ಪಾಲಿಕೆಯಲ್ಲಿ ಶಾಸಕ-ಕಾರ್ಪೊರೇಟರ್ ಮಧ್ಯೆ ಮಾತಿನ ಚಕಮಕಿ, ವಿಷಯ ಏನು?
ಬೆಂಗಳೂರು: ಜೆಡಿಎಸ್ ಶಾಸಕ ಹಾಗೂ ಹಿರಿಯ ಬಿಜೆಪಿ ಕಾರ್ಪೊರೇಟರ್ ನಡುವೆ ಆಂಬ್ಯುಲೆನ್ಸ್ಗಳ ವಿಷಯದಲ್ಲಿ ಶುರುವಾದ ವಾಗ್ವಾದ, ಹೊಡೆದಾಟದ ಹಂತ ತಲುಪಿದ ಪ್ರಸಂಗ ಬೆಂಗಳೂರು ಮಹಾನಗರ ಪಾಲಿಕೆಯ ಆವರಣದಲ್ಲಿ ಮಂಗಳವಾರದಂದು ನಡೆಯಿತು. ವಾಸ್ತವದಲ್ಲಿ, ವಾದ-ವಿವಾದ ಆರಂಭಗೊಂಡಿದ್ದು ಶಾಸಕ ರಮೇಶ್ ಗೌಡ ಹಾಗೂ ಮೇಯರ್ ಗೌತಮ್ ಕುಮಾರ್ ಮಧ್ಯೆ. ಕೊವಿಡ್ ನಿಯಂತ್ರಣಕ್ಕೆ ಸಂಬಂಧಿಸಿದ ಚರ್ಚೆ ನಡೆಯುತ್ತಿದ್ದಾಗ ರಮೇಶ್, ಸೋಂಕಿತರನ್ನು ಆಸ್ಪತ್ರೆಗೆ ಕರೆದೊಯ್ಯಲು ಪಾಲಿಕೆಯಲ್ಲಿ ಆಂಬುಲೆನ್ಸ್ಗಳಿಲ್ಲ ಎಂದು ಹೇಳಿದರು. ಆವರ ಆರೋಪದಿಂದ ಕೊಂಚ ಸಂಯಮ ಕಳೆದುಕೊಂಡ ಮೇಯರ್, ಪಾಲಿಕೆಯಲ್ಲಿ 700 ಆಂಬುಲೆನ್ಸ್ಗಳಿವೆ […]
ಬೆಂಗಳೂರು: ಜೆಡಿಎಸ್ ಶಾಸಕ ಹಾಗೂ ಹಿರಿಯ ಬಿಜೆಪಿ ಕಾರ್ಪೊರೇಟರ್ ನಡುವೆ ಆಂಬ್ಯುಲೆನ್ಸ್ಗಳ ವಿಷಯದಲ್ಲಿ ಶುರುವಾದ ವಾಗ್ವಾದ, ಹೊಡೆದಾಟದ ಹಂತ ತಲುಪಿದ ಪ್ರಸಂಗ ಬೆಂಗಳೂರು ಮಹಾನಗರ ಪಾಲಿಕೆಯ ಆವರಣದಲ್ಲಿ ಮಂಗಳವಾರದಂದು ನಡೆಯಿತು.
ವಾಸ್ತವದಲ್ಲಿ, ವಾದ-ವಿವಾದ ಆರಂಭಗೊಂಡಿದ್ದು ಶಾಸಕ ರಮೇಶ್ ಗೌಡ ಹಾಗೂ ಮೇಯರ್ ಗೌತಮ್ ಕುಮಾರ್ ಮಧ್ಯೆ. ಕೊವಿಡ್ ನಿಯಂತ್ರಣಕ್ಕೆ ಸಂಬಂಧಿಸಿದ ಚರ್ಚೆ ನಡೆಯುತ್ತಿದ್ದಾಗ ರಮೇಶ್, ಸೋಂಕಿತರನ್ನು ಆಸ್ಪತ್ರೆಗೆ ಕರೆದೊಯ್ಯಲು ಪಾಲಿಕೆಯಲ್ಲಿ ಆಂಬುಲೆನ್ಸ್ಗಳಿಲ್ಲ ಎಂದು ಹೇಳಿದರು. ಆವರ ಆರೋಪದಿಂದ ಕೊಂಚ ಸಂಯಮ ಕಳೆದುಕೊಂಡ ಮೇಯರ್, ಪಾಲಿಕೆಯಲ್ಲಿ 700 ಆಂಬುಲೆನ್ಸ್ಗಳಿವೆ ಎಂದು ಜೋರು ದನಿಯಲ್ಲಿ ಹೇಳಿದರು.
‘ಸುಮ್ಸುಮ್ನೆ ಓಳು ಬಿಡಬೇಡಿ, ತಂದು ನಿಲ್ಲಿಸಿ ನೋಡೋಣ’ ಎಂದು ರಮೇಶ್ ಗೌಡ ಸವಾಲು ಹಾಕಿದರು. ಗೌಡರ ಮಾತಿನಿಂದ ರೊಚ್ಚಿಗೆದ್ದ ಪಾಲಿಕೆಯ ಹಿರಿಯ ಬಿಜೆಪಿ ಸದಸ್ಯ ಪದ್ಮನಾಭರೆಡ್ಡಿ, ಅವರ ಮೇಲೆ ಏರಿಹೋದರು. ತನ್ನನ್ನು ತಡೆಯಲು ಬಂದವರ ಮೇಲೂ ಕೋಪ ಕಾರಿದರು. ಅವರಿಬ್ಬರ ನಡುವೆ ಶುರುವಾದ ಮಾತಿನ ಚಕಮಕಿ ಕೈ-ಕೈ ಮಿಲಾಯಿಸುವ ಹಂತ ಸಹ ತಲುಪಿತ್ತು. ಕೂಡಲೇ ಮಧ್ಯೆ ಪ್ರವೇಶಿಸಿದ ಇತರ ಸದಸ್ಯರು, ಆವೇಶದಿಂದ ಕೂಗಾಡುತ್ತಿದ್ದ ಗೌಡ ಹಾಗೂ ರೆಡ್ಡಿಯನ್ನು ಸಮಾಧಾನಪಡಿಸಿದರು.
Published On - 6:13 pm, Tue, 28 July 20