Baldwin School ನೀಡಿದ ಕೊರೊನಾಘಾತ, ಬೀದಿಗೆ ಬಿದ್ದ 50 ಶಿಕ್ಷಕರು-ಸಿಬ್ಬಂದಿ
ಬೆಂಗಳೂರು: ಕೊರೊನಾದಿಂದಾಗಿ ಎಲ್ಲೆಡೆ ಜನಜೀವನವೇ ಅಸ್ಯವ್ಯಸ್ತವಾಗಿದೆ. ಅಂಥದ್ರಲ್ಲಿ ಬೆಂಗಳೂರಿನ ಬಾಲ್ಡ್‌ವಿನ್ ಶಾಲೆಯ ಆಡಳಿತ ಮಂಡಳಿ ಕೊರೊನಾಗಿಂತಲೂ ಭಯಾನಕವಾದ ನಿರ್ಧಾರ ತೆಗೆದುಕೊಂಡಿದೆ. ಶಾಲೆಯ 50 ಸಿಬ್ಬಂದಿಯನ್ನ ಏಕಾಏಕಿ ವಜಾ ಮಾಡಿದೆ. ಕೊರೊನಾ ಬಂದ್ರೆ ಕೆಲ ದಿನಗಳಲ್ಲಿಯೇ ಗುಣಮುಖರಾಗಬಹುದು. ಆದ್ರೆ ಬಾಲ್ಡ್‌ವಿನ್ ಶಾಲಾ ಮಂಡಳಿ ಈ ಶಿಕ್ಷಕರ ಭವಿಷ್ಯಕ್ಕೇನೆ ಕೊಡಲಿ ಏಟು ನೀಡಿದೆ. ಈ ಮೂಲಕ ಶಿಕ್ಷಕರ ಪಾಲಿಗೆ ಕೊರೊನಾಕ್ಕಿಂತಲೂ ಭಯಾನಕವಾಗಿದೆ. ಈ ಅನಿರೀಕ್ಷಿತ ಬೆಳವಣಿಗೆಯಿಂದ ಶಾಲಾ ಸಿಬ್ಬಂದಿ ಕಂಗಾಲಾಗಿದ್ದಾರೆ. ಹೀಗೆ ಹೇಳದೇ ಕೇಳದೆ ಏಕಾಏಕಿ ತಮ್ಮನ್ನ ವಜಾ ಮಾಡಿರುವುದಕ್ಕೆ […]
ಬೆಂಗಳೂರು: ಕೊರೊನಾದಿಂದಾಗಿ ಎಲ್ಲೆಡೆ ಜನಜೀವನವೇ ಅಸ್ಯವ್ಯಸ್ತವಾಗಿದೆ. ಅಂಥದ್ರಲ್ಲಿ ಬೆಂಗಳೂರಿನ ಬಾಲ್ಡ್‌ವಿನ್ ಶಾಲೆಯ ಆಡಳಿತ ಮಂಡಳಿ ಕೊರೊನಾಗಿಂತಲೂ ಭಯಾನಕವಾದ ನಿರ್ಧಾರ ತೆಗೆದುಕೊಂಡಿದೆ. ಶಾಲೆಯ 50 ಸಿಬ್ಬಂದಿಯನ್ನ ಏಕಾಏಕಿ ವಜಾ ಮಾಡಿದೆ.
ಕೊರೊನಾ ಬಂದ್ರೆ ಕೆಲ ದಿನಗಳಲ್ಲಿಯೇ ಗುಣಮುಖರಾಗಬಹುದು. ಆದ್ರೆ ಬಾಲ್ಡ್‌ವಿನ್ ಶಾಲಾ ಮಂಡಳಿ ಈ ಶಿಕ್ಷಕರ ಭವಿಷ್ಯಕ್ಕೇನೆ ಕೊಡಲಿ ಏಟು ನೀಡಿದೆ. ಈ ಮೂಲಕ ಶಿಕ್ಷಕರ ಪಾಲಿಗೆ ಕೊರೊನಾಕ್ಕಿಂತಲೂ ಭಯಾನಕವಾಗಿದೆ.
ಈ ಅನಿರೀಕ್ಷಿತ ಬೆಳವಣಿಗೆಯಿಂದ ಶಾಲಾ ಸಿಬ್ಬಂದಿ ಕಂಗಾಲಾಗಿದ್ದಾರೆ. ಹೀಗೆ ಹೇಳದೇ ಕೇಳದೆ ಏಕಾಏಕಿ ತಮ್ಮನ್ನ ವಜಾ ಮಾಡಿರುವುದಕ್ಕೆ ಶಾಲಾ ಆಡಳಿತ ವಿರುದ್ಧ ಗರಂ ಆಗಿದ್ದಾರೆ. ಈ ಸಬಂಧ ನ್ಯಾಯ ಬೇಕು ಎಂದು ಶಾಲಾ ಆವರಣದಲ್ಲಿ ಪ್ರತಿಭಟನೆ ಮಾಡುತ್ತಿದ್ದಾರೆ.
Published On - 12:48 pm, Thu, 9 July 20