ಕಾಲುವೆ ಬಳಿ ಪೋಲೀಸ್ ಮೃತದೇಹ ಪತ್ತೆ; 48 ಗಂಟೆಗಳಲ್ಲಿ ಪ್ರಕರಣ ಭೇದಿಸಿದ ಪಂಜಾಬ್ ಪೊಲೀಸ್
ಪ್ರಕರಣದಲ್ಲಿ ಆಟೋರಿಕ್ಷಾ ಚಾಲಕನನ್ನು ಬಂಧಿಸಲಾಗಿದೆ. ಸಿಂಗ್ ಅವರನ್ನು ಮನೆಗೆ ಡ್ರಾಪ್ ಮಾಡುವುದರ ಬಗ್ಗೆ ಜಗಳ ನಡೆದಿದ್ದು ಆಟೋ ಚಾಲಕ ಪೊಲೀಸ್ ಅಧಿಕಾರಿಯ ಮೇಲೆ ಗುಂಡು ಹಾರಿಸಿದ್ದಾನೆ. ಪೊಲೀಸ್ ಅಧಿಕಾರಿ ಜುಗಲ್ ಕಿಶೋರ್ ಅವರು ಕರ್ತವ್ಯ ಮುಗಿಸಿ ಮನೆಗೆ ಮರಳುತ್ತಿದ್ದಾಗ ಕಾಲುವೆ ಬಳಿ ಶವವನ್ನು ನೋಡಿದ್ದು, ತನ್ನ ಸಹೋದ್ಯೋಗಿಗಳಿಗೆ ಕರೆ ಮಾಡಿ ಶೀಘ್ರದಲ್ಲೇ ತನಿಖೆ ಆರಂಭಿಸಿದ್ದರು.
ದೆಹಲಿ ಜನವರಿ 04: ಅರ್ಜುನ ಪ್ರಶಸ್ತಿ ಪುರಸ್ಕೃತ (Arjuna awardee) ಪೊಲೀಸ್ ಅಧಿಕಾರಿಯೊಬ್ಬರ ಕೊಲೆ ಪ್ರಕರಣವನ್ನು ಜಲಂಧರ್ ಪೊಲೀಸರು (Jalandhar Police) ಸುಧಾರಿತ ತಾಂತ್ರಿಕ ತನಿಖಾ ವಿಧಾನದ ಮೂಲಕ 48 ಗಂಟೆಗಳಲ್ಲಿ ಭೇದಿಸಿದ್ದಾರೆ. ಪೊಲೀಸ್ ಪಡೆಗೆ ಸೇರುವ ಮೊದಲು ವೇಟ್‌ಲಿಫ್ಟರ್ ಆಗಿದ್ದ ಪೊಲೀಸ್ ಅಧಿಕಾರಿ ದಲ್ಬೀರ್ ಸಿಂಗ್ ಡಿಯೋಲ್ (Dalbir Singh Deol) ಅವರು ಬುಧವಾರ ನಿಗೂಢ ಸ್ಥಿತಿಯಲ್ಲಿ ಜಲಂಧರ್‌ನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.
ಪ್ರಕರಣದಲ್ಲಿ ಆಟೋರಿಕ್ಷಾ ಚಾಲಕನನ್ನು ಬಂಧಿಸಲಾಗಿದೆ. ಸಿಂಗ್ ಅವರನ್ನು ಮನೆಗೆ ಡ್ರಾಪ್ ಮಾಡುವುದರ ಬಗ್ಗೆ ಜಗಳ ನಡೆದಿದ್ದು ಆಟೋ ಚಾಲಕ ಪೊಲೀಸ್ ಅಧಿಕಾರಿಯ ಮೇಲೆ ಗುಂಡು ಹಾರಿಸಿದ್ದಾನೆ. ಪೊಲೀಸ್ ಅಧಿಕಾರಿ ಜುಗಲ್ ಕಿಶೋರ್ ಅವರು ಕರ್ತವ್ಯ ಮುಗಿಸಿ ಮನೆಗೆ ಮರಳುತ್ತಿದ್ದಾಗ ಕಾಲುವೆ ಬಳಿ ಶವವನ್ನು ನೋಡಿದ್ದು, ತನ್ನ ಸಹೋದ್ಯೋಗಿಗಳಿಗೆ ಕರೆ ಮಾಡಿ ಶೀಘ್ರದಲ್ಲೇ ತನಿಖೆ ಆರಂಭಿಸಿದರು.
