ಹಸಿರು ಪಟಾಕಿಗಳ ಬಗ್ಗೆ ಒಂದಿಷ್ಟು ಮಾಹಿತಿ | All you need to know about green crackers
ದೆಹಲಿ ಮತ್ತು ರಾಷ್ಟ್ರ ರಾಜಧಾನಿ ವಲಯದಲ್ಲಿ ಪ್ರತಿವರ್ಷದ ನವಂಬರ್ ಮತ್ತು ಡಿಸೆಂಬರ್ ತಿಂಗಳುಗಳಲ್ಲಿ ಹೆಚ್ಚುತ್ತಿರುವ ವಾಯು ಮಾಲಿನ್ಯದ ಮತ್ತು ಅದರಿಂದ ಜನರ ಮೇಲೆ ಅದರಲ್ಲೂ ವಿಶೇಷವಾಗಿ ಮಕ್ಕಳು ಹಾಗೂ ಹಿರಿಯ ನಾಗರಿಕರ ಆರೋಗ್ಯದ ಮೇಲಾಗುತ್ತಿರುವ ದುಷ್ಪರಿಣಾಮಗಳ ಮೇಲೆ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ಪದೇಪದೆ ಕಳವಳ ಮತ್ತು ಆತಂಕವನ್ನು ವ್ಯಕ್ತಪಡಿಸಸುತ್ತಿದೆ. ಪಕ್ಕದ ಪಂಜಾಬ್ ಮತ್ತು ಹರಿಯಾಣ ರಾಜ್ಯಗಳಲ್ಲಿ ರೈತರು ಹುಲ್ಲಿನ ಬವಣೆಗಳಿಗೆ ಬೆಂಕಿ ಹಚ್ಚುತ್ತಿರುವುದರಿಂದಲೂ ದೆಹಲಿ ಮತ್ತು ಎನ್ಸಿಅರ್ ಪ್ರದೇಶದಲ್ಲಿ ವಿಪರೀತ ಅನಿಸುವಷ್ಟು ವಾಯು ಮಾಲಿನ್ಯ ಉಂಟಾಗುತ್ತಿದೆ. ದೀಪಾವಳಿ […]

ದೆಹಲಿ ಮತ್ತು ರಾಷ್ಟ್ರ ರಾಜಧಾನಿ ವಲಯದಲ್ಲಿ ಪ್ರತಿವರ್ಷದ ನವಂಬರ್ ಮತ್ತು ಡಿಸೆಂಬರ್ ತಿಂಗಳುಗಳಲ್ಲಿ ಹೆಚ್ಚುತ್ತಿರುವ ವಾಯು ಮಾಲಿನ್ಯದ ಮತ್ತು ಅದರಿಂದ ಜನರ ಮೇಲೆ ಅದರಲ್ಲೂ ವಿಶೇಷವಾಗಿ ಮಕ್ಕಳು ಹಾಗೂ ಹಿರಿಯ ನಾಗರಿಕರ ಆರೋಗ್ಯದ ಮೇಲಾಗುತ್ತಿರುವ ದುಷ್ಪರಿಣಾಮಗಳ ಮೇಲೆ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ಪದೇಪದೆ ಕಳವಳ ಮತ್ತು ಆತಂಕವನ್ನು ವ್ಯಕ್ತಪಡಿಸಸುತ್ತಿದೆ. ಪಕ್ಕದ ಪಂಜಾಬ್ ಮತ್ತು ಹರಿಯಾಣ ರಾಜ್ಯಗಳಲ್ಲಿ ರೈತರು ಹುಲ್ಲಿನ ಬವಣೆಗಳಿಗೆ ಬೆಂಕಿ ಹಚ್ಚುತ್ತಿರುವುದರಿಂದಲೂ ದೆಹಲಿ ಮತ್ತು ಎನ್ಸಿಅರ್ ಪ್ರದೇಶದಲ್ಲಿ ವಿಪರೀತ ಅನಿಸುವಷ್ಟು ವಾಯು ಮಾಲಿನ್ಯ ಉಂಟಾಗುತ್ತಿದೆ.
