ಕೊರೊನಾ ಭಯ ಇಲ್ಲವೇ ಇಲ್ಲ, ನಿಶಾಚರಿ ಬಾವಲಿಗಳೇ ಶ್ರೀನಿವಾಸಪುರದ ಆಕರ್ಷಣೆ
ಕೋಲಾರ: ಕೊರೊನಾ ಬಂದಾಗಿನಿಂದ ಬಾವಲಿಗಳನ್ನ ಕಂಡ್ರೆ ಜನರಲ್ಲಿ ಭಯ ಶುರವಾಗಿದೆ. ಆದ್ರೆ ಕೋಲಾರ ಜಿಲ್ಲೆ ಶ್ರೀನಿವಾಸಪುರದ ಜನಕ್ಕೆ ಯಾವುದೇ ಭಯವಿಲ್ಲ. ಇಲ್ಲಿ ಬಾವಲಿಗಳು ಮತ್ತು ಜನರ ನಡುವೆ ಒಂದು ರೀತಿಯ ಸೌಹಾರ್ಧ ಸಂಬಂಧವಿದೆ. ಅಷ್ಟೇ ಅಲ್ಲ ಈಗ ಈ ನಿಶಾಚರಿ ಪಕ್ಷಿಗಳಿಂದಾಗಿ ಶ್ರೀನೀವಾಸಪುರ ಜನರನ್ನ ಆಕರ್ಷಿಸುತ್ತದೆ. ಪೊಲೀಸ್ ಠಾಣೆ ಬಳಿ ಜೋತು ಬಿದ್ದ ಬಾವಲಿಗಳು ಆಕಾಶದಲ್ಲಿ ಸ್ವಚಂದವಾಗಿ ಹಾರಾಡುವ ಪಕ್ಷಿಗಳು, ಹಗಲಲ್ಲೇ ಗಾಬರಿಯಿಂದ ಆಕಾಶದೆತ್ತರಕ್ಕೆ ಹಾಕಿ ಗಿರಿಕಿ ಹೊಡೆಯುತ್ತಾ ಆಕಾಶದಲ್ಲೇ ಚಿತ್ತಾರ ಬಿಡಿಸುವ ಪಕ್ಷಿಗಳು ಇದೆಲ್ಲಾ ಕಂಡು […]
ಕೋಲಾರ: ಕೊರೊನಾ ಬಂದಾಗಿನಿಂದ ಬಾವಲಿಗಳನ್ನ ಕಂಡ್ರೆ ಜನರಲ್ಲಿ ಭಯ ಶುರವಾಗಿದೆ. ಆದ್ರೆ ಕೋಲಾರ ಜಿಲ್ಲೆ ಶ್ರೀನಿವಾಸಪುರದ ಜನಕ್ಕೆ ಯಾವುದೇ ಭಯವಿಲ್ಲ. ಇಲ್ಲಿ ಬಾವಲಿಗಳು ಮತ್ತು ಜನರ ನಡುವೆ ಒಂದು ರೀತಿಯ ಸೌಹಾರ್ಧ ಸಂಬಂಧವಿದೆ. ಅಷ್ಟೇ ಅಲ್ಲ ಈಗ ಈ ನಿಶಾಚರಿ ಪಕ್ಷಿಗಳಿಂದಾಗಿ ಶ್ರೀನೀವಾಸಪುರ ಜನರನ್ನ ಆಕರ್ಷಿಸುತ್ತದೆ.
ಪೊಲೀಸ್ ಠಾಣೆ ಬಳಿ ಜೋತು ಬಿದ್ದ ಬಾವಲಿಗಳು ಆಕಾಶದಲ್ಲಿ ಸ್ವಚಂದವಾಗಿ ಹಾರಾಡುವ ಪಕ್ಷಿಗಳು, ಹಗಲಲ್ಲೇ ಗಾಬರಿಯಿಂದ ಆಕಾಶದೆತ್ತರಕ್ಕೆ ಹಾಕಿ ಗಿರಿಕಿ ಹೊಡೆಯುತ್ತಾ ಆಕಾಶದಲ್ಲೇ ಚಿತ್ತಾರ ಬಿಡಿಸುವ ಪಕ್ಷಿಗಳು ಇದೆಲ್ಲಾ ಕಂಡು ಬಂದಿದ್ದು ಕೋಲಾರ ಜಿಲ್ಲೆ ಶ್ರೀನಿವಾಸಪುರ ಪಟ್ಟಣದಲ್ಲಿ. ಶ್ರೀನಿವಾಸಪುರ ಪಟ್ಟಣದ ಹೃದಯ ಭಾಗದಲ್ಲಿರುವ ಎರಡು ಬೃಹತ್ ಮರಗಳು ಸಾವಿರಾರು ಬಾವಲಿಗಳಿಗೆ ಸುಮಾರು 15-20 ವರ್ಷಗಳಿಂದ ಆಶ್ರಯ ನೀಡಿವೆ.
