210 ಕೋಟಿ ರೂ.ಗಳ ವಿದ್ಯುತ್ ಬಿಲ್ ನೋಡಿ ತಲೆತಿರುಗಿ ಬಿದ್ದ ಉದ್ಯಮಿ

ಹಿಮಾಚಲ ಪ್ರದೇಶದ ಹಮೀರ್‌ಪುರ ಜಿಲ್ಲೆಯಲ್ಲಿ ಕಾಂಕ್ರೀಟ್ ಇಟ್ಟಿಗೆಗಳನ್ನು ತಯಾರಿಸುವ ಸಣ್ಣ ಪ್ರಮಾಣದ ಉದ್ಯಮದ ಮಾಲೀಕರು 210 ಕೋಟಿ ರೂ.ಗಳ ವಿದ್ಯುತ್ ಬಿಲ್​ ಪಡೆದಿದ್ದಾರೆ. ಬಿಲ್ ನೋಡಿದ ಉದ್ಯಮ ಮಾಲೀಕರು ಗೊಂದಲಕ್ಕೊಳಗಾದರು. ಕೂಡಲೇ ವಿದ್ಯುತ್ ಮಂಡಳಿ ಕಚೇರಿಗೆ ತೆರಳಿ ದೂರು ನೀಡಿದರು. 2,10,42,08,405 ರೂಪಾಯಿ ವಿದ್ಯುತ್ ಬಿಲ್ ನೋಡಿ ಉದ್ಯಮಿ ಬೆಚ್ಚಿಬಿದ್ದಿದ್ದಾರೆ.

210 ಕೋಟಿ ರೂ.ಗಳ ವಿದ್ಯುತ್ ಬಿಲ್ ನೋಡಿ ತಲೆತಿರುಗಿ ಬಿದ್ದ ಉದ್ಯಮಿ
BillImage Credit source: Etv Bharat
Follow us
ನಯನಾ ರಾಜೀವ್
|

Updated on: Jan 10, 2025 | 10:32 AM

ಹಿಮಾಚಲ ಪ್ರದೇಶ ಸಿಎಂ ಸುಖವಿಂದರ್ ಸಿಂಗ್ ಸುಖು ಅವರ ತವರು ಜಿಲ್ಲೆ ಹಮೀರ್‌ಪುರದಲ್ಲಿ ಅಚ್ಚರಿಯ ಪ್ರಕರಣವೊಂದು ಬೆಳಕಿಗೆ ಬಂದಿದೆ. ವಿದ್ಯುತ್ ಇಲಾಖೆ ಮಹಿಳಾ ಉದ್ಯಮಿಯೊಬ್ಬರಿಗೆ 210 ಕೋಟಿ ರೂ.ಗಳ ಬೃಹತ್ ಬಿಲ್ ಕಳುಹಿಸಿದೆ. ಬಿಲ್ ನೋಡಿದ ಉದ್ಯಮಿ ಕೆಲಕಾಲ ಪ್ರಜ್ಞೆ ತಪ್ಪಿದರು. ಆದರೆ, ದೂರಿನ ನಂತರ ವಿದ್ಯುತ್ ಇಲಾಖೆ ಬಿಲ್ ಸರಿಪಡಿಸಿದೆ.

ಇದು ಹಮೀರ್‌ಪುರದ ಭೋರಂಜ್ ಉಪವಿಭಾಗದ ಬೆಹದ್ವಿನ್ ಜತ್ತನ್ ಗ್ರಾಮದಲ್ಲಿ ನಡೆದ ಘಟನೆಯಾಗಿದೆ. ಇಲ್ಲಿ ಉದ್ಯಮಿ ಲಲಿತಾ ಧಿಮಾನ್ ಕಾಂಕ್ರೀಟ್ ಇಟ್ಟಿಗೆಗಳನ್ನು ತಯಾರಿಸುವ ಸಣ್ಣ ಪ್ರಮಾಣದ ಉದ್ಯಮವನ್ನು ನಡೆಸುತ್ತಿದ್ದಾರೆ. ಲಲಿತಾ ಅವರಿಗೆ ವಿದ್ಯುತ್ ಇಲಾಖೆ 210 ಕೋಟಿ ರೂ.ಗೂ ಹೆಚ್ಚು ವಿದ್ಯುತ್ ಬಿಲ್ ಕಳುಹಿಸಿದೆ. ಈ ವೇಳೆ ಮಹಿಳಾ ಉದ್ಯಮಿ 2,10,42,08,405 ರೂಪಾಯಿ ಬಿಲ್ ನೋಡಿದಾಗ ದಿಗ್ಭ್ರಮೆಗೊಂಡಿದ್ದು, ಕೋಟ್ಯಂತರ ರೂಪಾಯಿ ಬಿಲ್ ನೋಡಿ ಲಲಿತ್ ಧಿಮಾನ್ ಗೆ ದೊಡ್ಡ ಶಾಕ್ ಆಗಿದೆ.

ವಿದ್ಯುಚ್ಛಕ್ತಿ ಮಂಡಳಿ ನೌಕರ ಅವರಿಗೆ ಕೋಟ್ಯಂತರ ರೂಪಾಯಿ ಬಿಲ್ ನೀಡಿದ್ದು, ಬಳಿಕ ವಿದ್ಯುತ್ ಮಂಡಳಿ ಕಚೇರಿಗೆ ತೆರಳಿ ದೂರು ನೀಡಿದ್ದಾರೆ. ದೂರಿನ ಬಳಿಕ ಇದೀಗ 4,047 ರೂಪಾಯಿ ಬಿಲ್ ಬಂದಿದೆ.

ಮತ್ತಷ್ಟು ಓದಿ:ಮನುಷ್ಯರನ್ನು ನೀರಿಗಿಳಿಯುವಂತೆ ಮಾಡಲು ಸಾವಿನ ನಾಟಕವಾಡುವ ಖತರ್ನಾಕ್‌ ಮೊಸಳೆಗಳು; ವಿಡಿಯೋ ವೈರಲ್‌

ಕುರಿತು ವಿದ್ಯುತ್ ಮಂಡಳಿ ಭೋರಂಜ್‌ನ ಎಸ್‌ಡಿಒ ಅನುರಾಗ್ ಚಾಂಡೇಲ್ ಮಾತನಾಡಿ, ತಾಂತ್ರಿಕ ಕಾರಣಗಳಿಂದ ಇಷ್ಟು ಬಿಲ್ ಬಂದಿದೆ. ದೂರು ಸ್ವೀಕರಿಸಿ ಬಿಲ್ ಸರಿಪಡಿಸಿ ಇದೀಗ ಗ್ರಾಹಕರಿಗೆ 4047 ರೂ. ಬಿಲ್ ನೀಡಲಾಗಿದೆ.

ಈ ವಿಚಾರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಕೆಲವರು ಇದನ್ನು ವಿದ್ಯುತ್ ಸಬ್ಸಿಡಿಗೂ ಲಿಂಕ್ ಮಾಡಿದ್ದಾರೆ. ಜನರ ನಡುವೆಯೂ ಸಾಕಷ್ಟು ಚರ್ಚೆ ನಡೆಯಿತು.

ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Video: ರೈಲಿನಲ್ಲಿ ಕುಡುಕ ಪ್ರಯಾಣಿಕ ಹಾಗೂ ಟಿಟಿಇ ನಡುವೆ ಹೊಡೆದಾಟ
Video: ರೈಲಿನಲ್ಲಿ ಕುಡುಕ ಪ್ರಯಾಣಿಕ ಹಾಗೂ ಟಿಟಿಇ ನಡುವೆ ಹೊಡೆದಾಟ
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