ದೀಪಾವಳಿ ಹಬ್ಬದ ಸಂದರ್ಭದಲ್ಲಿ ಪರಿಸ್ಥಿತಿ ವಿಕೋಪಕ್ಕೆ ಹೋಗಿಬಿಡುತ್ತದೆ. ಎನ್ಜಿಟಿ ಹಬ್ಬದ ಸಮಯದಲ್ಲಿ ಪಟಾಕಿ ಸಿಡಿಸುವುದನ್ನು ನಿಷೇಧಿಸಿ ಅಂತ ಸರ್ಕಾರಗಳಿಗೂ ಹೇಳುತ್ತಿದ್ದರೂ ಆದೇಶದ ಪಾಲನೆ ಸೂಕ್ತವಾಗಿ ಆಗುತ್ತಿಲ್ಲ. ಸರ್ಕಾರಗಳೂ ಪಟಾಕಿ ಸಿಡಿಸಬೇಡಿ ಅಂತ ಆದೇಶವನ್ನೇನೋ ಹೊರಡಿಸುತ್ತವೆ, ಆದರೆ ಜನ ಮಾತ್ರ ಪಟಾಕಿ ನಿಲ್ಲಿಸುತ್ತಿಲ್ಲ. ಆದರೆ, ಈ ಬಾರಿ ನವೆಂಬರ್ 30ರವರೆಗೆ ಈ ಪ್ರದೇಶದಲ್ಲಿ ಸಾಂಪ್ರದಾಯಿಕ ಪಟಾಕಿ ಸಿಡಿಸುವುದನ್ನು ಸಂಫೂರ್ಣವಾಗಿ ನಿಷೇಧಿಸಬೇಕು ಮತ್ತು ಸಂಬಂಧಪಟ್ಟ ಸರ್ಕಾರಗಳು ಕಟ್ಟುನಿಟ್ಟಿನ ಕ್ರಮತೆಗೆದುಕೊಳ್ಳಬೇಕೆಂದು ಎನ್ಜಿಟಿ ಆದೇಶಿಸಿದೆ.
ದೆಹಲಿ ಸೇರಿದಂತೆ, ರಾಜಸ್ತಾನ, ಒಡಿಶಾ, ಆಂಧ್ರ ಪ್ರದೇಶ ಮತ್ತು ಕರ್ನಾಟಕದಲ್ಲೂ ಸಾಂಪ್ರದಾಯಿಕ ಪಟಾಕಿಗಳ ಮಾರಾಟ ಮತ್ತು ಸಿಡಿಸುವುದನ್ನು ನಿಷೇಧಿಸಿವೆ.
ಪಟಾಕಿ ಸಿಡೆಸಲೇಬೇಕೆಂದಿದ್ದರೆ, ಹಸಿರು ಪಟಾಕಿ ಸಿಡಿಸಿರಿ ಎಂಬ ಸಲಹೆಯನ್ನು ಎನ್ಜಿಟಿ ಜನರಿಗೆ ನೀಡುತ್ತಿದೆ. ಬಹಳಷ್ಟು ಜನರಿಗೆ ಹಸಿರು ಪಟಾಕಿಗಳ ಬಗ್ಗೆ ಗೊಂದಲ ಮೂಡಿದೆ, ಅವುಗಳನ್ನು ಹೇಗೆ ತಯಾರಿಸುತ್ತಾರೆ, ಯಾರು ತಯಾರಿಸುತ್ತಾರೆ, ಸಿಗೋದು ಎಲ್ಲಿ, ಅವುಗಳನ್ನು ಸಿಡಿಸುವುದರಿಂದ ಆರೋಗ್ಯದ ಮೇಲೆ ಯಾವುದೇ ದುಷ್ಪರಿಣಾಮ ಉಂಟಾಗುವುದಿಲ್ಲವೇ ಮೊದಲಾದ ಪ್ರಶ್ನೆಗಳು ಅವರಲ್ಲಿ ಹುಟ್ಟಿಕೊಂಡಿವೆ.
