ರಾಯಚೂರು: ಗಂಡ ಹೆಂಡತಿ ಜಗಳ ಉಂಡು ಮಲಗೊತನಕ ಅನ್ನೋ ಮಾತಿದೆ. ಆದ್ರೆ ಪತಿ ಪತ್ನಿ ನಡುವಿನ ಕಲಹವೊಂದು ಪತಿಯ ಸಾವಿನಲ್ಲಿ ಅಂತ್ಯ ಕಂಡ ಘಟನೆ ನಡೆದಿದೆ. ನಗರದ ಮಹಿಳಾ ಸಮಾಜ ಸಭಾಂಗಣದ ಆವರಣದಲ್ಲಿ ನಡೆದ ಕೊಲೆ ಕೇಸ್ಗೆ ಟ್ವಿಸ್ಟ್ ಸಿಕ್ಕಿದೆ.
ಘಟನೆ ಹಿನ್ನೆಲೆ:
ರಾಯಚೂರು ತಾಲೂಕಿನ ದೇವನಪಲ್ಲಿ ಗ್ರಾಮದ ಇಮ್ರಾನ್ (30) ಕೊಲೆಯಾದ ವ್ಯಕ್ತಿ. ಹಲವು ಅನುಮಾನಗಳನ್ನು ಹುಟ್ಟು ಹಾಕಿದ್ದ ಈ ಕೇಸ್ಗೆ ಸದ್ಯ ಈಗ ಕೌಟುಂಬಿಕ ಕಲಹವೇ ಕಾರಣ ಎಂಬ ಆರೋಪಗಳು ಕೇಳಿ ಬರುತ್ತಿವೆ. ರಾಯಚೂರು ನಗರದ ಶಹಜಹಾನ್ ಎಂಬ ಯುವತಿಯನ್ನು ಇಮ್ರಾನ್ ಪ್ರೀತಿಸಿ ಮದುವೆಯಾಗಿದ್ದ. ಆದ್ರೆ ಮದುವೆಯಾದ ಬಳಿಕ ಇವರಿಬ್ಬರ ನಡುವೆ ನಿರಂತರ ಜಗಳ ನಡೀತಿತ್ತು. ಕಲಹದ ಹಿನ್ನೆಲೆ ಬೇಸತ್ತು ಕಳೆದ 4 ವರ್ಷದಿಂದ ಪತಿ-ಪತ್ನಿ ದೂರಾಗಿದ್ದರು.
ಪತಿ ಇಮ್ರಾನ್ ರಾಯಚೂರಿನಲ್ಲೇ ಬೇರೆ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ. ಶಹಜಹಾನ್ ಸಂಬಂಧಿಕರು ಇಮ್ರಾನ್ ಮೇಲೆ ಪದೇ ಪದೇ ಹಲ್ಲೆ ನಡೆಸ್ತಿದ್ರು. ಹೀಗಾಗಿ ಇ್ರಮಾನ್ ಈ ಹಿಂದೆ ಪತ್ನಿಯ ಸಂಬಂಧಿಕರ ವಿರುದ್ಧ ಕೇಸ್ ದಾಖಲಿಸಿದ್ದ. ಇದಕ್ಕೆ ಪ್ರತಿಯಾಗಿ ಪತ್ನಿ ಕೂಡ ವರದಕ್ಷಿಣೆ ಕಿರುಕುಳ ಕೇಸ್ ದಾಖಲಿಸಿದ್ದಳು.
ಈ ಎರಡೂ ಕೇಸ್ಗಳನ್ನ ರಾಜಿ ಸಂಧಾನದ ಮೂಲಕ ಬಗೆ ಹರಿಸಿಕೊಳ್ಳಲು ಇಮ್ರಾನ್ ಮುಂದಾಗಿದ್ದ. ಆದ್ರೆ ಈ ಕೇಸ್ ಬಗೆಹರಿಯುವ ಮುನ್ನವೇ ಇಮ್ರಾನ್ ಭೀಕರವಾಗಿ ಕೊಲೆಯಾಗಿದ್ದಾನೆ. ಪತ್ನಿಯ ಸಂಬಂಧಿಕರಿಂದಲೇ ಈ ಕೃತ್ಯ ನಡೆದಿದೆ ಎಂದು ಮೃತನ ಸಹೋದರಿ ಆರೋಪ ಮಾಡಿದ್ದಾರೆ. ಈ ಬಗ್ಗೆ ಸದರ ಬಜಾರ್ ಪೊಲೀಸ್ ಠಾಣೆಯಲ್ಲಿ ಕೊಲೆ ಕೇಸ್ ದಾಖಲಾಗಿದೆ.
ಇದನ್ನೂ ಓದಿ: ಕಬಾಬ್ ಮೇ ಹಡ್ಡಿ ಆಗ್ತಾನೆ ಅಂತಾ.. ಭಾವಿ ಪತಿಯನ್ನೇ ಕೊಲೆಗೈದ ಖತರ್ನಾಕ್ ಯುವತಿ ಅಂದರ್!
Published On - 9:53 am, Wed, 2 December 20