ಮುನಿರತ್ನ ಪ್ರಚಾರಕ್ಕೆ ತಾರಾ​ ಮೆರುಗು: ದರ್ಶನ್, ಅಮೂಲ್ಯರಿಂದ ಭರ್ಜರಿ ಮತ ಬೇಟೆ

ಬೆಂಗಳೂರು: ರಾಜರಾಜೇಶ್ವರಿ ನಗರದ ಅಸೆಂಬ್ಲಿ ಉಪಚುನಾವಣೆಯ ಪ್ರಚಾರಕ್ಕೆ ತಾರಾ​​ ಮೆರುಗು ಸಿಕ್ಕಿದೆ. ಬಿಜೆಪಿ ಅಭ್ಯರ್ಥಿ ಮುನಿರತ್ನ ಪರ ನಟ ದರ್ಶನ್​ ಜೊತೆ ನಟಿ ಅಮೂಲ್ಯ ಸಹ ಇಂದು ಭರ್ಜರಿ ಮತ ಬೇಟೆ ನಡೆಸಿದ್ದಾರೆ. ಅಭಿಮಾನಿಗಳತ್ತ ಕೈ ಬೀಸಿ ಮುನಿರತ್ನ ಪರ ದಚ್ಚು ಹಾಗೂ ಅಮೂಲ್ಯ ಱಲಿಯಲ್ಲಿ ಮತಯಾಚನೆ ಮಾಡಿದರು. ಜೊತೆಗೆ, ಱಲಿಯಲ್ಲಿ ಮಾಜಿ ಸಂಸದೆ ತೇಜಸ್ವಿನಿ ರಮೇಶ್ ಸಹ ಭಾಗಿಯಾದರು. ನಟರಿಬ್ಬರಿಗೂ ಬೌನ್ಸರ್ಸ್ ಹಾಗೂ ಪೊಲೀಸರು ಫುಲ್ ಭದ್ರತೆ ನೀಡಿದರು. ನಟರಿಬ್ಬರನ್ನೂ ನೋಡಲು ರಸ್ತೆಯಲ್ಲಿ ಸಾವಿರಾರು ಅಭಿಮಾನಿಗಳು […]

ಮುನಿರತ್ನ ಪ್ರಚಾರಕ್ಕೆ ತಾರಾ​ ಮೆರುಗು: ದರ್ಶನ್, ಅಮೂಲ್ಯರಿಂದ ಭರ್ಜರಿ ಮತ ಬೇಟೆ
Edited By:

Updated on: Oct 30, 2020 | 12:33 PM

ಬೆಂಗಳೂರು: ರಾಜರಾಜೇಶ್ವರಿ ನಗರದ ಅಸೆಂಬ್ಲಿ ಉಪಚುನಾವಣೆಯ ಪ್ರಚಾರಕ್ಕೆ ತಾರಾ​​ ಮೆರುಗು ಸಿಕ್ಕಿದೆ. ಬಿಜೆಪಿ ಅಭ್ಯರ್ಥಿ ಮುನಿರತ್ನ ಪರ ನಟ ದರ್ಶನ್​ ಜೊತೆ ನಟಿ ಅಮೂಲ್ಯ ಸಹ ಇಂದು ಭರ್ಜರಿ ಮತ ಬೇಟೆ ನಡೆಸಿದ್ದಾರೆ.

ಅಭಿಮಾನಿಗಳತ್ತ ಕೈ ಬೀಸಿ ಮುನಿರತ್ನ ಪರ ದಚ್ಚು ಹಾಗೂ ಅಮೂಲ್ಯ ಱಲಿಯಲ್ಲಿ ಮತಯಾಚನೆ ಮಾಡಿದರು. ಜೊತೆಗೆ, ಱಲಿಯಲ್ಲಿ ಮಾಜಿ ಸಂಸದೆ ತೇಜಸ್ವಿನಿ ರಮೇಶ್ ಸಹ ಭಾಗಿಯಾದರು. ನಟರಿಬ್ಬರಿಗೂ ಬೌನ್ಸರ್ಸ್ ಹಾಗೂ ಪೊಲೀಸರು ಫುಲ್ ಭದ್ರತೆ ನೀಡಿದರು.

ನಟರಿಬ್ಬರನ್ನೂ ನೋಡಲು ರಸ್ತೆಯಲ್ಲಿ ಸಾವಿರಾರು ಅಭಿಮಾನಿಗಳು ಕಿಕ್ಕಿರಿದಿದ್ದಾರೆ. ಱಲಿ ಮಧ್ಯದಲ್ಲಿ ದರ್ಶನ್​ಗೆ ಮಹಿಳೆಯರು ಆರತಿ ಸಹ ಮಾಡಿದರು. ಕ್ಷೇತ್ರದ ಬಿ.ಕೆ. ನಗರದ ಮೂಲಕ ಜೆ.ಪಿ. ಪಾರ್ಕ್ ಕಡೆ ಱಲಿ ಸಾಗಿತು.

Published On - 12:33 pm, Fri, 30 October 20