ಪೊಲೀಸರು ಹಲವಾರು ಸಿಸಿಟಿವಿ ಕ್ಯಾಮೆರಾಗಳನ್ನು ನೋಡಿದ್ದು, ಅವುಗಳಲ್ಲಿ ಒಂದರಲ್ಲಿ ಡಿಯೋಲ್ ಆಟೋರಿಕ್ಷಾವನ್ನು ಹತ್ತುತ್ತಿರುವುದು ಕಂಡು ಬಂದಿದೆ.ಅವರು ವಾಹನದ ಸಂಖ್ಯೆಯನ್ನು ನಮೂದಿಸಿದ್ದು ಈ ವಾಹನ ಹೋಗಬಹುದಾದ ಸಂಭವನೀಯ ಮಾರ್ಗಗಳಲ್ಲಿ ಸಿಸಿಟಿವಿಗಳನ್ನು ಸೂಕ್ಷ್ಮವಾಗಿ ನೋಡುತ್ತಾ ವಾಹನವನ್ನು ಪತ್ತೆಹಚ್ಚಿದರು.
ಹತ್ತಿರದ ಟವರ್‌ನಿಂದ ಕಾಲುವೆ ಪ್ರದೇಶದಲ್ಲಿ ಸಕ್ರಿಯವಾಗಿರುವ ಮೊಬೈಲ್ ಸಿಗ್ನಲ್‌ಗಳನ್ನು ಪೊಲೀಸರು ಪರಿಶೀಲಿಸಿದ್ದಾರೆ. ವಿಜಯ್ ಕುಮಾರ್ ಎಂದು ಗುರುತಿಸಲಾದ ಆರೋಪಿಗಳು ಡಿಯೋಲ್ ಅವರ ಸರ್ವೀಸ್ ಪಿಸ್ತೂಲ್ ನಿಂದ ಗುಂಡು ಹಾರಿಸಿದ್ದಾರೆ. ಮೃತದೇಹದ ಬಳಿ ಮಾರಕಾಸ್ತ್ರ ಪತ್ತೆಯಾಗಿದೆ.
ಇದನ್ನೂ ಓದಿ: ಗುರ್ಗಾಂವ್ ರೂಪದರ್ಶಿಯ ದಿವ್ಯಾ ಪಹುಜಾ ಕೊಲೆ; ಮೃತದೇಹಕ್ಕಾಗಿ ಪೊಲೀಸ್ ಶೋಧ
ದಲ್ಬೀರ್ ಸಿಂಗ್ ಡಿಯೋಲ್ ಅವರ ದೇಹವನ್ನು ನಾವು ಅನುಮಾನಾಸ್ಪದ ರೀತಿಯಲ್ಲಿ ಕಂಡುಕೊಂಡಿದ್ದೇವೆ. ಆತನ ಶವ ಪತ್ತೆಯಾದ ಸ್ಥಳ ಜಲಂಧರ್ ನಿಂದ 6-7 ಕಿ.ಮೀ. ಈ ಪ್ರಕರಣದಲ್ಲಿ ನಾವು ಆಟೋರಿಕ್ಷಾ ಚಾಲಕ ವಿಜಯ್ ಕುಮಾರ್ ಅವರನ್ನು ಬಂಧಿಸಿದ್ದೇವೆ ಎಂದು ಜಲಂಧರ್ ಪೊಲೀಸ್ ಮುಖ್ಯಸ್ಥ ಸ್ವಪನ್ ಶರ್ಮಾ ತಿಳಿಸಿದ್ದಾರೆ.
ಪೊಲೀಸ್ ಅಧಿಕಾರಿಯನ್ನು ತನ್ನ ಗ್ರಾಮಕ್ಕೆ ಬಿಡಲು ಚಾಲಕ ನಿರಾಕರಿಸಿದ್ದು ಜಗಳಕ್ಕೆ ಕಾರಣವಾಯಿತು. ವಾಗ್ವಾದದ ನಡುವೆ ವಿಜಯ್ ಡಿಯೋಲ್‌ನಿಂದ ಸರ್ವೀಸ್ ಪಿಸ್ತೂಲ್ ಕಸಿದುಕೊಂಡು ಸಿಂಗ್ ತಲೆಗೆ ಗುಂಡು ಹಾರಿಸಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.
ಮತ್ತಷ್ಟು ಅಪರಾಧ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