PM Cares Fund ಮಾಹಿತಿ ಬೇಕಾದ್ರೆ ನನ್ನೇ ಕೇಳಿ ಸಾಕು: ಸಿದ್ದರಾಮಯ್ಯಗೆ ಪ್ರತಾಪ್ ತಿರುಗೇಟು
ಮೈಸೂರು: ಮಾಜಿ ಸಿಎಂ ಸಿದ್ದರಾಮಯ್ಯರ ವಿರುದ್ಧ ಸಂಸದ ಪ್ರತಾಪ್ ಸಿಂಹ ಮತ್ತೊಮ್ಮೆ ಕಿಡಿಕಾರಿದ್ದಾರೆ. ಸಿದ್ದರಾಮಯ್ಯನವರೇ ನಿಮ್ಮ ಮಟ್ಟವನ್ನ ಪ್ರಧಾನಿಗೆ ಹೋಲಿಕೆ ಮಾಡಿಕೊಳ್ಳಬೇಡಿ. ಪ್ರತಿ ಬಾರಿ ನಿಮ್ಮನ್ನ ಪ್ರಶ್ನಿಸಿದಾಗ ನೀವು ಪ್ರಧಾನಿ ಹೆಸರನ್ನ ತರಬೇಡಿ ಎಂದು ಸಂಸದ ಪ್ರತಾಪ್‌ಸಿಂಹ ಸಿದ್ದರಾಮಯ್ಯರನ್ನ ಟೀಕಿಸಿದ್ದಾರೆ. ಜೊತೆಗೆ, ಏನಾದ್ರೂ ಇದ್ರೆ ನಮ್ಮನ್ನ ಕೇಳಿ. ನಾವು ಉತ್ತರಿಸುತ್ತೇವೆ ಎಂದು ಸಿದ್ದರಾಮಯ್ಯರ ವಿರುದ್ಧ ಹರಿಹಾಯ್ದಿದ್ದಾರೆ. ಈ ಮೂಲಕ PM Cares Fund ಲೆಕ್ಕ ಕೊಡಿ ಅಂತಾ ಪ್ರಧಾನಿ ಮೋದಿಯನ್ನ ಪ್ರಶ್ನಿಸಿದ್ದ ಸಿದ್ದರಾಮಯ್ಯಗೆ ಪ್ರತಾಪ್ ಸಿಂಹ ತಿರುಗೇಟು […]
ಮೈಸೂರು: ಮಾಜಿ ಸಿಎಂ ಸಿದ್ದರಾಮಯ್ಯರ ವಿರುದ್ಧ ಸಂಸದ ಪ್ರತಾಪ್ ಸಿಂಹ ಮತ್ತೊಮ್ಮೆ ಕಿಡಿಕಾರಿದ್ದಾರೆ. ಸಿದ್ದರಾಮಯ್ಯನವರೇ ನಿಮ್ಮ ಮಟ್ಟವನ್ನ ಪ್ರಧಾನಿಗೆ ಹೋಲಿಕೆ ಮಾಡಿಕೊಳ್ಳಬೇಡಿ. ಪ್ರತಿ ಬಾರಿ ನಿಮ್ಮನ್ನ ಪ್ರಶ್ನಿಸಿದಾಗ ನೀವು ಪ್ರಧಾನಿ ಹೆಸರನ್ನ ತರಬೇಡಿ ಎಂದು ಸಂಸದ ಪ್ರತಾಪ್‌ಸಿಂಹ ಸಿದ್ದರಾಮಯ್ಯರನ್ನ ಟೀಕಿಸಿದ್ದಾರೆ.
ಜೊತೆಗೆ, ಏನಾದ್ರೂ ಇದ್ರೆ ನಮ್ಮನ್ನ ಕೇಳಿ. ನಾವು ಉತ್ತರಿಸುತ್ತೇವೆ ಎಂದು ಸಿದ್ದರಾಮಯ್ಯರ ವಿರುದ್ಧ ಹರಿಹಾಯ್ದಿದ್ದಾರೆ. ಈ ಮೂಲಕ PM Cares Fund ಲೆಕ್ಕ ಕೊಡಿ ಅಂತಾ ಪ್ರಧಾನಿ ಮೋದಿಯನ್ನ ಪ್ರಶ್ನಿಸಿದ್ದ ಸಿದ್ದರಾಮಯ್ಯಗೆ ಪ್ರತಾಪ್ ಸಿಂಹ ತಿರುಗೇಟು ನೀಡಿದ್ದಾರೆ.
ಕೊವಿಡ್ ನಿಯಂತ್ರಣದಲ್ಲಿ ಅಕ್ರಮವಾಗಿದೆ ಅಂತಾ ಹೇಳ್ತಾರೆ. ಆದರೆ ದಾಖಲೆ ಪರಿಶೀಲನೆ ಮಾಡಲು ವಿಧಾನಸೌಧಕ್ಕೆ ಬನ್ನಿ ಅಂದರೆ ಬರೋದಿಲ್ಲ. ಆದರೆ PM Cares Fund ಲೆಕ್ಕವನ್ನ ಮಾತ್ರ ನೀವು ಕೇಳ್ತೀರಾ. ಇದು ಹೇಗೆ ಆಗುತ್ತೆ ಸಿದ್ದರಾಮಯ್ಯನವರೇ? ಅಂತಾ ಖಾರವಾಗಿ ಟೀಕಿಸಿದ್ದಾರೆ.
ನನಗೆ ಅದಕ್ಕಿಂತ ಖುಷಿಯಾಗಿದ್ದು ನಮ್ಮ ಸಂತೋಷ್ರ ಭಾಷಣವನ್ನ ಸಿದ್ದರಾಮಯ್ಯ ಕೇಳಿದ್ದು. ಅವರು ಮಹಾರಾಷ್ಟ್ರದಲ್ಲಿ ಮಾಜಿ ಸಿಎಂ ದೇವೇಂದ್ರ ಫಡ್ನವಿಸ್ ರೀತಿಯಲ್ಲಿ ನಮ್ಮ ರಾಜ್ಯದ ವಿರೋಧ ಪಕ್ಷಗಳಿಂದ ನಿರೀಕ್ಷೆ ಮಾಡಿದ್ದಾರೆ. ಅದನ್ನ ಸಕಾರಾತ್ಮಕವಾಗಿ ತೆಗೆದುಕೊಳ್ಳದೆ ಮಧ್ಯೆದಲ್ಲಿ PM Cares ಫಂಡ್ನ ಮಧ್ಯೆ ಎಳೆಯುತ್ತಿದ್ದೀರಾ? ಎಂದು ವಾಗ್ದಾಳಿ ನಡೆಸಿದ್ದಾರೆ.
ಎಂಥದೇ ಆಗಿರಲಿ, ನಿಮಗೆ ಧನ್ಯವಾದ ಬಾಸ್. ನಿಮ್ಮ ಸರಣಿ ಟ್ವೀಟ್ ಗಳನ್ನ ನೋಡಿದ್ರೆ ನಾವು ಮಾತ್ರವಲ್ಲ ನೀವೂ @blsanthosh ji ಭಾಷಣದ ಫ್ಯಾನು ಅಂತಾ ಗೊತ್ತಾಯ್ತು. https://t.co/Y5VDtF1qjr
— Pratap Simha (@mepratap) July 8, 2020
Published On - 1:46 pm, Thu, 9 July 20