Apsara Rani: ಬಿಕಿನಿ ತೊಟ್ಟ ಅಪ್ಸರಾ ರಾಣಿ ಬಳಿ ಟವೆಲ್ ಬ್ರ್ಯಾಂಡ್​​​ ಕೇಳಿದ ರಾಮ್​​ ಗೋಪಾಲ್​ ವರ್ಮಾ!

ಅಪ್ಸಾರಾ ರಾಣಿ ಸ್ವಿಮ್ಮಿಂಗ್​ ಫೂಲ್​ ಪಕ್ಕದಲ್ಲಿ ಬಿಕಿನಿ ತೊಟ್ಟು ಕೈನಲ್ಲಿ ಟವೆಲ್​ ಹಿಡಿದು ನಿಂತಿದ್ದರು. ಈ ಫೋಟೋವನ್ನು ರಾಮ್​ ಗೋಪಾಲ್​ ವರ್ಮಾ ಪೋಸ್ಟ್​ ಮಾಡಿದ್ದಾರೆ.

Apsara Rani: ಬಿಕಿನಿ ತೊಟ್ಟ ಅಪ್ಸರಾ ರಾಣಿ ಬಳಿ ಟವೆಲ್ ಬ್ರ್ಯಾಂಡ್​​​ ಕೇಳಿದ ರಾಮ್​​ ಗೋಪಾಲ್​ ವರ್ಮಾ!

Updated on: Feb 26, 2021 | 1:46 PM

ನಿರ್ದೇಶಕ ರಾಮ್​ ಗೋಪಾಲ್​ ವರ್ಮಾ ಸಾಮಾಜಿಕ ಜಾಲತಾಣದಲ್ಲಿ ತುಂಬಾನೇ ಆ್ಯಕ್ಟಿವ್​ ಆಗಿದ್ದಾರೆ. ಒಂದಿಲ್ಲೊಂದು ಪೋಸ್ಟ್​ ಹಾಕುತ್ತಾ ಅಭಿಮಾನಿಗಳನ್ನು ಖುಷಿಪಡಿಸುತ್ತಿರುತ್ತಾರೆ. ಇನ್ನು ಅನೇಕ ಹೀರೋಯಿನ್​ಗಳ ಫೋಟೋಗಳನ್ನು ಹಾಕಿ, ಅವರ ಬಗ್ಗೆ ಏನನ್ನಿಸುತ್ತದೆ ಎನ್ನುವ ಬಗ್ಗೆ ಬರೆದುಕೊಂಡ ಉದಾಹರಣೆ ಕೂಡ ಇದೆ. ಈಗ ಟಾಲಿವುಡ್​ನ ಹಾಟೆಸ್ಟ್​​ ನಟಿ ಎನ್ನುವ ಖ್ಯಾತಿಗೆ ಪಾತ್ರರಾಗಿರುವ ಅಪ್ಸರಾ ರಾಣಿ ಬಳಿ ರಾಮ್​​ ಗೋಪಾಲ್​ ವರ್ಮಾ ಟವೆಲ್​ ಕೇಳಿದ್ದಾರೆ!

ಅಪ್ಸಾರಾ ರಾಣಿ ಸ್ವಿಮ್ಮಿಂಗ್​ ಫೂಲ್​ ಪಕ್ಕದಲ್ಲಿ ಬಿಕಿನಿ ತೊಟ್ಟು ಕೈನಲ್ಲಿ ಟವೆಲ್​ ಹಿಡಿದು ನಿಂತಿದ್ದರು. ಈ ಫೋಟೋವನ್ನು ರಾಮ್​ ಗೋಪಾಲ್​ ವರ್ಮಾ ಪೋಸ್ಟ್​ ಮಾಡಿದ್ದಾರೆ. ಅಷ್ಟೇ ಅಲ್ಲ, ನನಗೆ ಟವೆಲ್​ ಇಷ್ಟವಾಯಿತು. ಅದನ್ನು ಎಲ್ಲಿ ಖರೀದಿಸಿದ್ದೀರಿ? ಬ್ರ್ಯಾಂಡ್​ ಯಾವುದು ಎಂದು ಪ್ರಶ್ನೆ ಮಾಡಿದ್ದಾರೆ.

ರಾಮ್​ ಗೋಪಾಲ್​ ಪ್ರಶ್ನೆಗೆ ಉತ್ತರಿಸಿರುವ ಅಪ್ಸರಾ, ನೀವು ಟವೆಲ್​ಅನ್ನು ಗಮನಿಸಿದ್ದಕ್ಕೆ ಸಂತೋಷವಾಯಿತು ಎಂದಿದ್ದಾರೆ. ಇದಕ್ಕೆ ರಾಮ್​ ಗೋಪಾಲ್​ ವರ್ಮಾ ಮರು ಉತ್ತರ ನೀಡಿದ್ದಾರೆ. ನಾನು ಟವೆಲ್ ಅನ್ನು ಮಾತ್ರ ನೋಡುತ್ತಿದ್ದೇನೆ ಎಂದು ದೇವರ ಮೇಲೆ ಪ್ರತಿಜ್ಞೆ ಮಾಡುತ್ತೇನೆ.. ಚಿತ್ರದಲ್ಲಿ ನೋಡೋಕೆ ಬೇರೆ ಏನಾದರೂ ಇದೆಯೇ? ಎಂದು ನಕ್ಕಿದ್ದಾರೆ.

ಇಷ್ಟಕ್ಕೇ ಮಾತು ನಿಂತಿಲ್ಲ. ನಾನು ನಿಮ್ಮನ್ನು ನಂಬುತ್ತೇನೆ. ಆದರೆ, ನನಗೆ ಈಗ ಅನುಮಾನ ಪ್ರಾರಂಭವಾಗಿದೆ ಎಂದು ಅಪ್ಸರಾ ಹೇಳಿದ್ದಾರೆ. ನಂತರ ಅಪ್ಸರಾ ಸ್ವಿಮ್ಮಿಂಗ್​ ಫೂಲ್​ನಲ್ಲಿರು ವಿಡಿಯೋವನ್ನು ರಾಮ್​ ಗೋಪಾಲ್​ ವರ್ಮಾ ಹಂಚಿಕೊಂಡಿದ್ದಾರೆ.

 ಇದನ್ನೂ ಓದಿ: ನಟಿಯರ ಬಿಕಿನಿ ಫೋಟೋ.. ಜನರನ್ನು ಮಾಲ್ಡೀವ್ಸ್​ಗೆ ಕರೆಸಿಕೊಳ್ಳುವ ಹೊಸ ಪ್ಲಾನ್?

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us