ಅಕ್ಟೋಬರ್ ತಿಂಗಳಿನಲ್ಲಿ ಭಾರತದಲ್ಲಿ ಶೇ 7.61 ಹಣದುಬ್ಬರ ಏರಿಕೆ, ಹೇಗೆ ಗೊತ್ತಾ?
ಒಂದು ಕಡೆ ಕೊರೊನಾದ ಲಾಕ್ಡೌನ್, ಇನ್ನೊಂದು ಕಡೆ ಅತಿಯಾದ ಮಳೆಯಾಗಿದ್ದು, ಈ ಎರಡು ಕಾರಣಗಳಿಂದ ಆಹಾರ ಉತ್ಪನ್ನವನ್ನು ಸರಿಯಾದ ಸಮಯಕ್ಕೆ ಮಾರುಕಟ್ಟೆಗೆ ಪೂರೈಕೆ ಮಾಡಲು ಸಾಧ್ಯವಾಗಲಿಲ್ಲ. ಇದರ ಪರಿಣಾಮವಾಗಿ ಆಹಾರದ ಬೆಲೆಗಳಲ್ಲಿ ಏರಿಕೆಯಾಗಿದ್ದು, ಭಾರತದ ಆರ್ಥಿಕತೆಯ ಮೇಲೆ ಹಣದುಬ್ಬರದ ಛಾಯೆ ಆವರಿಸುವಂತೆ ಮಾಡಿದೆ. ಆಹಾರದ ಬೆಲೆಯಲ್ಲಿನ ಏರಿಕೆ ಅದರಲ್ಲೂ ವಿಶೇಷವಾಗಿ ಈರುಳ್ಳಿಯ ಬೆಲೆಯಲ್ಲಿನ ಏರಿಕೆಯು ಅಕ್ಟೋಬರ್ ಹೊತ್ತಿಗೆ ಚಿಲ್ಲರೆ ಬೆಲೆಯ ಹಣದುಬ್ಬರವನ್ನು ಹೆಚ್ಚಿಸಿದೆ. ಗ್ರಾಹಕ ಬೆಲೆ ಸೂಚ್ಯಂಕ (ಸಿಪಿಐ) ಮೂಲಕ ಚಿಲ್ಲರೆ ಬೆಲೆ ಹಣದುಬ್ಬರವನ್ನು ಅಳೆಯಲಾಗಿದ್ದು, ಅಕ್ಟೋಬರಿನಲ್ಲಿ […]
ಒಂದು ಕಡೆ ಕೊರೊನಾದ ಲಾಕ್ಡೌನ್, ಇನ್ನೊಂದು ಕಡೆ ಅತಿಯಾದ ಮಳೆಯಾಗಿದ್ದು, ಈ ಎರಡು ಕಾರಣಗಳಿಂದ ಆಹಾರ ಉತ್ಪನ್ನವನ್ನು ಸರಿಯಾದ ಸಮಯಕ್ಕೆ ಮಾರುಕಟ್ಟೆಗೆ ಪೂರೈಕೆ ಮಾಡಲು ಸಾಧ್ಯವಾಗಲಿಲ್ಲ. ಇದರ ಪರಿಣಾಮವಾಗಿ ಆಹಾರದ ಬೆಲೆಗಳಲ್ಲಿ ಏರಿಕೆಯಾಗಿದ್ದು, ಭಾರತದ ಆರ್ಥಿಕತೆಯ ಮೇಲೆ ಹಣದುಬ್ಬರದ ಛಾಯೆ ಆವರಿಸುವಂತೆ ಮಾಡಿದೆ.
