1:15 PM

ನಟ ಶರಣ್ (Sharan) ಅವರು ಸ್ಯಾಂಡಲ್​ವುಡ್​ನಲ್ಲಿ ಬೇಡಿಕೆ ಸೃಷ್ಟಿಸಿಕೊಂಡಿದ್ದಾರೆ. ಅವರ ನಟನೆಯ ‘ಅವಾತರ ಪುರುಷ 2’ ಸಿನಿಮಾ ಮಾರ್ಚ್​ 22ರಂದು ರಿಲೀಸ್ ಆಗಲಿದೆ ಎಂದು ಘೋಷಣೆ ಆಗಿದೆ. ಈ ಚಿತ್ರದಲ್ಲಿ ಮಾಟ ಮಂತ್ರದ ಬಗ್ಗೆ ಇದೆ. ಅದೇ ರೀತಿ, ಹಾರರ್ ಕಥೆ ಹೊಂದಿರುವ ‘ಛೂ‌ ಮಂತರ್’ ಸಿನಿಮಾ ಕೂಡ ರಿಲೀಸ್​ಗೆ ರೆಡಿ ಇದೆ. ಈ ಚಿತ್ರದ ರಿಲೀಸ್ ದಿನಾಂಕವನ್ನು ತಂಡ ತಿಳಿಸಿದೆ. ಏಪ್ರಿಲ್ 5ಕ್ಕೆ ಈ ಚಿತ್ರ ಬಿಡುಗಡೆ ಆಗಲಿದೆ. ಈ ಮೂಲಕ ಶರಣ್ ಸಿನಿಮಾ ಬ್ಯಾಕ್​ ಟು ಬ್ಯಾಕ್ ರಿಲೀಸ್ ಆಗುತ್ತಿದೆ.

ತರುಣ್ ಸ್ಟುಡಿಯೋಸ್ ಬ್ಯಾನರ್​ ಅಡಿಯಲ್ಲಿ ಮಾನಸ ತರುಣ್ ಹಾಗೂ ತರುಣ್ ಶಿವಪ್ಪ ‘ಛೂ ಮಂತರ್’ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ‘ಕರ್ವ’ ಹೆಸರಿನ ಹಾಹರ್ ಸಿನಿಮಾ ಮಾಡಿ ಫೇಮಸ್ ಆದವರು ನವನೀತ್. ಅವರು ಶರಣ್ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ಹಾಸ್ಯ ಸಿನಿಮಾಗಳನ್ನೇ ಆಯ್ಕೆ ಮಾಡಿಕೊಂಡು ಫೇಮಸ್ ಆಗಿರೋ ಶರಣ್ ಅವರು ಹೊಸ ರೀತಿಯ ಪ್ರಯೋಗಕ್ಕೆ ಮುಂದಾಗಿದ್ದಾರೆ. ಈಗಾಗಲೇ ಸಿನಿಮಾದ ಟೀಸರ್ ರಿಲೀಸ್ ಆಗಿ ಮೆಚ್ಚುಗೆ ಪಡೆದಿದೆ.

‘ಛೂ ಮಂತರ್’ ಸಿನಿಮಾ ರಿಲೀಸ್​ಗೆ ಒಂದು ತಿಂಗಳು ಬಾಕಿ ಇದೆ. ಹೀಗಾಗಿ, ಚಿತ್ರಕ್ಕೆ ಭರ್ಜರಿ ಪ್ರಚಾರ ನೀಡುವ ಕೆಲಸವನ್ನು ತಂಡ ಮಾಡುತ್ತಿದೆ. ಟೀಸರ್ ನೋಡಿದವರಿಗೆ ಸಿನಿಮಾದ ಗುಣಮಟ್ಟದ ಬಗ್ಗೆ ನಿರೀಕ್ಷೆ ಮೂಡುವಂತಾಗಿದೆ. ಶೀಘ್ರವೇ ಈ ಸಿನಿಮಾದ ಟ್ರೇಲರ್ ರಿಲೀಸ್ ಆಗಲಿದೆ.

ಇದನ್ನೂ ಓದಿ: ‘ಛೂ ಮಂತರ್’ ಸಿನಿಮಾ ಸೆಟ್​​ನಲ್ಲಿ ಶರಣ್​ಗೆ ಹಾರರ್ ಅನುಭವ

‘ಛೂ ಮಂತರ್’ ಪಕ್ಕಾ ಹಾರರ್ ಸಿನಿಮಾ. ಇತರ ಹಾರರ್ ಚಿತ್ರಗಳಿಗಿಂತ ಈ ಸಿನಿಮಾ ಭಿನ್ನವಾಗಿದೆ ಎಂಬುದು ತಂಡದ ಅಭಿಪ್ರಾಯ. ಮೇಕಿಂಗ್ ವಿಚಾರದಲ್ಲೂ ಗುಣಮಟ್ಟ ಕಾಪಾಡಿಕೊಳ್ಳಲಾಗಿದೆ. ಶರಣ್ ಪಾತ್ರ ಈ ಹಿಂದಿನ ಸಿನಿಮಾಗಳಿಗಿಂತ ಭಿನ್ನವಾಗಿದೆ. ಶರಣ್ ಹಾಗೂ ಚಿಕ್ಕಣ್ಣ ಕಾಂಬಿನೇಷನ್​ಗೆ ದೊಡ್ಡ ಅಭಿಮಾನಿ ಬಳಗ ಇದೆ. ಈ ಸಿನಿಮಾದಲ್ಲಿ ಇವರ ಕಾಂಬಿನೇಷನ್ ಇದೆ. ಮೇಘನಾ ಗಾಂವ್ಕರ್, ಅದಿತಿ ಪ್ರಭುದೇವ, ಪ್ರಭು ಮುಂಡ್ಕರ್ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ. ಚಿತ್ರದ ಟ್ರೇಲರ್ ರಿಲೀಸ್ ದಿನಾಂಕವನ್ನು ತಂಡ ಶೀಘ್ರವೇ ತಿಳಿಸಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