ಬಾಗಲಕೋಟೆ: ಜಿಲ್ಲೆಯ ಬೀಳಗಿ ತಾಲೂಕಿನ ಗಿರಿಸಾಗರ ಗ್ರಾಮ ಪಂಚಾಯತಿ ಚುನಾವಣೆ ಹಿನ್ನೆಲೆ ಕಿರುತೆರೆ ತಾರೆ ರಂಜನಿ ರಾಘವನ್ ಪ್ರಚಾರ ನಡೆಸಿದರು.
ಪುಟ್ಟಗೌರಿ ಧಾರವಾಹಿಯಿಂದ ಹೆಚ್ಚು ಜನಪ್ರೀಯತೆ ಪಡೆದುಕೊಂಡ ರಂಜನಿ ರಾಘವನ್ ಗಿರಿಸಾಗರ ಗ್ರಾಮದ ವಾರ್ಡ್ ನಂಬರ್ 3 ರಲ್ಲಿ ಬರುವ ಮೂವರು ಅಭ್ಯರ್ಥಿಗಳಾದ ವಿಜಯಲಕ್ಷ್ಮೀ ಹೂಗಾರ, ದುರಗವ್ವ ಮೇತ್ರಿ, ಯಂಕಪ್ಪ ನುಚ್ಚಿನ ಪರ ಮತಯಾಚನೆ ನಡೆಸಿದರು. ಎಂಎಲ್ಎ ಹಾಗೂ ಎಂಪಿ ಚುನಾವಣೆಯ ಅಬ್ಬರ ಮೀರಿಸುವ ರೀತಿಯಲ್ಲಿ ಗ್ರಾಮ ಪಂಚಾಯತಿ ಪ್ರಚಾರ ಅಬ್ಬರ ಕಂಡುಬಂದಿದ್ದು, ಕಿರಿತೆರೆ ತಾರೆ ನೋಡಲು ಜನ ಸಾಗರವೇ ಹರಿದು ಬಂದಿತ್ತು.
ರಂಜನಿ ರಾಘವನ್ ನೋಡಲು ಜನರ ನೂಕು ನುಗ್ಗಲಿನ ನಡುವೆ ಮಾಸ್ಕ್ ಹಾಕದೇ ಸಾಮಾಜಿಕ ಅಂತರ ಉಲ್ಲಂಘನೆ ಮಾಡಿದರು. ಈ ಸಂದರ್ಭದಲ್ಲಿ ನಟಿ ಮಾಸ್ಕ್ ಹಾಕಿ ಸಾಮಾಜಿಕ ಅಂತರ ಕಾಪಾಡಿ ಎಂದು ಸಲಹೆ ನೀಡಿದರು
ಪ್ರಚಾರದ ಅಬ್ಬರ:
ಗ್ರಾ.ಪಂ. ಚುನಾವಣೆಯಲ್ಲಿ ಫೇಸ್ಬುಕ್ ಹವಾ: ಕೋಟೆನಾಡಿನಲ್ಲಿ ಹಳ್ಳಿಹಕ್ಕಿಗಳ ಪೋಸ್ಟ್ ಕಮೆಂಟ್ ಅಬ್ಬರ
Published On - 4:24 pm, Sat, 19 December 20