ಆಹಾರದ ಬೆಲೆಯಲ್ಲಿನ ಏರಿಕೆ ಅದರಲ್ಲೂ ವಿಶೇಷವಾಗಿ ಈರುಳ್ಳಿಯ ಬೆಲೆಯಲ್ಲಿನ ಏರಿಕೆಯು ಅಕ್ಟೋಬರ್ ಹೊತ್ತಿಗೆ ಚಿಲ್ಲರೆ ಬೆಲೆಯ ಹಣದುಬ್ಬರವನ್ನು ಹೆಚ್ಚಿಸಿದೆ. ಗ್ರಾಹಕ ಬೆಲೆ ಸೂಚ್ಯಂಕ (ಸಿಪಿಐ) ಮೂಲಕ ಚಿಲ್ಲರೆ ಬೆಲೆ ಹಣದುಬ್ಬರವನ್ನು ಅಳೆಯಲಾಗಿದ್ದು, ಅಕ್ಟೋಬರಿನಲ್ಲಿ ಶೇಕಡಾ 7.27ರಷ್ಟಿದ್ದ ಹಣದುಬ್ಬರವು ಸೆಪ್ಟೆಂಬರ್ ವೇಳೆಗಾಗಲೇ ಶೇ 7.61ಕ್ಕೆ ಏರಿಕೆಯಾಗಿದೆ.
ರಾಷ್ಟೀಯ ಸಂಖ್ಯಾಶಾಸ್ತ್ರೀಯ ಕಚೇರಿ (ಎನ್ಎಸ್ಒ) ನೀಡಿದ ಮಾಹಿತಿಯ ಪ್ರಕಾರ, ಭಾರತದ ನಗರ ಪ್ರದೇಶಗಳಲ್ಲಿ ಸೆಪ್ಟೆಂಬರ್ ತಿಂಗಳಲ್ಲಿ ಶೇ. 7.26 ಇದ್ದ ಸಿಪಿಐ ಅಕ್ಟೋಬರಿನಲ್ಲಿ ಶೇ 7.40 ಕ್ಕೆ ಏರಿದರೆ ಗ್ರಾಮೀಣ ಸಿಪಿಐ ಸೆಪ್ಟೆಂಬರಿನಲ್ಲಿದ್ದ ಶೇ 7.36ರಿಂದ ಅಕ್ಟೋಬರ್ ತಿಂಗಳಿಗಾಲೇ ಶೇ 7.69ಕ್ಕೆ ಏರಿದೆ.
ಅಂಕಿಅಂಶಗಳ ಪ್ರಕಾರ, ಆಹಾರ ಬೆಲೆ ಸೂಚ್ಯಂಕವು ಸೆಪ್ಟೆಂಬರ್ ನಲ್ಲಿ ಶೇ. 10.68 ರಿಂದ ಅಕ್ಟೋಬರ್ ವೇಳೆಗೆ ಶೇ 11.7 ರಷ್ಟು ಏರಿಕೆಯಾಗಿದೆ. ಇದಕ್ಕೆ ಸಂಬಂಧಪಟ್ಟಂತೆ ಸಿಎಫ್ಪಿಐ ಆಹಾರ ಉತ್ಪನ್ನಗಳ ಚಿಲ್ಲರೆ ಬೆಲೆಯಲ್ಲಿ ಉಂಟಾದ ಬದಲಾವಣೆಗಳನ್ನು ಅಳೆಯುತ್ತದೆ.
ಬೆಲೆ ಏರಿಕೆಯೊಂದಿಗೆ ಗುರುತಿಸಿಕೊಂಡ ಉತ್ಪನ್ನಗಳು:
* YOY (Year after Year) ಹಣದುಬ್ಬರ ದರದಲ್ಲಿ ತರಕಾರಿಗಳು, ಬೇಳೆಕಾಳುಗಳು ಮತ್ತು ಇತರೇ ಉತ್ಪನ್ನಗಳ ಬೆಲೆಗಳು ಅಕ್ಟೋಬರಿನಲ್ಲಿ ಕ್ರಮವಾಗಿ ಶೇಕಡಾ 22.51 ಮತ್ತು 18.34ರಷ್ಟು ಏರಿಕೆಯಾಗಿದೆ.
* ಮಾಂಸ ಮತ್ತು ಮೀನುಗಳ ಬೆಲೆಗಳು ಶೇಕಡಾ 18.70 ಏರಿಕೆಯಾಗಿದೆ.
* ಮೊಟ್ಟೆಗಳು ಶೇಕಡಾ 21.81 ಏರಿಕೆಯಾಗಿದೆ.
