ಅಂತರ್ಜಾತಿ ವಿವಾಹಕ್ಕೆ ಒಪ್ಪದ ಪೋಷಕರು, ಕತ್ತು ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಪ್ರೇಮಿಗಳು
ಮೈಸೂರು: ಕತ್ತು ಕೊಯ್ದುಕೊಂಡು ಪ್ರೇಮಿಗಳು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನಂಜನಗೂಡು ತಾಲೂಕಿನ ದುಗ್ಗಹಳ್ಳಿ ಗ್ರಾಮದಲ್ಲಿ ನಡೆದಿದೆ. ಕಾವ್ಯ, ರವಿ ಆತ್ಮಹತ್ಯೆಗೆ ಯತ್ನಿಸಿದ ಪ್ರೇಮಿಗಳು. ದುಗ್ಗಾಹಳ್ಳಿ ಗ್ರಾಮದ ಕಾವ್ಯ ಮತ್ತು ಕುರಿಹುಂಡಿ ಗ್ರಾಮದ ರವಿ ಇಬ್ಬರು ಪರಸ್ಪರ ಪ್ರೀತಿಸುತ್ತಿದ್ರು. ಆದ್ರೆ ಇವರ ಪ್ರೀತಿಗೆ ಜಾತಿ ಅಡ್ಡ ಬಂದಿತ್ತು. ಹುಡುಗ ಹುಡುಗಿ ಇಬ್ಬರು ಬೇರೆ ಬೇರೆ ಜಾತಿಯಾಗಿದ್ದರಿಂದ ಅಂತರ್ ಜಾತಿ ವಿವಾಹಕ್ಕೆ ಪೋಷಕರು ಒಪ್ಪಲಿಲ್ಲ. ಇಬ್ಬರ ಪ್ರೀತಿಗೆ ಒಪ್ಪಿಗೆ ಸಿಗದ ಕಾರಣ ಮನನೊಂದ ಪ್ರೀಮಿಗಳು, ಸಾವಿನಲ್ಲಾದರೂ ಇಬ್ಬರೂ ಒಂದಾಗುವ ಎಂದು […]

ಮೈಸೂರು: ಕತ್ತು ಕೊಯ್ದುಕೊಂಡು ಪ್ರೇಮಿಗಳು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನಂಜನಗೂಡು ತಾಲೂಕಿನ ದುಗ್ಗಹಳ್ಳಿ ಗ್ರಾಮದಲ್ಲಿ ನಡೆದಿದೆ. ಕಾವ್ಯ, ರವಿ ಆತ್ಮಹತ್ಯೆಗೆ ಯತ್ನಿಸಿದ ಪ್ರೇಮಿಗಳು.
ದುಗ್ಗಾಹಳ್ಳಿ ಗ್ರಾಮದ ಕಾವ್ಯ ಮತ್ತು ಕುರಿಹುಂಡಿ ಗ್ರಾಮದ ರವಿ ಇಬ್ಬರು ಪರಸ್ಪರ ಪ್ರೀತಿಸುತ್ತಿದ್ರು. ಆದ್ರೆ ಇವರ ಪ್ರೀತಿಗೆ ಜಾತಿ ಅಡ್ಡ ಬಂದಿತ್ತು. ಹುಡುಗ ಹುಡುಗಿ ಇಬ್ಬರು ಬೇರೆ ಬೇರೆ ಜಾತಿಯಾಗಿದ್ದರಿಂದ ಅಂತರ್ ಜಾತಿ ವಿವಾಹಕ್ಕೆ ಪೋಷಕರು ಒಪ್ಪಲಿಲ್ಲ. ಇಬ್ಬರ ಪ್ರೀತಿಗೆ ಒಪ್ಪಿಗೆ ಸಿಗದ ಕಾರಣ ಮನನೊಂದ ಪ್ರೀಮಿಗಳು, ಸಾವಿನಲ್ಲಾದರೂ ಇಬ್ಬರೂ ಒಂದಾಗುವ ಎಂದು ಸಾಯಲು ನಿರ್ಧರಿಸಿದ್ರು.
ಪ್ರಿಯತಮ ರವಿ ಯಾರೂ ಇಲ್ಲದ ವೇಳೆ, ಇಂದು ಬೆಳಗ್ಗೆ ದುಗ್ಗಹಳ್ಳಿ ಗ್ರಾಮದಲ್ಲಿ ಪ್ರಿಯತಮೆ ಕಾವ್ಯ ಮನೆಗೆ ಹೋಗಿ ಕತ್ತು ಕೊಯ್ದುಕೊಂಡು ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದಾನೆ. ಕಾವ್ಯ ಸಹ ಇದೇ ಯತ್ನ ನಡೆಸಿದ್ದಾರೆ. ತೀವ್ರ ರಕ್ತಸ್ರಾವದಿಂದ ಒದ್ದಾಡುತ್ತಿದ್ದ ಪ್ರೇಮಿಗಳನ್ನು ಹುಲ್ಲಹಳ್ಳಿ ಪಿಎಸ್ಐ ಸುರೇಂದ್ರ ಮತ್ತು ಸಿಬ್ಬಂದಿ ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆ್ಯಂಬುಲೆನ್ಸ್ ಮೂಲಕ ಮೈಸೂರಿನ ಆಸ್ಪತ್ರೆಗೆ ರವಾನಿಸಲಾಗಿದೆ. ಹುಲ್ಲಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

Published On - 1:07 pm, Thu, 9 July 20




