ಗದಗ: ದೇಶದ ಗಡಿ ಕಾಯೋ ಯೋಧನೊಬ್ಬ ಮರಳಿ ತನ್ನ ಊರಿಗೆ ಹಿಂದಿರುಗಿದ ನಂತರ ತನ್ನ ಜಮೀನಿನಲ್ಲೇ ಸ್ವಯಂ ಕ್ವಾರಂಟೈನ್ ಆಗಿರೋ ಪ್ರಸಂಗ ಜಿಲ್ಲೆಯ ಅಂತೂರ ಬೆಂತೂರ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಹೊರವಲಯದಲ್ಲಿರುವ ತನ್ನ ಜಮೀನಿನಲ್ಲಿ ಯೋಧ ಪ್ರಕಾಶ್ ಹೈಗರ್ ಸ್ವಯಂ ಕ್ವಾರಂಟೈನ್ ಮಾಡಿಕೊಂಡಿದ್ದಾರೆ.
ಈ ಮಧ್ಯೆ ಗ್ರಾಮದೆಲ್ಲೆಡೆ ಸೋಂಕಿನ ಭೀತಿ ಹರಡಿರುವ ಕಾರಣ ಯಾರಿಗೂ ತೊಂದರೆ ಕೊಡಲು ಬಯಸದ ಯೋಧ ತನ್ನ ಜಮೀನಿನಲ್ಲಿ ಟ್ರ್ಯಾಕ್ಟರ್ ಮೇಲೆ ಟೆಂಟ್ ನಿರ್ಮಿಸಿಕೊಂಡು ಕ್ವಾರಂಟೈನ್ಗೆ ಒಳಗಾಗಿದ್ದಾರೆ.
ಸರ್ಕಾರದ ಮಾರ್ಗಸೂಚಿಯಂತೆ ಯೋಧ ಕ್ವಾರಂಟೈನ್
ಸರಕಾರದ ಮಾರ್ಗಸೂಚಿಯಂತೆ ತಮ್ಮ ಕ್ವಾರಂಟೈನ್ ಅವಧಿ ಪೂರೈಸಲು ಮುಂದಾಗಿದ್ದಾರೆ. ಸದ್ಯಕ್ಕೆ ಆರೋಗ್ಯ ಇಲಾಖೆಯ ಸಿಬ್ಬಂದಿ ಯೋಧನ ಪರೀಕ್ಷೆ ನಡೆಸಿದ್ದಾರೆ. ಆದರೆ ಯೋಧನಿಗೆ ಸೋಂಕಿನ ಯಾವುದೇ ಲಕ್ಷಣಗಳು ಕಂಡು ಬಂದಿಲ್ಲ.
ಆದರೂ ನನ್ನಿಂದ ಗ್ರಾಮಸ್ಥರಿಗೆ ಆತಂಕ ಉಂಟಾಗೋದು ಬೇಡ ಅಂತಾ ಖುದ್ದು ತಾವೇ ದಿನ ನಿತ್ಯ ಮನೆಯಿಂದ ಊಟವನ್ನ ತರಿಸಿಕೊಂಡು ಹೊಲದಲ್ಲಿ ಕಾಲ ಕಳೆಯುತ್ತಿದ್ದಾರೆ. ಯೋಧನ ನಿರ್ಧಾರಕ್ಕೆ ಗ್ರಾಮಸ್ಥರಿಂದ ಭಾರೀ ಶಹಬ್ಬಾಸ್ಗಿರಿ ಸಿಕ್ಕಿದೆ.
Published On - 1:32 pm, Thu, 9 July 20