ಮುಂಬೈ: ಬಾಲಿವುಡ್ ಡ್ರಗ್ಸ್ ಜಾಲದ ಬಗ್ಗೆ NCBಯಿಂದ ತನಿಖೆ ನಡೆಸಲಾಗುತ್ತಿದ್ದು ಚಿತ್ರರಂಗದ ಮೂವರು ನಟಿಯರಾದ ದೀಪಿಕಾ ಪಡುಕೋಣೆ, ಸಾರಾ ಅಲಿ ಖಾನ್ ಮತ್ತು ಶ್ರದ್ಧಾ ಕಪೂರ್ಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಜಾರಿಮಾಡಲಾಗಿತ್ತು.
ಅಂತೆಯೇ, ಇಂದು NCB ವಿಚಾರಣೆಗೆ ಹಾಜರಾಗಿದ್ದ ನಟಿ ದೀಪಿಕಾ ಪಡುಕೋಣೆ ಅಧಿಕಾರಿಗಳ ಬಳಿ WhatsApp ಚಾಟ್ ನನ್ನದೇ ಎಂದು ಒಪ್ಪಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಆದರೆ ಚಾಟ್ನಲ್ಲಿ ಮಾಲ್ ಅಂದ್ರೆ ಡ್ರಗ್ಸ್ ಅಲ್ಲ, ಸಿಗರೇಟ್ ಎಂದು ದೀಪಿಕಾ NCB ಅಧಿಕಾರಿಗಳಿಗೆ ತಿಳಿಸಿದ್ದಾರೆ ಎಂದು ತಿಳಿದುಬಂದಿದೆ.
ಮಾಲ್ ಅಂದರೆ ಸಿಗರೇಟ್ ಎಂದು ತಿಳಿಸಿರುವ ನಟಿ ವಿಚಾರಣೆ ನಂತರ NCB ಕಚೇರಿಯಿಂದ ತೆರಳಿದರು. ಬಳಿಕ ತಮ್ಮ ವಕೀಲರ ಜೊತೆ ಚರ್ಚೆ ಸಹ ನಡೆಸಿದರು ಎಂದು ಹೇಳಲಾಗಿದೆ.
#WATCH Actor Deepika Padukone leaves from Narcotics Control Bureau's (NCB) Special Investigation Team (SIT) office after almost five hours#Mumbai pic.twitter.com/VLuTHNQv9h
— ANI (@ANI) September 26, 2020