ಹಸಿರು ಪಟಾಕಿಗಳನ್ನು ಪರಿಸರದ ಮೇಲೆ ಕಡಿಮೆ ಪರಿಣಾಮ ಬೀರುವ ಕಚ್ಚಾ ಸಾಮಗ್ರಿಗಳನ್ನು ಬಳಸಿ ತಯಾರಿಸಿತ್ತಾರೆ. ಈ ಸಾಮಗ್ರಿಗಳು ಅಪಾಯಕಾರಿ ಧೂಳಿನ ಕಣಗಳು ಪರಿಸರದಲ್ಲಿ ಹಬ್ಬುವುದನ್ನು ತಡೆಯುತ್ತವೆ. ಹಸಿರು ಪಟಾಕಿಗಳು ಸಿಡಿಸಿದಾಗ ಉಂಟಾಗುವ ಶಬ್ದ ಸಾಂಪ್ರದಾಯಿಕ ಪಟಾಕಿಗಳನ್ನು ಸ್ಫೋಟಿಸಿದಾಗ ಉಂಟಾಗುವ ಶಬ್ದಕ್ಕಿಂತ ಶೇಕಡಾ 30ರಷ್ಟು ಕಮ್ಮಿಯಿರುತ್ತದೆ. ಮಾಮೂಲು ಪಟಾಕಿಗಳು 160 ಡೆಸಿಬಲ್ಸ್ನಷ್ಟು ಶಬ್ದ ಸೃಷ್ಟಿಸಿದರೆ, ಹಸಿರು ಪಟಾಕಿಗಳು 110-125 ಡೆಸಿಬಲ್ಗಳಷ್ಟು ಶಬ್ದವನ್ನುಂಟು ಮಾಡುತ್ತವೆ.
ಹಸಿರು ಪಟಾಕಿಗಳ ತಯಾರಕರು ವಿಜ್ಞಾನ ಮತ್ತು ಕೈಗಾರಿಕಾ ಸಂಶೋಧನಾ ಪರಿಷತ್ನೊಂದಿಗೆ ಕರಾರಿಗೊಳಪಡಬೇಕಾಗುತ್ತದೆ. ಪ್ರಸ್ತುತವಾಗಿ ಭಾರತದಲ್ಲಿ ಮೂರು ಬಗೆಯ ಹಸಿರು ಪಟಾಕಿಗಳನ್ನು ತಯಾರಿಸಲಾಗುತ್ತಿದ್ದು, ಅವುಗಳನ್ನು ಸ್ವಾಸ್ (SWAS), ಸ್ಟಾರ್ (STAR) ಮತ್ತು ಸಫಲ್ (SAFAL) ಎಂದು ಕರೆಯಲಾಗುತ್ತದೆ. ಗಮಿನಿಸಬೇಕಿರುವ ಅಂಶವೇನೆಂದರೆ ಹಸಿರು ಪಟಾಕಿಗಳಲ್ಲೂ ಅಲ್ಯೂಮಿನಿಯಂ, ಬೇರಿಯಂ, ಪೊಟ್ಯಾಸಿಯಂ ನೈಟ್ರೇಟ್ ಮತ್ತು ಇಂಗಾಲದಂಥ ರಾಸಾಯನಿಕಗಳನ್ನು ಬಳಸಲಾಗುತ್ತದೆ. ಆದರೆ ಈ ರಾಸಾಯನಿಕಗಳನ್ನು ಬಳಸುವ ಪ್ರಮಾಣ ಬಹಳ ಕಡಿಮೆಯಿರುವುದರಿಂದ ಅವು ಉಗುಳುವ ಹೊಗೆ ಮತ್ತು ಅದರಲ್ಲಿ ಅಡಕವಾಗಿರುವ ವಿಷಕಾರಿ ಕಣಗಳು ಶೇಕಡಾ 30ರಷ್ಟು ಕಮ್ಮಿಯಿರುತ್ತವೆ.