ಸೋಂಕಿತ ಕಾನ್ಸ್​ಟೇಬಲ್​ಗೆ ಕರೆ ಮಾಡಿ ಆರೋಗ್ಯ ವಿಚಾರಿಸಿದ ಐಜಿ

ಕೋಲಾರ: ಕೊರೊನಾ ಮಹಾಮಾರಿಗೆ ಜನ ನಡುಗಿ ಹೋಗಿದ್ದಾರೆ. ಎಲ್ಲೆಲ್ಲೂ ಕೊರೊನಾ ಭಯ ಜನರನ್ನ ದುರ್ಬಲ ಮಾಡುತ್ತಿದೆ. ಸೋಂಕು ದೃಢಪಡುತ್ತಿದ್ದಂತೆ ಕೆಲ ಮಂದಿ ಮಹಾಮಾರಿಗೆ ಹೆದರಿ ಪ್ರಾಣ ಕಳೆದುಕೊಳ್ಳುವ ನಿರ್ಧಾರಕ್ಕೆ ಮುಂದಾಗುತ್ತಿರುವಂತಹ ಘಟನೆಗಳು ಸಹ ನಡೆಯುತ್ತಿವೆ. ಕೊರೊನಾ ದೇಹ ಸೇರುತ್ತಿದ್ದಂತೆ ಮಾನಸಿಕ ಖಿನ್ನತೆಗೆ ಒಳಗಾಗಿ ಚಿಕಿತ್ಸೆಗೆ ಸ್ಪಂದಿಸದೆ ಪರದಾಡುತ್ತಿದ್ದಾರೆ. ಕೊರೊನಾ ಸೋಂಕಿನಿಂದ ಬಳಲುತ್ತಿರುವ ಕೋಲಾರದ ಪೊಲೀಸ್ ಕಾನ್ಸ್ ಟೇಬಲ್​ಗೆ ದೂರವಾಣಿ‌ ಮೂಲಕ ಕರೆ ಮಾಡಿ ಐಜಿ ಧೈರ್ಯ ತುಂಬಿದ್ದಾರೆ. ಸದ್ಯ ಈ ವಿಡಿಯೋ ಈಗ ಎಲ್ಲೆಡೆ ವೈರಲ್ ಆಗಿದೆ. […]

ಸೋಂಕಿತ ಕಾನ್ಸ್​ಟೇಬಲ್​ಗೆ ಕರೆ ಮಾಡಿ ಆರೋಗ್ಯ ವಿಚಾರಿಸಿದ ಐಜಿ
Follow us
ಆಯೇಷಾ ಬಾನು
| Updated By:

Updated on:Jul 09, 2020 | 5:11 PM

ಕೋಲಾರ: ಕೊರೊನಾ ಮಹಾಮಾರಿಗೆ ಜನ ನಡುಗಿ ಹೋಗಿದ್ದಾರೆ. ಎಲ್ಲೆಲ್ಲೂ ಕೊರೊನಾ ಭಯ ಜನರನ್ನ ದುರ್ಬಲ ಮಾಡುತ್ತಿದೆ. ಸೋಂಕು ದೃಢಪಡುತ್ತಿದ್ದಂತೆ ಕೆಲ ಮಂದಿ ಮಹಾಮಾರಿಗೆ ಹೆದರಿ ಪ್ರಾಣ ಕಳೆದುಕೊಳ್ಳುವ ನಿರ್ಧಾರಕ್ಕೆ ಮುಂದಾಗುತ್ತಿರುವಂತಹ ಘಟನೆಗಳು ಸಹ ನಡೆಯುತ್ತಿವೆ. ಕೊರೊನಾ ದೇಹ ಸೇರುತ್ತಿದ್ದಂತೆ ಮಾನಸಿಕ ಖಿನ್ನತೆಗೆ ಒಳಗಾಗಿ ಚಿಕಿತ್ಸೆಗೆ ಸ್ಪಂದಿಸದೆ ಪರದಾಡುತ್ತಿದ್ದಾರೆ.

ಕೊರೊನಾ ಸೋಂಕಿನಿಂದ ಬಳಲುತ್ತಿರುವ ಕೋಲಾರದ ಪೊಲೀಸ್ ಕಾನ್ಸ್ ಟೇಬಲ್​ಗೆ ದೂರವಾಣಿ‌ ಮೂಲಕ ಕರೆ ಮಾಡಿ ಐಜಿ ಧೈರ್ಯ ತುಂಬಿದ್ದಾರೆ. ಸದ್ಯ ಈ ವಿಡಿಯೋ ಈಗ ಎಲ್ಲೆಡೆ ವೈರಲ್ ಆಗಿದೆ. ಕೇಂದ್ರ ವಲಯ ಐ.ಜಿ.ಪಿ. ಸೀಮಂತ್ ಕುಮಾರ್ ಸಿಂಗ್ ಕಾರ್ಯಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.

ಕೋಲಾರ ಟ್ರಾಫಿಕ್ ಮುಖ್ಯ ಪೇದೆ ಮೆಹಬೂಬ್​ಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಹೀಗಾಗಿ ಖುದ್ದು ಐಜಿ ದೂರವಾಣಿ‌ ಮೂಲಕ ಕರೆ ಮಾಡಿ ಕಾನ್ಸ್ ಟೇಬಲ್ ಆರೋಗ್ಯ ವಿಚಾರಿಸಿದ್ದಾರೆ. ಅಲ್ಲದೆ ಮುಖ್ಯಪೇದೆ ಜೊತೆಗೆ ಕುಟುಂಬಸ್ಥರ ಅರೋಗ್ಯ ವಿಚಾರಿಸಿದ್ದಾರೆ. ಆರೋಗ್ಯ ಕಾಪಾಡಿಕೊಳ್ಳುವಂತೆ ಕೆಲವು ಸಲಹೆಗಳನ್ನ ನೀಡಿದ್ದಾರೆ.

Published On - 2:29 pm, Thu, 9 July 20