ಪೊಲೀಸ್ ಹಾಗೂ ತಾಲೂಕು ಕಚೇರಿ ಆವರಣವೇ ಆಶ್ರಯ ಮೊದಲಿಗೆ ಕಾಡಿನಲ್ಲಿ ನೆಲೆ ಕಂಡುಕೊಂಡಿದ್ದ ಈ ಬಾವಲಿಗಳು ಕಾಡು ನಾಶವಾದಂತೆ ನಾಡಿಗೆ ಬಂದು ತಮ್ಮ ನೆಲೆ ಕಂಡುಕೊಂಡಿವೆ. ಅದರಲ್ಲೂ ತಾಲೂಕು ಕಚೇರಿ, ಪೊಲೀಸ್ ಠಾಣೆ, ಹಾಗೂ ಬಸ್ ನಿಲ್ದಾಣದ ಬಳಿ ಇರುವ ಮರಗಳಲ್ಲಿ ಸಾವಿರಾರು ಬಾವಲಿಗಳು ನೆಲೆ ಕಂಡುಕೊಂಡಿವೆ. ಅದ್ರಲ್ಲೂ ಹತ್ತಾರು ವರ್ಷಗಳಿಂದ ಪೊಲೀಸ್ ಹಾಗೂ ತಾಲೂಕು ಕಚೇರಿ ಬಳಿಯ ಮರವನ್ನೇ ತಮ್ಮ ಮನೆಗಳನ್ನಾಗಿ ಮಾಡಿಕೊಂಡಿವೆ.
ಈ ಬಾವಲಿಗಳಿಂದ ಪೊಲೀಸ್ ಠಾಣೆ ಅಥವಾ ಸುತ್ತ ಮುತ್ತಲ ಸರ್ಕಾರಿ ಕಚೇರಿಗಳಿಗೆ ಗಲೀಜು ಅಥವಾ ಶಬ್ದದಿಂದ ತೊಂದರೆಯಾದರೂ ಅವರಾರು ಬಾವಲಿಗಳಿಗೆ ತೊಂದರೆ ಮಾಡಿಲ್ಲ. ಹಾಗಾಗಿ ಬಾವಲಿ ಹಾಗೂ ಪೊಲೀಸ್ ಸೇರಿದಂತೆ ಇಲ್ಲಿನ ಸರ್ಕಾರಿ ಕಚೇರಿ ಸಿಬ್ಬಂದಿಗಳಿಗೆ ಒಂದು ರೀತಿಯ ಅವಿನಾಭಾವ ಸಂಬಂಧ ಬೆಸೆದುಕೊಂಡಿದೆ.
ಬಾವಲಿಗಳಿಗೆ ಬೇಟೆಗಾರರ ಕಾಟ..? ಇನ್ನು ಮೊದಲೆಲ್ಲ ಈ ಬಾವಲಿಗಳಿಗೆ ಬೇಟೆಗಾರರ ಹಾವಳಿ ಹೆಚ್ಚಾಗಿತ್ತು. ಕಾಡಿನಲ್ಲಿ ಬಾವಲಿಗಳನ್ನು ಬೇಟೆಯಾಡಿ ತಿನ್ನಲು ಇಲ್ಲಾ ಔಷದಿಗಳಿಗೆ ಬಳಕೆ ಮಾಡುತ್ತಿದ್ರು. ಆದ್ರೆ ಬಾವಲಿಗಳು ಇತ್ತೀಚೆಗೆ ನಾಡಿನತ್ತ ತಮ್ಮ ನೆಲೆ ಕಂಡುಕೊಂಡು ಅದರಲ್ಲೂ ಪೊಲೀಸ್ ಠಾಣೆಯಂತಹ ಜಾಗದಲ್ಲಿ ನೆಲೆ ಕಂಡುಕೊಂಡಿರುವ ಹಿನ್ನೆಲೆಯಲ್ಲಿ ಬಾವಲಿಗಳಿಗೆ ಇಲ್ಲಿ ಪೊಲೀಸರ ಭದ್ರತೆ ಸಿಕ್ಕಂತಾಗಿದೆ.
ಶಬ್ದ, ಗಲಾಟೆಗೆ ಅಂಜುವ ಬಾವಲಿಗಳು..! ನಗರದ ಮದ್ಯೆ ಬಾವಲಿಗಳ ಕಲರವ ಕೂಡಾ ಜನರನ್ನ ಆಕರ್ಷಣೆ ಮಾಡುತ್ತಿದೆ. ಜೊತೆಗೆ ಆಗಾಗ ಈ ಬಾವಲಿಗಳಿಗೂ ತೊಂದರೆ ಯಾಗುವ ಸಾಧ್ಯತೆ ಇದೆ. ನಗರದ ಹೃದಯ ಬಾಗದಲ್ಲೇ ಇರುವ ಕಾರಣ ನಗರದಲ್ಲಿ ಶಬ್ದ, ಪಟಾಕಿ ಸಿಡಿಸಿದಾಗ ಒಮ್ಮೊಮ್ಮೆ ಬಾವಲಿಗಳು ದಿಕ್ಕೆಟ್ಟು ಓಡುವ, ಗಾಬರಿಯಾಗುವ ಸಾಧ್ಯತೆಗಳು ಹೆಚ್ಚಾಗಿವೆ. ಹಾಗಾಗಿ ಇಂಥ ಬಾವಲಿಗಳನ್ನ ಸಂಬಂದ ಪಟ್ಟ ಇಲಾಖೆ ಸೂಕ್ತ ಸ್ಥಳಕ್ಕೆ ಸ್ಥಳಾಂತರ ಮಾಡಿದ್ರೆ ಒಳ್ಳೆದು ಅನ್ನೋದು ಕೆಲವರ ಅಭಿಪ್ರಾಯ. -ರಾಜೇಂದ್ರ ಸಿಂಹ
Published On - 12:23 pm, Thu, 9 July 20