* ಸಿಪಿಐ ಅಡಿಯಲ್ಲಿ ಇಂಧನ ಮತ್ತು ಬೆಳಕಿನ ವಿಭಾಗವು ಶೇಕಡಾ 2.28 ಏರಿಕೆಯಾಗಿದೆ.
* ತರಕಾರಿ ಬೆಲೆಗಳು 22.51 % ರಷ್ಟು ಏರಿಕೆಯಾಗಿದ್ದರೆ, ದ್ವಿದಳ ಧಾನ್ಯಗಳು ಮತ್ತು ಉತ್ಪನ್ನಗಳ ಬೆಲೆ ಅಕ್ಟೋಬರಿನಲ್ಲಿ 18.34 % ರಷ್ಟು ಏರಿಕೆಯಾಗಿದೆ.
‘ಅನುಕೂಲಕರ ಮತ್ತು ಹೇರಳವಾದ ಖಾರೀಫ್ ಬೆಳೆಯ ನಡುವೆಯೂ ತರಕಾರಿ ಮತ್ತು ಇತರ ವಸ್ತುಗಳ ವಿಷಯದಲ್ಲಿ ಅಕ್ಟೋಬರ್ ಹೊತ್ತಿಗೆ ಆಹಾರ ಹಣದುಬ್ಬರವು ಮತ್ತಷ್ಟು ಹೆಚ್ಚಾಗಿದೆ. ಅದಾಗಿಯೂ ಮಾರುಕಟ್ಟೆಗೆ ಹೊಸ ಉತ್ಪನ್ನಗಳು ಬರಲಿದ್ದು, ಬೆಲೆಯಲ್ಲಿನ ಏರಿಕೆಯನ್ನು ತಣ್ಣಗಾಗಿಸಲು ಇದು ಸಹಾಯ ಮಾಡುತ್ತದೆ’ ಎಂದಿದ್ದಾರೆ ಐಸಿಆರ್ಎ ಪ್ರಾಂಶುಪಾಲರಾದ ಅರ್ಥಶಾಸ್ತ್ರಜ್ಞೆ ಅದಿತಿ ನಾಯರ್.
ಆತಂಕಕಾರಿ ಸಂಗತಿಯೆಂದರೆ ಸೆಪ್ಟೆಂಬರಿನಲ್ಲಿ ಶೇ 5.5ರಷ್ಟಿದ್ದ ಹಣದುಬ್ಬರವು ಅಕ್ಟೋಬರ್ ವೇಳೆಗೆ ಶೇ 5.7ಕ್ಕೆ ಏರಿದೆ. ಇದು ನೇರವಾಗಿ ಬಟ್ಟೆ, ಪಾದರಕ್ಷೆಗಳು, ವಸತಿ ಆರೋಗ್ಯ ಮತ್ತು ಮನರಂಜನೆಯಂತಹ ಹಲವಾರು ವಸ್ತುಗಳ ಮೇಲೆ ಪರಿಣಾಮ ಬೀರುತ್ತದೆ ಎಂದು ನಾಯರ್ ಹೇಳಿದರು.
ಹಣದುಬ್ಬರದ ಮಟ್ಟವು ಆತಂಕಕ್ಕೆ ಕಾರಣವಾಗಿದೆ ಮತ್ತು ಬಡ್ಡಿ ದರಗಳ ಆಧಾರದ ಮೇಲೆ ಕಾರ್ಯನಿರ್ವಹಿಸುವ ಆರ್ಬಿಐ ಸಾಮರ್ಥ್ಯದ ಮೇಲೆಯೂ ಇದು ಪರಿಣಾಮ ಬೀರುತ್ತದೆ. ಆದರೂ 2021ರ ಅಂತ್ಯದ ವೇಳೆಗೆ ಹಣದುಬ್ಬರವು ಸಾಧಾರಣವಾಗಲಿದೆ ಎಂಬ ನಿರೀಕ್ಷೆ ಕೇಂದ್ರ ಬ್ಯಾಂಕಿನದ್ದಾಗಿದೆ.